ಸ್ನೇಹ ರಾಣಾ 
ದೇಶ

ಸ್ನೇಹ ರಾಣಾ ಜೊತೆ ಉತ್ತರಾಖಂಡ ಸಿಎಂ ಮಾತುಕತೆ; 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಣೆ

ಬುಧವಾರ ರಾತ್ರಿ ಮುಖ್ಯಮಂತ್ರಿ ಧಾಮಿ ರಾಣಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದರು.

ಡೆಹ್ರಾಡೂನ್: ಉತ್ತರಾಖಂಡದ ಹೆಣ್ಣುಮಕ್ಕಳು ದೇಶವನ್ನು ಹೇಗೆ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ ಎಂಬುದಕ್ಕೆ ಸ್ನೇಹ ರಾಣಾ ಒಂದು ಉಜ್ವಲ ಉದಾಹರಣೆ ಎಂದು ವಿಶ್ವಕಪ್ ಗೆಲುವಿನ ನಂತರ ಕ್ರಿಕೆಟ್ ಆಟಗಾರ್ತಿಯೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಹೇಳಿದ್ದಾರೆ ಮತ್ತು ರಾಣಾಗೆ 50 ಲಕ್ಷ ರೂ.ಗಳ ಅನುದಾನವನ್ನು ಘೋಷಿಸಿದ್ದಾರೆ.

ಬುಧವಾರ ರಾತ್ರಿ ಮುಖ್ಯಮಂತ್ರಿ ಧಾಮಿ ರಾಣಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದರು.

'ಸ್ನೇಹಾ ರಾಣಾ ತಮ್ಮ ಕಠಿಣ ಪರಿಶ್ರಮ, ದೃಢನಿಶ್ಚಯ ಮತ್ತು ಪ್ರತಿಭೆಯ ಮೂಲಕ ವಿಶ್ವ ವೇದಿಕೆಯಲ್ಲಿ ಉತ್ತರಾಖಂಡಕ್ಕೆ ಕೀರ್ತಿ ತಂದಿದ್ದಾರೆ. ಅವರ ಯಶಸ್ಸು ನಮ್ಮ ಯುವ ಜನತೆಗೆ, ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ. ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಅತ್ಯುತ್ತಮ ಸೌಲಭ್ಯಗಳು ಮತ್ತು ಪ್ರೋತ್ಸಾಹವನ್ನು ಒದಗಿಸಲು ಬದ್ಧವಾಗಿದೆ' ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ ರಾಣಾ, ದೇಶ ಮತ್ತು ಉತ್ತರಾಖಂಡಕ್ಕೆ ಕೀರ್ತಿ ತರಲು ಶ್ರಮಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.

ಭಾರತ ಮಹಿಳಾ ಕ್ರಿಕೆಟ್ ತಂಡವು ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ದೇಶಕ್ಕೆ ಮೊದಲ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಟ್ಟಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ 2025: ಈವರೆಗೂ ಶೇ.43 ರಷ್ಟು ಮತದಾನ, ನ. 14 ರಂದು ಹೊಸ ಸರ್ಕಾರ ರಚನೆ ಎಂದ ತೇಜಸ್ವಿ ಯಾದವ್

ಬೆಳಗಾವಿ: MES ಮುಖಂಡನ ಜೊತೆಗಿನ ಸೆಲ್ಫಿ ಸಂಕಷ್ಟ; CPI ಜೆ.ಎಂ ಕಾಲಿಮಿರ್ಚಿ ಎತ್ತಂಗಡಿ!

T20 WorldCup 2026: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್..!, ಟೂರ್ನಿ ಆಯೋಜನೆಗೆ ಬಿಸಿಸಿಐನಿಂದ 5 ನಗರಗಳ ಆಯ್ಕೆ!

Bihar Elections 2025: ಜಾತಿಯೇ ನಿರ್ಣಾಯಕ, ಫಲಿತಾಂಶದ ಕೀಲಿ ಕೈ, ಯಾರಿಗೆ ಯಾರ ಬೆಂಬಲ?

4ನೇ ಟಿ20 ಪಂದ್ಯ: ಆಸ್ಟ್ರೇಲಿಯಾಗೆ 168 ರನ್ ಗುರಿ ನೀಡಿದ ಭಾರತ

SCROLL FOR NEXT