ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370ʼ ರದ್ದುಗೊಳಿಸಿರುವುದನ್ನು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಶ್ಲಾಘಿಸಿದ್ದು, ಈ ಕ್ರಮವು ಜಮ್ಮು ಮತ್ತು ಕಾಶ್ಮೀರದ ಸಮೃದ್ಧಿ ಮತ್ತು ಪ್ರಜಾಪ್ರಭುತ್ವದ ಪ್ರಗತಿಗೆ ನಾಂದಿ ಹಾಡಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಭಾರತದ ಸಂಸದೀಯ ನಿಯೋಗದ ಭಾಗವಾಗಿ ಇಂಡೋನೇಷ್ಯಾ ತೆರಳಿದ್ದ ಸಲ್ಮಾನ್ ಖುರ್ಷಿದ್ ಚಿಂತಕರ ಚಾವಡಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ, ಕಣಿವೆಯಲ್ಲಿ ನೆಲೆಸಿದ್ದ ದೀರ್ಘಕಾಲದ ಪ್ರತ್ಯೇಕತಾವಾದದ ಸಮಸ್ಯೆ ಕೊನೆಗೊಂಡಿತು. ಇದರಿಂದಾಗಿ ಈ ಪ್ರದೇಶದಲ್ಲಿ ಸಮೃದ್ಧಿ ಉಂಟಾಯಿತು ಎಂದು ಹೇಳಿದರು.
ಆರ್ಟಿಕಲ್ 370 ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರ ದೇಶದ ಉಳಿದ ಭಾಗಗಳಿಂದ ಪ್ರತ್ಯೇಕವಾಗಿದೆ ಎಂಬ ಭಾವನೆ ಇತ್ತು. ಆದರೆ, 370ನೇ ರದ್ದತಿ ಈ ಭಾವನೆಯನ್ನು ಹೋಗಲಾಗಿಡಿಸಿದ್ದಲ್ಲದೇ, ಕಣಿವೆಯ ಅಭಿವೃದ್ಧಿಗೂ ನೆರವಾಯಿತು. ಈಗ ಜನರಿಂದ ಆಯ್ಕೆಯಾದ ಸರ್ಕಾರ ಇದೆ. ಇದನ್ನು ಸಹಿಸದ ಕಿಡಿಗೇಡಿಗಳು ಸಮೃದ್ಧಿಯನ್ನು ಹಾಳುಮಾಡಲು ಬಯಸುತ್ತಿದ್ದಾರೆ ಅಂತ ಪಾಕ್ ವಿರುದ್ಧ ಕಿಡಿಕಾರಿದರು.
ಈ ನಡುವೆ ಖುರ್ಷಿದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್ಟಿಕಲ್ 370 ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದ (ಜನರು ಪ್ರಗತಿ ಮತ್ತು ರಾಜಕೀಯ ಪ್ರಕ್ರಿಯೆಯ ಭಾಗವಾಗಿದ್ದಾರೆ. ನೆಲಮಟ್ಟದ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಯಾರಾದರೂ ಕಾಂಗ್ರೆಸ್‌ನಂತೆ ಸುಳ್ಳು ಪ್ರಚಾರವನ್ನು ಹರಡುವುದಿಲ್ಲ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದ ಜನರು ಪ್ರಗತಿ, ಸಮೃದ್ಧಿ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲುದಾರರಾಗಿದ್ದಾರೆ ಎಂಬುದು ನಿಜ. ಹಿಂದೆಂದೂ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಈಗ ನಡೆದಿವೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳೂ ಕೂಡ ನಡೆದಿವೆ. ಇದರೊಂದಿಗೆ, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರ ಪ್ರಾಬಲ್ಯ ಕುಸಿದಿದೆ. ಇದೀಗ ಕಾಂಗ್ರೆಸ್ ಕಾಂಗ್ರೆಸ್ ಸಲ್ಮಾನ್ ಖುರ್ಷಿದ್ ಅವರನ್ನೂ "ಸೂಪರ್ ವಕ್ತಾರ" ಎಂದು ಹೆಸರಿಸುವುದಿಲ್ಲ ಎಂದು ಆಶಿಸುತ್ತೇವೆಂದು ಟೀಕಿಸಿದ್ದಾರೆ.
370 ನೇ ವಿಧಿ ಹೊರಗಿನವರಿಗೆ ಜಮ್ಮು ಮತ್ತು ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗಿದೆ ಎಂಬ ಭಾವನೆಯನ್ನು ನೀಡಿತ್ತು. ಆದರೆ, ರದ್ದತಿ ಬಳಿಕ ಭಾರತಕ್ಕೆ ಅವಿಭಾಜ್ಯವಾಗಿದೆ ಎಂಬುದನ್ನು ಸಾಬೀತುಪಡಿಸಿತು. ಇದೀಗ 370 ನೇ ವಿಧಿ ರದ್ಧತಿಯನ್ನು ಸಲ್ಮಾನ್ ಖುರ್ಷಿದ್ ಶ್ಲಾಘಿಸಿದ್ದು, ಈಗಲಾದರೂ ಆರ್ಟಿಕಲ್ 370 ಜಾರಿಗೆ ತಂದು ತಮ್ಮ ಕುಟುಂಬ ತಪ್ಪು ಮಾಡಿತು ಎಂಬುದನ್ನು ರಾಹುಲ್ ಗಾಂಧಿ ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.