ನವದೆಹಲಿ: ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಸಾವಿಗೀಡಾಗಿದ್ದು, ಸಂತ್ರಸ್ತರ ದೇಹಗಳು ಛಿದ್ರಗೊಂಡಿವೆ. ಗುರುವಾರ ಬೆಳಿಗ್ಗೆ ಆ ಸ್ಥಳದಿಂದ ಸ್ವಲ್ಪವೇ ದೂರವಿರುವ ಅಂಗಡಿಯೊಂದರ ಛಾವಣಿ ಮೇಲೆ ಕತ್ತರಿಸಿದ ಕೈಯೊಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ಸ್ಥಳದಿಂದ ಕೆಲವು ಮೀಟರ್ ದೂರದಲ್ಲಿ, ಜೈನ ದೇವಾಲಯದ ಹಿಂದಿರುವ ಅಂಗಡಿಯ ಛಾವಣಿ ಮೇಲೆ ಕೈ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಈ ಕೈ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತಲುಪಿ, ಆ ಪ್ರದೇಶವನ್ನು ಸುತ್ತುವರೆದು ಅದನ್ನು ಸಂಗ್ರಹಿಸಿದ್ದಾರೆ.
ಸಂತ್ರಸ್ತರ ಗುರುತನ್ನು ಖಚಿತಪಡಿಸಿಕೊಳ್ಳಲು ಆ ಕೈಯನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 10 ರಂದು ರಾಷ್ಟ್ರ ರಾಜಧಾನಿಯ ಕೆಂಪು ಕೋಟೆ ಬಳಿ ಸ್ಫೋಟಕಗಳಿಂದ ತುಂಬಿದ್ದ ಕಾರೊಂದು ಸ್ಫೋಟಗೊಂಡು 13 ಜನರು ಸಾವಿಗೀಡಾಗಿದ್ದರು ಮತ್ತು ಹಲವರು ಗಾಯಗೊಂಡರು.