ಸಂಗ್ರಹ ಚಿತ್ರ 
ದೇಶ

ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಸಾರ್ವಕಾಲಿಕ ದಾಖಲೆ!

ನ್ಯಾಯಬೆಲೆ, ನಷ್ಟ ಪರಿಹಾರ ಮತ್ತು ಕಡಿಮೆ ಬಡ್ಡಿದರದ ಸಾಲ ಸೇರಿದಂತೆ ಕೇಂದ್ರ ಸರ್ಕಾರದ ರೈತಸ್ನೇಹಿ ನೀತಿ ಮತ್ತು ರಾಜ್ಯ ಸರ್ಕಾರಗಳು ಇವುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದ ಕಾರಣ ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆಯಾಗಿದೆ.

ನವದೆಹಲಿ: ಭಾರತದ ಆಹಾರಧಾನ್ಯ ಉತ್ಪಾದನೆ ಶೇಕಡ 6.6ರಷ್ಟು ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದ್ದು, ಇದು ಕಳೆದ ಎಂಟು ವರ್ಷಗಳಲ್ಲಿ ದಾಖಲಾದ ಗರಿಷ್ಠ ಪ್ರಗತಿಯಾಗಿದೆ.

2024-25ನೇ ಆರ್ಥಿಕ ವರ್ಷದಲ್ಲಿ ಭಾರತದ ಆಹಾರಧಾನ್ಯ ಉತ್ಪಾದನೆ 354 ದಶಲಕ್ಷ ಟನ್ ತಲುಪುವ ನಿರೀಕ್ಷೆ ಇದೆ. ಪ್ರಮುಖ ಬೆಳೆಗಳಾದ ಭತ್ತ, ಗೋಧಿ, ಮೆಕ್ಕೆಜೋಳ, ನೆಲಗಡಲೆ ಮತ್ತು ಸೋಯಾಬಿನ್ ಪ್ರಸಕ್ತ ಬೆಳೆ ವರ್ಷದಲ್ಲಿ ದಾಖಲೆ ಉತ್ಪಾದನೆಯಾಗಿದೆ.

ನ್ಯಾಯಬೆಲೆ, ನಷ್ಟ ಪರಿಹಾರ ಮತ್ತು ಕಡಿಮೆ ಬಡ್ಡಿದರದ ಸಾಲ ಸೇರಿದಂತೆ ಕೇಂದ್ರ ಸರ್ಕಾರದ ರೈತಸ್ನೇಹಿ ನೀತಿ ಮತ್ತು ರಾಜ್ಯ ಸರ್ಕಾರಗಳು ಇವುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದ ಕಾರಣ ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಆಹಾರಧಾನ್ಯ ಉತ್ಪಾದನೆ ನಿರಂತರವಾಗಿ ಹೆಚ್ಚುತ್ತಿದೆ. ಬೇಳೆಕಾಳುಗಳು ಮತ್ತು ತೈಲಬೀಜಗಳ ಉತ್ಪಾದನೆ ಇನ್ನಷ್ಟು ಹೆಚ್ಚಬೇಕಿದೆ. ಇದಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ಒಟ್ಟಾರೆ ಆಹಾರಧಾನ್ಯ ಉತ್ಪಾದನೆಯ ಮೂರನೇ ಅಂದಾಜನ್ನು ಬಿಡುಗಡೆ ಮಾಡಿದ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದರು.

ಈ ಅಂದಾಜಿನ ಪ್ರಕಾರ ಗೋಧಿಯ ಅಂದಾಜು ಉತ್ಪಾದನೆ 2024-25ನೇ ವರ್ಷದಲ್ಲಿ ಏರಿಕೆಯಾಗಿ 117 ದಶಲಕ್ಷ ಟನ್ ತಲುಪಲಿದೆ. ಈ ಮೊದಲು 115 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದ್ದು, ಹಿಂದಿನ ವರ್ಷ 113 ದಶಲಕ್ಷ ಟನ್ ಉತ್ಪಾದನೆಯಾಗಿತ್ತು. ಕಳೆದ ವರ್ಷ 138 ದಶಲಕ್ಷ ಟನ್ ಇದ್ದ ಭತ್ತದ ಉತ್ಪಾದನೆ ಈ ಬಾರಿ 149 ದಶಲಕ್ಷ ಟನ್ಗೆ ಏರಲಿದ್ದು, 42 ದಶಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯಾಗುವ ನಿರೀಕ್ಷೆ ಇದೆ.

ಏಕದಳ ಧಾನ್ಯಗಳ ಉತ್ಪಾದನೆ 6 ಲಕ್ಷ ಟನ್ ಆಗಲಿದ್ದು, ಇದೂ ಕಳೆದ ವರ್ಷಕ್ಕಿಂತ ಅಧಿಕ. ಬೇಳೆಕಾಳುಗಳ ಉತ್ಪಾದನೆ ಕಳೆದ ವರ್ಷಕ್ಕಿಂತ ಒಂದು ದಶಲಕ್ಷ ಟನ್ ಹೆಚ್ಚಿ 25 ಲಕ್ಷ ಟನ್ ತಲುಪಲಿದೆ.

ತೈಲಬೀಜಗಳ ಉತ್ಪಾದನೆ 43 ದಶಲಕ್ಷ ಟನ್ ಆಗಲಿದ್ದು, ಕಳೆದ ವರ್ಷ ಇದು 40 ದಶಲಕ್ಷ ಟನ್ ಆಗಿತ್ತು. ಸೋಯಾಬಿನ್ ಹಾಗೂ ನೆಲಗಡಲೆ ಉತ್ಪಾದನೆ ಕ್ರಮವಾಗಿ 15.1 ದಶಲಕ್ಷ ಟನ್ ಹಾಗೂ 11.2 ದಶಲಕ್ಷ ಟನ್ ಆಗಲಿದ್ದು, ಇದು ಅನುಕ್ರಮವಾಗಿ ಕಳೆದ ವರ್ಷಕ್ಕಿಂತ 2.1 ದಶಲಕ್ಷ ಟನ್ ಮತ್ತು 1.7 ದಶಲಕ್ಷ ಟನ್ ಅಧಿಕ. ಅಂತೆಯೇ 450 ದಶಲಕ್ಷ ಟನ್ ಕಬ್ಬು ಉತ್ಪಾದನೆ ನಿರೀಕ್ಷಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 21.18 LMT ಮತ್ತು 17.16 LMT ಹೆಚ್ಚಾಗಿದೆ. ರೇಪ್ಸೀಡ್ ಮತ್ತು ಸಾಸಿವೆ ಉತ್ಪಾದನೆಯು 126.06 LMT ತಲುಪಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT