ತೇಜಸ್ವಿ ಯಾದವ್ 
ದೇಶ

ಬಿಹಾರಕ್ಕೆ ಬೇಕಿರುವುದು ಫಲಿತಾಂಶ, ಗೌರವ, ಅಭಿವೃದ್ಧಿಯೇ ಹೊರತು ಪೊಳ್ಳು ಭಾಷಣವಲ್ಲ: ತೇಜಸ್ವಿ ಯಾದವ್

ಕಳೆದ 20 ವರ್ಷಗಳಲ್ಲಿ, ನಾವು ನಿಜವಾದ ಅಭಿವೃದ್ಧಿ ಸಾಧಿಸುವಲ್ಲಿ ವಿಫಲರಾಗಿದ್ದೇವೆ. ಸರ್ಕಾರವು ಯುವಕರಿಗೆ ಉದ್ಯೋಗಗಳನ್ನು ಒದಗಿಸಲು, ಅಪರಾಧಗಳನ್ನು ಕಡಿಮೆ ಮಾಡಲು, ಗುಣಮಟ್ಟದ ಶಿಕ್ಷಣ ನೀಡಲು ಅಥವಾ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.

ಪಾಟ್ನಾ: ಬಿಹಾರ ಚುನಾವಣೆಯ ಮೊದಲ ಹಂತದಲ್ಲಿ 'ದಾಖಲೆಯ ಮತದಾನ'ದ ಮೂಲಕ ಜನರು ತಾವು 'ಫಲಿತಾಂಶ'ವನ್ನು ಬಯಸುತ್ತಾರೆಯೇ ಹೊರತು 'ಜುಮ್ಲಾ'ವನ್ನು (ಪೊಳ್ಳು ಭಾಷಣ) ಅಲ್ಲ ಎಂಬ ನೇರ ಸಂದೇಶವನ್ನು ನೀಡಿದ್ದಾರೆ ಎಂದು ಆರ್‌ಜೆಡಿ ನಾಯಕ ಮತ್ತು ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮಂಗಳವಾರ ಹೇಳಿದ್ದಾರೆ.

ಎರಡನೇ ಹಂತದ ಮತದಾನದ ದಿನದಂದು ಆರ್‌ಜೆಡಿ ನಾಯಕ ತಮ್ಮ ಎಕ್ಸ್‌‌ನಲ್ಲಿನ ಪೋಸ್ಟ್‌ನಲ್ಲಿ, 'ಎನ್‌ಡಿಎ ಸರ್ಕಾರದಿಂದ ಜನರು ಕೇವಲ ಭರವಸೆಗಳು, ಘೋಷಣೆಗಳು, ಪೊಳ್ಳು ಮತ್ತು ಖಾಲಿ ಆಶ್ವಾಸನೆಗಳನ್ನು ಪಡೆದಿದ್ದಾರೆ. ಬಿಹಾರದ ಜನರು ಇನ್ನು ಮುಂದೆ ಇವುಗಳನ್ನು ಒಂದು ಕ್ಷಣವೂ ಸಹಿಸಲಾರರು' ಎಂದಿದ್ದಾರೆ.

'ಕಳೆದ ಕೆಲವು ವರ್ಷಗಳಿಂದ ಇಂಡಿಯಾ ಬಣವು ಬಿಹಾರಕ್ಕೆ ಅಭಿವೃದ್ಧಿ ನೀತಿಯನ್ನು ವಿನ್ಯಾಸಗೊಳಿಸಲು ಶ್ರಮಿಸಿದೆ. ಇದು 'ಸ್ವಭಾವತಃ ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲ ವರ್ಗ, ಜಾತಿ, ಧರ್ಮ ಮತ್ತು ಸಮುದಾಯಗಳಿಗೆ ಪೂರೈಸುವ' ನೀತಿಯಾಗಿದೆ. ಜನರು ಎನ್‌ಡಿಎಯ ಕೆಟ್ಟ ತಂತ್ರಗಳನ್ನು ರದ್ದುಗೊಳಿಸಿದ್ದಾರೆ' ಎಂದು ಅವರು ಹೇಳಿದರು.

'ನನ್ನ ಕನಸು ನಿಮ್ಮಂತೆಯೇ ಇದೆ. ನಿಮ್ಮ ನೋವು ನನ್ನಂತೆಯೇ ಇದೆ. ನಮ್ಮ ಗುರಿಗಳು ಒಂದೇ ಆಗಿವೆ, ಬಿಹಾರದ ಹೊರಗಿನ ಯಾರಿಗೂ ಇದು ನಿಜವಾಗಿಯೂ ಅರ್ಥವಾಗುವುದಿಲ್ಲ. ಈಗಾಗಲೇ ತುಂಬಾ ತಡವಾಗಿದೆ. ಕಳೆದ 20 ವರ್ಷಗಳಲ್ಲಿ, ನಾವು ನಿಜವಾದ ಅಭಿವೃದ್ಧಿಯನ್ನು ಸಾಧಿಸುವಲ್ಲಿ ವಿಫಲರಾಗಿದ್ದೇವೆ. ಸರ್ಕಾರವು ಯುವಕರಿಗೆ ಉದ್ಯೋಗಗಳನ್ನು ಒದಗಿಸಲು, ಅಪರಾಧಗಳನ್ನು ಕಡಿಮೆ ಮಾಡಲು, ಗುಣಮಟ್ಟದ ಶಿಕ್ಷಣ ನೀಡಲು ಅಥವಾ ಪರಿಣಾಮಕಾರಿ ಆರೋಗ್ಯ ಸೇವೆಗಾಗಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ರೈತರು ಪ್ರವಾಹದಿಂದ ಬಳಲುತ್ತಿದ್ದಾರೆ, ವ್ಯಾಪಾರಿಗಳು ನಷ್ಟವನ್ನು ಎದುರಿಸುತ್ತಿದ್ದಾರೆ ಮತ್ತು ಜನರು ಇನ್ನೂ ಹಣದುಬ್ಬರದಿಂದ ಸಂಕಷ್ಟಕ್ಕೀಡಾಗಿದ್ದಾರೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಆಪರೇಷನ್ ಸಿಂದೂರ್ ಗೆ ಸೇಡು... 20 ಟೈಮರ್, 3000 ಕೆಜಿ ಸ್ಫೋಟಕ.. ಉಗ್ರರ ಯೋಜನೆ ಕಾರ್ಯಗತವಾಗಿದ್ದರೇ ಇತಿಹಾಸದ ಅತೀ ದೊಡ್ಡ 'ಭಯೋತ್ಪಾದಕ ದಾಳಿ'!

Delhi Red Fort blast: ಸ್ಪೂಟಕ್ಕೂ ಮುನ್ನ 3 ಗಂಟೆ ಕಾರು ಪಾರ್ಕಿಂಗ್! ನಿರ್ಣಾಯಕ 'ಮೂರು ಆಯಾಮ'ಗಳಲ್ಲಿ ಪೊಲೀಸರ ತನಿಖೆ

Delhi Blast: ಟೋಲ್ ಪ್ಲಾಜಾದಲ್ಲಿ 'ಸೂಸೈಡ್ ಬಾಂಬರ್'; ಹೊಸ CCTV ದೃಶ್ಯಾವಳಿ ಪತ್ತೆ..! Video

ಮತಾಂಧತೆಯ ಸ್ಫೋಟ: ಕುಟುಂಬದ ಏಕೈಕ ಆಧಾರಗಳು ಬಲಿ; ಕಣ್ಣೀರ ಕಡಲಲ್ಲಿ ದಿಕ್ಕು ಕಾಣದಂತಾದ ಪೋಷಕರು, ಪತ್ನಿ, ಮಕ್ಕಳು!

Delhi Blast: ಬಂಧಿತ ವೈದ್ಯೆಗೆ 'ಜೈಶ್ ಇ ಮಹಮದ್' ಉಗ್ರ ಸಂಘಟನೆಯ ಮಹಿಳಾ ಘಟಕ ಸ್ಥಾಪನೆ 'ಟಾಸ್ಕ್': ವರದಿ

SCROLL FOR NEXT