ಎಲ್.ಕೆ. ಅಡ್ವಾಣಿ - ಶಶಿ ತರೂರ್ 
ದೇಶ

ಎಲ್.ಕೆ ಅಡ್ವಾಣಿ ಹೊಗಳಿದ ಶಶಿ ತರೂರ್; ಅಂತರ ಕಾಯ್ದುಕೊಂಡ ಕಾಂಗ್ರೆಸ್

"ಕ್ಷಮಿಸಿ ತರೂರ್, ಈ ದೇಶದಲ್ಲಿ 'ದ್ವೇಷದ ಡ್ರ್ಯಾಗನ್ ಬೀಜಗಳನ್ನು'(ಕುಶವಂತ್ ಸಿಂಗ್ ಅವರನ್ನು ಉಲ್ಲೇಖಿಸಿ) ಬಿತ್ತುವುದು ಸಾರ್ವಜನಿಕ ಸೇವೆಯಲ್ಲ" ಎಂದು ಹೆಗ್ಡೆ ತಿರುಗೇಟು ನೀಡಿದ್ದಾರೆ.

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತಮ್ಮ ಪಕ್ಷವನ್ನು ಮತ್ತೆ ಕೆರಳಿಸಿದ್ದು, ಈ ಬಾರಿ ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಹೊಗಳಿದ್ದು, ಅವರನ್ನು, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರಿಗೆ ಹೋಲಿಸಿದ್ದಾರೆ.

ಶನಿವಾರ X ನಲ್ಲಿ ಎಲ್ ಕೆ ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟ್ ಮಾಡಿದ ಶಶಿ ತರೂರ್ ಅವರು, ಸಾರ್ವಜನಿಕ ಸೇವೆಯ ಮೇಲಿನ ಅವರ ಅಚಲ ಬದ್ಧತೆ, ವಿನಯಶೀಲತೆ ಮತ್ತು ಆಧುನಿಕ ಭಾರತದ ದಿಶೆಯನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರು ನಿಜವಾದ ರಾಷ್ಟ್ರನಾಯಕರು, ಎಂದು ಪ್ರಶಂಸಿಸಿದ್ದಾರೆ.

"ಎಲ್ ಕೆ ಅಡ್ವಾಣಿ ಅವರಿಗೆ 98ನೇ ಹುಟ್ಟುಹಬ್ಬದ ಶುಭಾಶಯಗಳು! ಸಾರ್ವಜನಿಕ ಸೇವೆಗೆ ಅವರ ಅಚಲ ಬದ್ಧತೆ, ಅವರ ನಮ್ರತೆ ಮತ್ತು ಸಭ್ಯತೆ ಮತ್ತು ಆಧುನಿಕ ಭಾರತದ ಪಥವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು" ಎಂದು ತರೂರ್ X ನಲ್ಲಿ ಬರೆದಿದ್ದಾರೆ.

"ಕ್ಷಮಿಸಿ ತರೂರ್, ಈ ದೇಶದಲ್ಲಿ 'ದ್ವೇಷದ ಡ್ರ್ಯಾಗನ್ ಬೀಜಗಳನ್ನು' ಬಿತ್ತುವುದು ಸಾರ್ವಜನಿಕ ಸೇವೆಯಲ್ಲ" ಎಂದು ಹೆಗ್ಡೆ ತಿರುಗೇಟು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಶಿ ತರೂರ್, “ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಒಬ್ಬ ನಾಯಕನ ಸುದೀರ್ಘ ಸೇವೆಯನ್ನು ಕೆಲವೇ ಕೆಲವು ಘಟನೆಗಳ ಮೂಲಕ ಅಳೆಯುವುದು ಸೂಕ್ತವೂ ಅಲ್ಲ, ನ್ಯಾಯಸಮ್ಮತವೂ ಅಲ್ಲ. ನೆಹರೂಜಿಯವರ ಬದುಕು ಚೀನಾ ಯುದ್ಧದ ಸೋಲಿನಿಂದ ಮಾತ್ರ ನಿರ್ಣಯವಾಗಬಾರದು ಅಥವಾ ಇಂದಿರಾ ಗಾಂಧಿಯವರ ಜೀವನ ಎಮರ್ಜೆನ್ಸಿಯಿಂದ ಮಾತ್ರ ಅಳೆಯಲಾಗದು. ಅದೇ ರೀತಿಯಲ್ಲಿ ಅಡ್ವಾನಿಜಿಗೂ ನ್ಯಾಯ ನೀಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ತಿರುವನಂತಪುರಂ ಸಂಸದನ ಹೇಳಿಕೆಯಿಂದ "ಸಂಪೂರ್ಣವಾಗಿ ಅಂತರ" ಕಾಯ್ದುಕೊಂಡಿರುವ ಕಾಂಗ್ರೆಸ್, ಇದು ಪಕ್ಷದೊಳಗಿನ "ಪ್ರಜಾಪ್ರಭುತ್ವ ಮತ್ತು ಉದಾರವಾದಿ ಮನೋಭಾವ" ವನ್ನು ಪ್ರತಿಬಿಂಬಿಸುತ್ತದೆ ಎಂದಷ್ಟೇ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bihar Polls 2025: ಯಾರಿಗೆ ಬಿಹಾರ? ಮತ್ತೆ ಮಹಿಳಾ ಮತದಾರರು ನಿರ್ಧರಿಸಲಿದ್ದಾರೆಯೇ?

RSS ದೇಣಿಗೆ ಕುರಿತು ಮೋಹನ್ ಭಾಗವತ್ ಗೆ 11 ಪ್ರಶ್ನೆ ಕೇಳಿದ ಸಚಿವ ಪ್ರಿಯಾಂಕ್ ಖರ್ಗೆ

Ironman Challenge: ಅಣ್ಣಾಮಲೈ ಭಾಗಿ; ಸತತ 2ನೇ ಬಾರಿಗೆ ಸಂಸದ ಸೂರ್ಯ ಐರನ್‌ಮ್ಯಾನ್ ಸಾಧನೆ!

ಕೂಡ್ಲಿಗಿ: ಏಳನೇ 'ಗ್ಯಾರಂಟಿ'ಯಾಗಿ ಕೆರೆಗಳಿಗೆ ನೀರು! ಡಿಸಿಎಂ ಡಿ.ಕೆ ಶಿವಕುಮಾರ್

ಉತ್ತರಾಖಂಡದಲ್ಲಿ 8,000 ಕೋಟಿ ರೂ ಯೋಜನೆಗಳಿಗೆ ಮೋದಿ ಚಾಲನೆ; 'ವಿಶ್ವದ ಆಧ್ಯಾತ್ಮಿಕ ರಾಜಧಾನಿ' ಮಾಡುವ ಗುರಿ

SCROLL FOR NEXT