ಭಯೋತ್ಪಾದಕರು ದೆಹಲಿ ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿ ದಶಕದ ನಂತರ ಮತ್ತೆ ಭಾರತ ಬೆಚ್ಚಿಬೀಳುವಂತೆ ಮಾಡಿದೆ. ಆದರೆ ಭದ್ರತಾ ಏಜೆಸ್ಸಿಗಳ ಕರ್ತವ್ಯಪ್ರಜ್ಞೆಯಿಂದ ದೇಶಾದ್ಯಂತ ಸಂಭವಿಸಬಹುದಾಗಿದ್ದ ದೊಡ್ಡ ಮಾರಣಹೋಮವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ದೆಹಲಿ ಸ್ಫೋಟವನ್ನು ಪ್ರಶಂಸಿಸಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿದ್ದ ಹದಿನೇಳು ಜನರನ್ನು ಬಂಧಿಸಲಾಗಿದ್ದು ದೆಹಲಿ ಸ್ಫೋಟಗಳನ್ನು ಹೊಗಳುವ ಯಾರನ್ನೂ ಸಹಿಸಲಾಗುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ದೆಹಲಿ ಸ್ಫೋಟಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹೊಗಳಿದ್ದಕ್ಕಾಗಿ ರಾಜ್ಯದಲ್ಲಿ 17 ಜನರನ್ನು ಬಂಧಿಸಲಾಗಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇಲ್ಲಿಯವರೆಗೆ ದೆಹಲಿ ಸ್ಫೋಟಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹೊಗಳಿದ 17 ಜನರನ್ನು ನಾವು ಬಂಧಿಸಿದ್ದೇವೆ. ನಾವು ಇದನ್ನು ಸಹಿಸುವುದಿಲ್ಲ. ನಾವು ಪ್ರಸ್ತುತ 100ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತನಿಖೆ ಮಾಡುತ್ತಿದ್ದೇವೆ. ನಾವು ಇಡೀ ವ್ಯವಸ್ಥೆಯನ್ನು ಹತ್ತಿಕ್ಕುವವರೆಗೆ ಅಂತಹ ಜನರನ್ನು ಬಂಧಿಸುವುದನ್ನು ಮುಂದುವರಿಸುತ್ತೇವೆ ಎಂದರು. ಬಂಧಿತರನ್ನು ಅಸ್ಸಾಮಿ ಜನರು ರಫಿಜುಲ್ ಅಲಿ (ಬೊಂಗೈಗಾಂವ್), ಫರಿದುದ್ದೀನ್ ಲಸ್ಕರ್ (ಹೈಲಕಂಡಿ), ಇನಾಮುಲ್ ಇಸ್ಲಾಂ (ಲಖಿಂಪುರ್), ಫಿರೋಜ್ ಅಹ್ಮದ್ ಅಲಿಯಾಸ್ ಪಾಪೋನ್ (ಲಖಿಂಪುರ್), ಶಾಹಿಲ್ ಶೋಮನ್ ಸಿಕ್ದರ್ ಅಲಿಯಾಸ್ ಶಾಹಿದುಲ್ ಇಸ್ಲಾಂ (ಬಾರ್ಪೇಟಾ), ರಕಿಬುಲ್ ಸುಲ್ತಾನ್ (ಬಾರ್ಪೇಟಾ), ನಸೀಮ್ ಅಕ್ರಮ್ (ಹೊಜೈ), ತಸ್ಲಿಮ್ ಅಹ್ಮದ್ (ಕಮ್ರೂಪ್), ಮತ್ತು ಅಬ್ದುರ್ ರೋಹಿಮ್ ಮುಲ್ಲಾ ಅಲಿಯಾಸ್ ಬಪ್ಪಿ ಹುಸೇನ್ (ದಕ್ಷಿಣ ಸಲ್ಮಾರಾ) ಎಂದು ಗುರುತಿಸಲಾಗಿದೆ.
ಹಿಂಸಾಚಾರವನ್ನು ವೈಭವೀಕರಿಸುವವರ ವಿರುದ್ಧ ಅಸ್ಸಾಂ ಪೊಲೀಸರು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಸ್ಫೋಟವನ್ನು ವೈಭವೀಕರಿಸುತ್ತಿರುವವರನ್ನು ಬಂಧಿಸಲು ಅಸ್ಸಾಂ ಸರ್ಕಾರ ಪೊಲೀಸರಿಗೆ ನಿರ್ದೇಶನ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 35 ಜನರನ್ನು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ. ಬಂಧಿತರ ಇತರ ಸಂಪರ್ಕಗಳ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ. ಯಾರಾದರೂ ಬಾಂಗ್ಲಾದೇಶ ಅಥವಾ ಯಾವುದೇ ಇತರ ದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಕಂಡುಬಂದರೆ, ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಪ್ರಾಪ್ತ ವಯಸ್ಕರು ಮತ್ತು ತಮ್ಮ ಸಾಧನಗಳನ್ನು ಬಳಸಿ ಇಂತಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ತಿಳಿದಿಲ್ಲದವರನ್ನು ಬಂಧಿಸಲಾಗುವುದಿಲ್ಲ. ಆದರೆ ಹೊಣೆಗಾರರನ್ನು ಬಿಡಲಾಗುವುದಿಲ್ಲ ಎಂದು ಶರ್ಮಾ ಹೇಳಿದರು. ಅನೇಕ ಜನರು ಈಗ ತಮ್ಮ ಪೋಸ್ಟ್‌ಗಳನ್ನು ಅಳಿಸುತ್ತಿದ್ದಾರೆ. ಆದರೆ ನಾವು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಜುಬೀನ್ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ಜನರು ಈಗ ದೆಹಲಿ ಬಾಂಬ್ ದಾಳಿಯನ್ನು ಸ್ವಾಗತಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದರು. ಸೋಮವಾರ (ನವೆಂಬರ್ 10) ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಪ್ರಬಲ ಕಾರ್ ಬಾಂಬ್ ಸ್ಫೋಟಗೊಂಡಿದೆ. ಈ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.