ಪ್ರಾತಿನಿಧಿಕ ಚಿತ್ರ 
ದೇಶ

ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಕಠಿಣ ಕಾರಾಗೃಹ ಶಿಕ್ಷೆ!

ಮಹಿಳೆಯನ್ನು 2021ರ ಏಪ್ರಿಲ್ 5 ರಂದು ಥಾಣೆಯ ವ್ಯಾಗ್ಲೆ ಎಸ್ಟೇಟ್ ಪ್ರದೇಶದ ಪಾಸ್‌ಪೋರ್ಟ್ ಕಚೇರಿ ಬಳಿಯ ಹೋಟೆಲ್‌ನಲ್ಲಿ ಇಬ್ಬರು ಬಾಲಕಿಯರೊಂದಿಗೆ ಇದ್ದ ವೇಳೆ ಬಂಧಿಸಲಾಯಿತು.

ಥಾಣೆ: ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ನಗರದ ವಿಶೇಷ ನ್ಯಾಯಾಲಯ 40 ವರ್ಷದ ಗೃಹಿಣಿಯೊಬ್ಬರಿಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಮೇ 30ರಂದು ನೀಡಿರುವ ಆದೇಶದಲ್ಲಿ, ವಿಶೇಷ ಪೋಕ್ಸೊ ಕಾಯ್ದೆಯ ನ್ಯಾಯಾಧೀಶ ಡಿಎಸ್ ಎ ದೇಶ್‌ಮುಖ್ ಅವರು ಮುಂಬೈನ ಗೋರೆಗಾಂವ್ ಪ್ರದೇಶದ ನಿವಾಸಿಯಾದ ಅಪರಾಧಿಗೆ 14,000 ರೂ. ದಂಡವನ್ನು ವಿಧಿಸಿದ್ದಾರೆ.

ವಿಶೇಷ ಸಾರ್ವಜನಿಕ ಅಭಿಯೋಜಕಿ ರೇಖಾ ಹಿವ್ರಾಲೆ ಅವರ ಪ್ರಕಾರ, ವಿಚಾರಣೆಯ ಸಮಯದಲ್ಲಿ ಒಟ್ಟು ಏಳು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು.

ಮುಂಬೈ ನಿವಾಸಿಯಾದ ಮಹಿಳೆಯನ್ನು 2021ರ ಏಪ್ರಿಲ್ 5 ರಂದು ಥಾಣೆಯ ವ್ಯಾಗ್ಲೆ ಎಸ್ಟೇಟ್ ಪ್ರದೇಶದ ಪಾಸ್‌ಪೋರ್ಟ್ ಕಚೇರಿ ಬಳಿಯ ಹೋಟೆಲ್‌ನಲ್ಲಿ ಇಬ್ಬರು ಬಾಲಕಿಯರೊಂದಿಗೆ ಇದ್ದ ವೇಳೆ ಬಂಧಿಸಲಾಯಿತು.

'ಓರ್ವ ಅಪ್ರಾಪ್ತೆ-A' ಮತ್ತು ಮಹಿಳೆಯ ಮಗಳು ಸ್ನೇಹಿತರಾಗಿದ್ದರು. ಬಡ ಕುಟುಂಬದಿಂದ ಬಂದ ಅಪ್ರಾಪ್ತೆಗೆ ವೇಶ್ಯಾವಾಟಿಕೆ ಮಾಡಿದರೆ ಉತ್ತಮ ಹಣ ಸಿಗುತ್ತದೆ ಎಂದು ಮಹಿಳೆ ಹೇಳಿದ್ದಾಳೆ. ನಂತರ, ಮಹಿಳೆ ಆಕೆಯನ್ನು ಗ್ರಾಹಕರ ಬಳಿಗೆ ಕಳುಹಿಸುತ್ತಿದ್ದಳು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ನ್ಯಾಯಾಲಯದ ದಾಖಲೆಗಳಲ್ಲಿ 'ಮೈನರ್ ಗರ್ಲ್-ಎಂ' ಎಂದು ಗುರುತಿಸಲಾದ ಎರಡನೇ ಸಂತ್ರಸ್ತೆಯನ್ನು ಅದೇ ರೀತಿ ಬಳಸಿಕೊಳ್ಳಲಾಗಿದೆ ಎಂದು ದೃಢಪಡಿಸಿದ್ದಾಳೆ.

ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಧೀಶರು, ಆರೋಪಿಗೆ ಮೃದುತ್ವ ತೋರಿಸಲು ಇದು ಸೂಕ್ತ ಪ್ರಕರಣವಲ್ಲ ಎಂದಿದ್ದು, ಮಹಿಳೆಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ