ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಎನ್‌ಡಿಎ ನಾಯಕರ ಸೂಚನೆಯಂತೆ ಅಧಿಕಾರಿಗಳು 'ಸೋಲನ್ನು ಗ್ರಹಿಸಿ' ಪ್ರಮುಖ ಕಡತಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಆರೋಪಿಸಿದರು.
'ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನ ಮತ್ತು ನವೆಂಬರ್ 11 ರಂದು ನಡೆಯುವ ಅಂತಿಮ ಹಂತದ ಮತದಾನಕ್ಕೆ ಇಂಡಿಯಾ ಬಣದ ಪರವಾಗಿ ಜನರು ತೋರಿಸಿದ ಉತ್ಸಾಹದ ನಂತರ, ಎನ್‌ಡಿಎ ನಾಯಕರು ಸೋಲನ್ನು ಒಪ್ಪಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ ಅನೇಕ ಸಚಿವರು ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ನಮಗೆ ತಿಳಿದುಬಂದಿದೆ ಎಂದು ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷರೂ ಆಗಿರುವ ಖೇರಾ ಹೇಳಿದರು.
ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 'ಕಟ್ಟಾ' ಹೇಳಿಕೆಯನ್ನು ಟೀಕಿಸಿದ ಅವರು, ಪ್ರಧಾನಿಯವರು ಅಂತಹ ಪದಗಳನ್ನು ಬಳಸುವ ಮೂಲಕ ರಾಜ್ಯದ ಯುವಕರನ್ನು ಅವಮಾನಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ಕ್ಷಮೆಯಾಚಿಸಬೇಕು ಎಂದರು.
ಶನಿವಾರ ಸೀತಾಮರ್ಹಿ ಮತ್ತು ಬೆಟ್ಟಿಯಾದಲ್ಲಿ ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷಕ್ಕೆ ಜನರು ಮತ ಹಾಕುತ್ತಿಲ್ಲ. ಏಕೆಂದರೆ, ಅಧಿಕಾರಕ್ಕೆ ಬಂದರೆ ಅವರ ಆಡಳಿತವು 'ತಮ್ಮ ತಲೆಯ ಮೇಲೆ ಕಟ್ಟಾ' (ದೇಶೀಯ ನಿರ್ಮಿತ ಬಂದೂಕು) ಇಟ್ಟು ಕೈ ಮೇಲಕ್ಕೆತ್ತಲು ಆದೇಶಿಸುತ್ತದೆ ಎಂದು ಅವರು ಭಯಪಡುತ್ತಾರೆ ಎಂದು ಹೇಳಿದ್ದರು.