ಕೃಷ್ಣಗಿರಿ: ಮಹಿಳೆಯೊಬ್ಬಳ ಸಲಿಂಗ ಕಾಮದ ದಾಹಕ್ಕೆ 5 ತಿಂಗಳ ಮಗು ಬಲಿಯಾಗಿರುವ ಘಟನೆ ತಡವಾಗಿ ಬಹಿರಂಗವಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಭಾರತಿ (26) ತಾನೇ ಹೆತ್ತ ಮಗುವನ್ನು ಹತ್ಯೆ ಮಾಡಿರುವ ಮಹಿಳೆಯಾಗಿದ್ದು, ಸ್ನೇಹಿತೆ ಸುಮಿತ್ರ ಜೊತೆ ಮಾತನಾಡುವುದಕ್ಕೆ ಮಗು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಳೆ.
ಭಾರತಿ ತನ್ನ ಗಂಡ ಕೆಲಸಕ್ಕೆ ಹೋಗ್ತಿದ್ದಂತೆ ಸ್ನೇಹಿತೆ ಸುಮಿತ್ರ ಮನೆಗೆ ತೆರಳುತ್ತಿದ್ದಳು. ಆದರೆ ಮಗು ಹುಟ್ಟಿದ ಬಳಿಕ ಸಂಪರ್ಕಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸುಮಿತ್ರ ಕೊರಗುತ್ತಿದ್ದಳಂತೆ. ದಿನಕಳೆದಂತೆ ಮಗುವಿನಿಂದಾಗಿಯೇ ತನ್ನಿಂದ ಭಾರತಿ ದೂರವಾಗುತ್ತಿದ್ದಾಳೆ ಎಂದು ಭಾವಿಸಿದ್ದ ಸುಮಿತ್ರ, ಮಗುವನ್ನು ಹತ್ಯೆ ಮಾಡುವಂತೆ ಭಾರತಿಗೆ ಒತ್ತಡ ಹೇರಿದ್ದಳು. ಸುಮಿತ್ರ ಮಾತು ಕೇಳಿ ಭಾರತಿ ಮಗುವನ್ನೇ ಕೊಲ್ಲುವ ನಿರ್ಧಾರ ಮಾಡಿದ್ದಾಳೆ.
ಸುರೇಶ್ ಮತ್ತು ಭಾರತಿ ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿತ್ತು. ಆದರೂ ಈಕೆ ಅದೇ ಪ್ರದೇಶದಲ್ಲಿದ್ದ ಯುವತಿ ಸುಮಿತ್ರಾ ಜೊತೆ ಸಂಬಂಧ ಹೊಂದಿದ್ದಳು. ಇವರಿಬ್ಬರ ಸ್ನೇಹ ಸಲಿಂಗ ಕಾಮಕ್ಕೆ ತಿರುಗಿತ್ತು. ಪತಿ ಇಲ್ಲದೆ ಇದ್ದಾಗ ಮನೆಯಲ್ಲಿ ಸೇರುತ್ತಿದ್ದರಂತೆ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಸಲಿಂಗ ಕಾಮಿಗಳಾಗಿದ್ದರು ಎನ್ನಲಾಗ್ತಿದೆ.
5 ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ಆದಾಗಿನಿಂದ ಭಾರತಿ ತನ್ನನ್ನ ದೂರ ಮಾಡ್ತಿದ್ದಾಳೆಂದು ಸುಮಿತ್ರಾ ಜಗಳವಾಡುತ್ತಿದ್ದಳು. ಇಬ್ಬರ ಜಗಳಕ್ಕೆ ಕಾರಣವಾದ ಮಗುವನ್ನ ಕೊಲೆ ಮಾಡುವಂತೆ ಸುಮಿತ್ರಾ ಸಲಹೆ ನೀಡಿದ್ದಳು ಈ ಸಲಹೆಯನ್ನು ಕೇಳಿದ ಭಾರತಿ ಮಗುವನ್ನು ಹತ್ಯೆ ಮಾಡಿ, ಹಾಲುಕುಡಿಯುವಾಗ ನೆತ್ತಿಗೇರಿ ಮಗು ಮೃತಪಟ್ಟಿದೆ ಎಂದು ಮನೆಯವರನ್ನು ನಂಬಿಸಿದ್ದಳು. ಬಳಿಕ ಮಗುವಿನ ಅಂತ್ಯಸಂಸ್ಕಾರವೂ ನಡೆದಿತ್ತು.
ಹಲವು ದಿನಗಳ ಬಳಿಕ ಭಾರತಿ ಮೊಬೈಲ್ ನೋಡಿದ್ದ ಆಕೆಯ ಪತಿಗೆ, ಭಾರತಿ- ಸುಮಿತ್ರ ನಡುವಿನ ಸಂಬಂಧದ ಬಗ್ಗೆ ನಿಜ ತಿಳಿದಿದೆ ಅಷ್ಟೇ ಅಲ್ಲದೇ ಮಗುವನ್ನು ಹತ್ಯೆ ಮಾಡುವಂತೆ ಸುಮಿತ್ರಾ ನೀಡಿದ್ದ ಸಲಹೆಯೂ ಬಹಿರಂಗಗೊಂಡಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲಮಂಗಲಂ ಪೊಲೀಸ್ ಠಾಣೆಯಲ್ಲಿ ಭಾರತಿ ಮತ್ತು ಸುಮಿತ್ರಾ ಇಬ್ಬರನ್ನ ಬಂಧಿಸಲಾಗಿದೆ.