ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ಅಫ್ಘಾನಿಸ್ತಾನದಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿದೆ. ಭೂಕಂಪ ಸಂಭವಿಸಿ ಅಪಾರ ಸಾವು ನೋವು ಉಂಟಾಗುತ್ತಿದೆ.
ಉತ್ತರ ಅಫ್ಘಾನಿಸ್ತಾನದಲ್ಲಿ ಸೋಮವಾರ ಸಂಜೆ ಸಂಭವಿಸಿದ 6.3 ತೀವ್ರತೆಯ ಭೂಕಂಪದಲ್ಲಿ 20 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಡಾಕ್ಷಣ್‌ನಲ್ಲಿ 800ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ.
ಸೋಮವಾರ ಮುಂಜಾನೆ ಸಂಭವಿಸಿದ ಭೂಕಂಪವು ಡಜನ್ಗಟ್ಟಲೆ ಮನೆಗಳು ಮತ್ತು ಅಂಗಡಿಗಳನ್ನು ನಾಶಪಡಿಸಿತು. ದೊಡ್ಡ ದೊಡ್ಡ ಗುಡ್ಡಗಳು ಕುಸಿದು ಬಿದ್ದಿವೆ. ಇದರಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಬಡಾಕ್ಷಣ್ ಎಂಬ ಪ್ರದೇಶದಲ್ಲಿ ಭೂಕಂಪದ ಅಬ್ಬರಕ್ಕೆ 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಧರಾಶಾಯಿಯಾಗಿವೆ.
ಜನರು ನಿರಾಶ್ರಯರಾಗಿದ್ದಾರೆ, ರಸ್ತೆ ಸಂಚಾರ ನಿರ್ಬಂಧಗೊಂಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಸೆಪ್ಟೆಂಬರ್ ನಂತರ ಭಾರತವು ಮಾನವೀಯ ನೆರವು ನೀಡಿದ ನಂತರ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಭೂಕಂಪ ಪೀಡಿತ ಅಪ್ಘನ್ ಗೆ ಭಾರತ ನೆರವಿನ ಭರವಸೆ ನೀಡಿವೆ. ಭೂಕಂಪದ ನಂತರ ಉತ್ತರ ಅಫ್ಘಾನಿಸ್ತಾನಕ್ಕೆ ಭಾರತ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.
ಭೂಕಂಪದ ನಂತರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿ, ಸಂತಾಪ ಸೂಚಿಸಿದರು ನಿರಂತರ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ.
ಭೂಕಂಪ ಸಂತ್ರಸ್ತರಿಗೆ ಭಾರತೀಯ ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಲಾಗುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ಔಷಧಿಗಳನ್ನು ರವಾನಿಸಲಾಗುವುದು ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಂಚಿಕೊಂಡ ಛಾಯಾಚಿತ್ರಗಳು ಕಾಬೂಲ್‌ನಲ್ಲಿ ಭಾರತೀಯ ನೆರವು ತಲುಪಿಸಲಾಗುತ್ತಿರುವುದನ್ನು ತೋರಿಸಿವೆ, ತಾಲಿಬಾನ್ ಆಡಳಿತಕ್ಕೆ ಔಪಚಾರಿಕ ರಾಜತಾಂತ್ರಿಕ ಮಾನ್ಯತೆ ಇಲ್ಲದಿದ್ದರೂ ಅಫ್ಘಾನಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಭಾರತ ಸಿದ್ಧವಾಗುತ್ತಿದೆ.
ಭಾರತವು 15 ಟನ್ ಆಹಾರ ಸಾಮಾಗ್ರಿಗಳನ್ನು ರವಾನಿಸಿದೆ, ಅಗತ್ಯ ಔಷಧಗಳು ಮತ್ತು ಆಹಾರ ಪದಾರ್ಥಗಳ ಹೆಚ್ಚುವರಿ ಸರಕುಗಳು ಶೀಘ್ರದಲ್ಲೇ ತಲುಪಲಿವೆ ಎಂದು ನಿರೀಕ್ಷಿಸಲಾಗಿದೆ. ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಸಮುದಾಯಗಳನ್ನು, ವಿಶೇಷವಾಗಿ ಸಮಂಗನ್ ಪ್ರಾಂತ್ಯದಲ್ಲಿ, ಹೆಚ್ಚಿನ ಪರಿಹಾರ ನೀಡುವುದು ಪ್ರಮುಖ ಗುರಿಯಾಗಿದೆ ಎಂದು ಅಪ್ಘನ್ ಅಧಿಕಾರಿಗಳು ತಿಳಿಸಿದ್ದಾರೆ.
2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಭಾರತವು ಅಫ್ಘಾನಿಸ್ತಾನಕ್ಕೆ ಪ್ರಮುಖ ಮಾನವೀಯ ನೆರವು ನೀಡುವ ಪೂರೈಕೆದಾರನಾಗಿ ಉಳಿದಿದೆ, ವಿವಿಧ ಮಾನವೀಯ ಮಾರ್ಗಗಳ ಮೂಲಕ ಗೋಧಿ, ಔಷಧಿಗಳು, ಲಸಿಕೆಗಳು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸುತ್ತಿದೆ.