ನವದೆಹಲಿ: 'ವಂದೇ ಮಾತರಂ' ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್, 1937 ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು "ಅವಮಾನಿಸಿದ್ದಾರೆ" ಎಂದು ಹೇಳಿಕೊಂಡಿದೆ.
ಅದರಲ್ಲಿ ವಂದೇ ಮಾತರಂ ಗೀತೆ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರ ಹೇಳಿಕೆ ನೀಡಲಾಗಿತ್ತು. ದೈನಂದಿನ ಕಾಳಜಿಯ ಪ್ರಸ್ತುತ ವಿಷಯಗಳ ಕುರಿತು ತಮ್ಮ ರಾಜಕೀಯ ಹೋರಾಟಗಳನ್ನು ನಡೆಸಬೇಕು ಎಂದು ಅವರು ಹೇಳಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿಯವರು ಸಿಡಬ್ಲ್ಯೂಸಿ ಮತ್ತು ರವೀಂದ್ರ ನಾಥ ಟ್ಯಾಗೋರ್ ಅವರನ್ನು ಅವಮಾನಿಸಿದ್ದಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ "ಮಹಾತ್ಮ ಗಾಂಧಿ ನೇತೃತ್ವದ ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಆರ್‌ಎಸ್‌ಎಸ್ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದಿದ್ದಾರೆ.
1937 ರಲ್ಲಿ ರಾಷ್ಟ್ರಗೀತೆ "ವಂದೇ ಮಾತರಂ" ನ ಪ್ರಮುಖ ಚರಣಗಳನ್ನು ಕೈಬಿಡಲಾಗಿತ್ತು. ಇದು ವಿಭಜನೆಯ ಬೀಜಗಳನ್ನು ಬಿತ್ತಿತ್ತು. ಅಂತಹ "ವಿಭಜಕ ಮನಸ್ಥಿತಿ" ಇನ್ನೂ ದೇಶಕ್ಕೆ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿಕೆ ನೀಡಿದ ನಂತರ ಅವರ ವಿರುದ್ಧ ಕಾಂಗ್ರೆಸ್ ತೀವ್ರ ದಾಳಿಯನ್ನು ನಡೆಸುತ್ತಿದೆ.
ಇಂದಿನ ಆನಂದ ಬಜಾರ್ ಪತ್ರಿಕೆಯಲ್ಲಿ ಸೆಮಂತಿ ಘೋಷ್ ಅವರ ಈ ವಿವರವಾದ ಲೇಖನವು ನೆಹರು ಮತ್ತು ವಂದೇ ಮಾತರಂ ಬಗ್ಗೆ ಪ್ರಧಾನಿಯವರ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂಬುದನ್ನು ಬಹಿರಂಗಪಡಿಸುತ್ತದೆ. ರವೀಂದ್ರನಾಥ ಟ್ಯಾಗೋರ್ ಅವರು ರಾಷ್ಟ್ರೀಯ ಗೀತೆಯಾಗಲು ಹೇಗೆ ಮತ್ತು ಏಕೆ ಕಾರಣರಾಗಿದ್ದರು ಎಂಬುದನ್ನು ಇದು ವಿವರಿಸುತ್ತದೆ.
ಪ್ರಧಾನಿಯವರು ಪಶ್ಚಿಮ ಬಂಗಾಳದ ಜನರಿಗೆ ವಿಶೇಷವಾಗಿ ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು. ಲೇಖಕಿ ಸ್ವತಃ ಪಶ್ಚಿಮ ಬಂಗಾಳದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಶಂಖ ಘೋಷ್ ಅವರ ಪುತ್ರಿಯಾಗಿದ್ದಾರೆ ಎಂದು ಜೈ ರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ