ಪ್ರಿಯಾಂಕಾ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ 
ದೇಶ

ಬಿಹಾರ ವಿಧಾನಸಭಾ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಲಿಸ್ಟ್ ನಲ್ಲಿ ಖರ್ಗೆ, ಪ್ರಿಯಾಂಕಾ, ರಾಹುಲ್ ಗಾಂಧಿ

ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಪ್ರಮುಖವಾಗಿ ಹೊಂದಿರುವ ವಿರೋಧ ಪಕ್ಷ ‘ಇಂಡಿಯಾ’ ಬಣವು ಗುರುವಾರ ಬಿಹಾರ ಚುನಾವಣೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ.

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತಕ್ಕೆ 40 ಸ್ಟಾರ್ ಪ್ರಚಾರಕರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಕನ್ಹಯ್ಯ ಕುಮಾರ್ ಹಾಗೂ ಸ್ವತಂತ್ರ ಸಂಸದ ಪಪ್ಪು ಯಾದವ್ ಸೇರಿದ್ದಾರೆ.

ಬಿಹಾರದ ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲಾವರು, ಬಿಹಾರ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ರಾಮ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ಭೂಪೇಶ್ ಬಘೇಲ್, ಸಚಿನ್ ಪೈಲಟ್, ರಣದೀಪ್ ಸುರ್ಜೇವಾಲಾ ಮತ್ತು ಸೈಯದ್ ನಾಸೀರ್ ಹುಸೇನ್, ಹಾಗೆಯೇ ಹಿರಿಯ ನಾಯಕರಾದ ಅಶೋಕ್ ಗೆಹಲೋತ್, ತಾರಿಕ್ ಅನ್ವರ್, ಗೌರವ್ ಗೊಗೊಯ್, ಮೊಹಮ್ಮದ್ ಜಾವೇದ್ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ ಕೂಡ ಪಟ್ಟಿಯಲ್ಲಿದ್ದಾರೆ.

ಬಿಹಾರ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಪ್ರಮುಖವಾಗಿ ಹೊಂದಿರುವ ವಿರೋಧ ಪಕ್ಷ ‘ಇಂಡಿಯಾ’ ಬಣವು ಗುರುವಾರ ಬಿಹಾರ ಚುನಾವಣೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್, ಅಧೀರ್ ರಂಜನ್ ಚೌಧರಿ, ಮೀರಾ ಕುಮಾರ್, ಪ್ರಮೋರ್ದ್ ತಿವಿರಿ, ಅಜಯ್ ರೈ, ಇಮ್ರಾನ್ ಪ್ರತಾಪ್‌ಗಢಿ, ಪವನ್ ಖೇರಾ, ಶಕೀಲ್ ಅಹ್ಮದ್, ರಂಜೀತ್ ರಂಜನ್, ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್, ಜಿಗ್ನೇಶ್ ಮೇವಾನಿ, ಅನಿಲ್ ಜೈಹಿಂದ್ ಮತ್ತು ರಾಜೇಂದ್ರ ಪಾಲ್ ಗೌತಮ್ ಕೂಡ ಪಕ್ಷ ಬಿಡುಗಡೆ ಮಾಡಿದ ಎರಡನೇ ಹಂತದ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ಭೀಕರ ದುರಂತ: ಪ್ರಯಾಣಿಕ ಬಸ್ ಗೆ ಟ್ರಕ್ ಢಿಕ್ಕಿ, 18 ಮಂದಿ ಸಾವು

ಮಹಿಳಾ ವಿಶ್ವಕಪ್ ಫೈನಲ್: ದ.ಆಫ್ರಿಕಾದಿಂದ ಗೆಲುವು ಕಸಿದ ಅದ್ಭುತ ಕ್ಯಾಚ್...! Video

Cricket: ವಿಶ್ವ ಚಾಂಪಿಯನ್ ಭಾರತ ವನಿತೆಯರ ತಂಡಕ್ಕೆ ಬಹುಮಾನ ಘೋಷಿಸಿದ BCCI, ಮೊತ್ತ ಎಷ್ಟು ಗೊತ್ತಾ?

ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: ಕನಿಷ್ಟ 7 ಸಾವು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು

Cricket: ವಿಶ್ವ ಚಾಂಪಿಯನ್ ಭಾರತ ವನಿತೆಯರಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಶ್ಲಾಘನೆ.. ಯಾರು ಏನು ಹೇಳಿದರು?

SCROLL FOR NEXT