ಸಾಂದರ್ಭಿಕ ಚಿತ್ರ 
ದೇಶ

Lucknow: 7ನೇ ತರಗತಿ ವಿದ್ಯಾರ್ಥಿನಿಯ ಹೊಟೆಲ್ ರೂಂನಲ್ಲಿ ಕೂಡಿ ಹಾಕಿ, Insta ಫ್ರೆಂಡ್ ನಿಂದ 2 ದಿನ ನಿರಂತರ ಅತ್ಯಾಚಾರ!

ಅಪ್ರಾಪ್ತ ಬಾಲಕಿಯ ಇನ್ಸ್ಟಾಗ್ರಾಮ್ ಸ್ನೇಹಿತನೇ ಆಕೆಯ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ದೌರ್ಜನ್ಯವೆಸಗಿದ್ದಾನೆ..

ಲಖನೌ: ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮುಂದುವರೆದಿದ್ದು, ಉತ್ತರ ಪ್ರದೇಶದಲ್ಲಿ ಇನ್ಸ್ಟಾಗ್ರಾಮ್ ಫ್ರೆಂಡ್ ನಿಂದಲೇ 7ನೇ ತರಗತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಈ ಧಾರುಣ ಘಟನೆ ನಡೆದಿದ್ದು, 7ನೇ ತರಗತಿ ವಿದ್ಯಾರ್ಥಿನಿಯನ್ನು ಆಕೆಯ ಇನ್ಸ್ಟಾಗ್ರಾಮ್ ಸ್ನೇಹಿತನೇ ಆತನ ಸ್ನೇಹಿತರ ಜೊತೆ ಸೇರಿ ಹೊಟೆಲ್ ರೂಮಿನಲ್ಲಿ ಕೂಡಿಹಾಕಿ ನಿರಂತರ 2 ದಿನ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಈ ಸಂಬಂಧ ಸಂತ್ರಸ್ಥೆ ತಾಯಿ ದೂರು ನೀಡಿದ್ದು, ದೂರಿನಲ್ಲಿ ಅಪ್ರಾಪ್ತ ಬಾಲಕಿಯ ಇನ್ಸ್ಟಾಗ್ರಾಮ್ ಸ್ನೇಹಿತನೇ ಆಕೆಯ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಭೇಟಿಯಾಗಬೇಕು ಎಂದು ಕರೆದು ಅತ್ಯಾಚಾರವೆಸಗಿದ ದೂರ್ತ

ದೂರಿನಲ್ಲಿರುವಂತೆ ಸಂತ್ರಸ್ಥೆಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಮಲ್ ಯಾದವ್ ಎಂಬಾತನ ಪರಿಚಯವಾಗಿತ್ತು. ಬಳಿಕ ಇಬ್ಬರೂ ಚಾಟ್ ಮಾಡುತ್ತಿದ್ದರು. ಬಳಿಕ ಕರೆ ಮೂಲಕ ಮಾತನಾಡುತ್ತಿದ್ದರು. ತನ್ನ ಬಣ್ಣದ ಮಾತುಗಳಿಂದ ಆಕೆಯನ್ನು ಪುಸಲಾಯಿಸಿದ್ದ ಎಂದು ಆರೋಪಿಸಿದ್ದಾರೆ.

ಅಲ್ಲದೆ ಇದೇ ನವೆಂಬರ್ 2 ರಂದು, ವಿಮಲ್ ಅಪ್ರಾಪ್ತ ವಯಸ್ಕ ಸಂತ್ರಸ್ಥೆಯನ್ನು ಭೇಟಿಯಾಗಲು ಕೇಳಿಕೊಂಡ. ಅದರಂತೆ ಸಂತ್ರಸ್ಥೆ ಕೂಡ ಭೇಟಿಯಾಗಲು ಒಪ್ಪಿಗೆ ಸೂಚಿಸಿದ್ದಳು. ಅದರಂತೆ ನಿಗಧಿತ ಸ್ಥಳಕ್ಕೆ ಹೋದಾಗ ಆರೋಪಿ ವಿಮಲ್ ತನ್ನ ಸ್ಕಾರ್ಪಿಯೋ ಕಾರಿನೊಳಗೆ ಕೂರಿಸಿಕೊಂಡು ಹೊಟೆಲ್ ಗೆ ಕರೆತಂದಿದ್ದಾನೆ. ಆದರೆ ಅಷ್ಟು ಹೊತ್ತಿಗಾಗಲೇ ಹೊಟೆಲ್ ನಲ್ಲಿ ಆರೋಪಿಯ ಇತರೆ ಸ್ನೇಹಿತರಾದ ಪಿಯೂಷ್ ಮಿಶ್ರಾ ಮತ್ತು ಶುಭಮ್ ಶುಕ್ಲಾ ಎಂಬುವವರು ಇದ್ದರು.

ರೂಮಿಗೆ ಹೋಗುತ್ತಲೇ ಫೋನ್ ಕಿತ್ತುಕೊಂಡ ಆರೋಪಿಗಳು

ಇನ್ನು ಸಂತ್ರಸ್ಥ ಬಾಲಕಿ ಹೊಟೆಲ್ ರೂಮಿಗೆ ಹೋಗುತ್ತಲೇ ಆರೋಪಿಗಳು ಆಕೆಯ ಫೋನ್ ಕಿತ್ತುಕೊಂಡು ಕೋಣೆಯಲ್ಲಿ ಬಂಧಿಸಿದ್ದಾರೆ. ಬಳಿಕ ಆಕೆಯ ಮೇಲೆ ಒಬ್ಬೊಬ್ಬರಾಗಿ ನಿರಂತರವಾಗಿ 2 ದಿನ ಅತ್ಯಾಚಾರ ಎಸಗಿದ್ದಾರೆ. ಎರಡು ದಿನಗಳ ನಂತರ, ಆರೋಪಿಗಳು ಬಾಲಕಿಯನ್ನು ಆಕೆಯ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ಈ ಘಟನೆಯಿಂದ ಬಾಲಕಿಯ ತಾಯಿ, ಅಪ್ರಾಪ್ತ ಬಾಲಕಿ ಆಘಾತಕ್ಕೊಳಗಾಗಿದ್ದಾಳೆ. 2 ದಿನಗಳ ಬಳಿಕ ಮನೆಗೆ ಬಂದ ಮಗಳನ್ನು ವಿಚಾರಿಸಿದಾಗ ಆಕೆಯ ನಡೆದ ದೌರ್ಜನ್ಯ ವಿವರಿಸಿದ್ದಾಳೆ. ಅಲ್ಲದೆ ತಾನು ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದಾಗ ಆರೋಪಿಗಳು ತನ್ನನ್ನು ಥಳಿಸಿದರು ಎಂದು ಅಪ್ರಾಪ್ತ ಬಾಲಕಿ ತನ್ನ ತಾಯಿಗೆ ಅಳುತ್ತಾ ತಿಳಿಸಿದ್ದಾಳೆ.

ವಿಡಿಯೋ ರೆಕಾರ್ಡ್

ಇನ್ನು ಆರೋಪಿಗಳು ಹಲ್ಲೆಯ ಮತ್ತು ಅತ್ಯಾಚಾರ ಕೃತ್ಯವನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ವಿಚಾರ ಬಹಿರಂಗ ಪಡಿಸಿದರೆ ಈ ವೀಡಿಯೊಗಳನ್ನು ಸಾಮಾಜಿಕ ಜಾಲಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಪೋಕ್ಸೋ ಪ್ರಕರಣ ದಾಖಲು

ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಿಯೂಷ್ ಮತ್ತು ಶುಭಂ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಾಲಕಿಯ ತಾಯಿ ನಿನ್ನೆ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ನಾವು ಸಂಬಂಧಿತ ವಿಭಾಗಗಳ ಅಡಿಯಲ್ಲಿ ದೂರು ದಾಖಲಿಸಿದ್ದೇವೆ ಮತ್ತು ಇಬ್ಬರು ಆರೋಪಿಗಳಾದ ಪಿಯೂಷ್ ಮತ್ತು ಶುಭಂ ಅವರನ್ನು ವಶಕ್ಕೆ ಪಡೆದಿದ್ದೇವೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರತಿಭಟನೆಗೆ ಮಣಿದ ಸರ್ಕಾರ; ಕಬ್ಬಿಗೆ 3300 ರೂ. ನಿಗದಿ; ರೈತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಸಿಡಿದೆದ್ದ ರೈತರು; ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ!

ಕಣ್ಣಿಗೆ ಖಾರದ ಪುಡಿ ಎರಚಿ ಮಹಿಳೆ ಕಳ್ಳತನಕ್ಕೆ ಯತ್ನ, 20 ಸೆಕೆಂಡ್ ನಲ್ಲಿ 18 ಬಾರಿ 'ಕಪಾಳಮೋಕ್ಷ' ಮಾಡಿದ ಚಿನ್ನದಂಗಡಿ ಮಾಲೀಕ! Video

ಕಬ್ಬು ಬೆಳೆಗಾರರ ಕಿಚ್ಚು: ಕೇಂದ್ರ ವಿರುದ್ಧ ಕೈತೋರಿಸಿ ಸಿದ್ದರಾಮಯ್ಯ ಈಗ ಪಲಾಯನವಾದಿಯಾಗಿದ್ದಾರೆ - ಪ್ರಹ್ಲಾದ್‌ ಜೋಶಿ

ಸಿದ್ದರಾಮಯ್ಯ ಕೆಳಗಿಳಿಸುವುದು ಅಷ್ಟು ಸುಲಭವಲ್ಲ, ಅವರ ಸಾಮರ್ಥ್ಯದ ಬಗ್ಗೆ ನಮಗಷ್ಟೇ ಗೊತ್ತು: ಎಚ್‌ಡಿಕೆ

SCROLL FOR NEXT