ಚಿತ್ರ ಕಲಾವಿದರೊಬ್ಬರಿಂದ ಬಿಹಾರ ಚುನಾವಣೆಯ ಚಿತ್ರಣ  
ದೇಶ

Bihar Election Results 2025: ಮತ ಎಣಿಕೆ ಆರಂಭ, ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್, ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್

ಚುನಾವಣಾ ಸಮಿತಿಯು ಬಿಹಾರದ 38 ಜಿಲ್ಲೆಗಳಲ್ಲಿ 46 ಎಣಿಕೆ ಕೇಂದ್ರಗಳನ್ನು ಗೊತ್ತುಪಡಿಸಿದ್ದು, ಸ್ಟ್ರಾಂಗ್ ರೂಮ್‌ಗಳಲ್ಲಿ ಮೂರು ಹಂತದ ಭದ್ರತೆಯನ್ನು ಹೊಂದಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಭಾರತೀಯ ಚುನಾವಣಾ ಆಯೋಗ (ECI) 243 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆಯನ್ನು ಪ್ರಾರಂಭಿಸಿದ್ದು, ಅಂಚೆ ಮತಪತ್ರಗಳೊಂದಿಗೆ ಇದು ಆರಂಭವಾಗಿದ್ದು, ಬೆಳಗ್ಗೆ 9 ಗಂಟೆಯ ಹೊತ್ತಿಗೆ ಅಂದಾಜು ಚಿತ್ರಣ ಪ್ರಾರಂಭವಾಗುತ್ತದೆ.

ಚುನಾವಣಾ ಸಮಿತಿಯು ಬಿಹಾರದ 38 ಜಿಲ್ಲೆಗಳಲ್ಲಿ 46 ಎಣಿಕೆ ಕೇಂದ್ರಗಳನ್ನು ಗೊತ್ತುಪಡಿಸಿದ್ದು, ಸ್ಟ್ರಾಂಗ್ ರೂಮ್‌ಗಳಲ್ಲಿ ಮೂರು ಹಂತದ ಭದ್ರತೆಯನ್ನು ಹೊಂದಿದೆ.

ಬಿಹಾರ ಮತ ಎಣಿಕೆಯಲ್ಲಿ 'ಪಿತೂರಿ' ನಡೆಯುತ್ತಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ, ನಿಷ್ಪಕ್ಷಪಾತತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ನೇತೃತ್ವದ ವಿರೋಧ ಪಕ್ಷ ಇಂಡಿಯಾ ಒಕ್ಕೂಟವು ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಸಮಯದಲ್ಲಿ ಪಿತೂರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆಡಳಿತಾರೂಢ ಎನ್‌ಡಿಎ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ಮಾತನಾಡಿದ್ದ ಅವರು, ಎಣಿಕೆಯಲ್ಲಿ ನಿಷ್ಪಕ್ಷಪಾತವನ್ನು ಖಾತರಿಪಡಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

2020 ರ ವಿಧಾನಸಭಾ ಚುನಾವಣೆಯನ್ನು ನೆನಪಿಸಿಕೊಂಡ ಆರ್‌ಜೆಡಿ ನಾಯಕ, ಮಹಾಘಟಬಂಧನ್ ಸರ್ಕಾರವನ್ನು ರಚಿಸುವುದು ಖಚಿತವಾಗಿತ್ತು, ಆದರೆ ಅಧಿಕಾರಿಗಳ ಪಿತೂರಿಯಿಂದ ಫಲಿತಾಂಶವನ್ನು ಬದಲಾಯಿಸಿತು ಎಂದು ಹೇಳಿಕೊಂಡಿದ್ದಾರೆ.

ಉಪ ಚುನಾವಣೆ ಫಲಿತಾಂಶಗಳು

ಬಿಹಾರ ರಾಜ್ಯದ 38 ಜಿಲ್ಲೆಗಳ ಎಲ್ಲಾ 243 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

6 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 8 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೂ ಮತ ಎಣಿಕೆ ಆರಂಭವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Live: Bihar Election Results 2025: ನಿತೀಶ್ ಕುಮಾರ್ ನೇತೃತ್ವದ JD(U) ಪುನರಾಗಮನ ನಿರೀಕ್ಷೆ, NDAಗೆ ಆರಂಭಿಕ ಮುನ್ನಡೆ

Bihar trends- ಬಿಹಾರ ಮತ ಎಣಿಕೆ ಪ್ರಗತಿಯಲ್ಲಿ, ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ, ಮಹಾಘಟಬಂಧನ್ ಹಿನ್ನಡೆ

Bihar Election Results 2025: ಇಂದು ಬಿಹಾರ ಚುನಾವಣೆ ಮತ ಎಣಿಕೆ, ಕೆಲವೇ ಹೊತ್ತಿನಲ್ಲಿ ಭವಿಷ್ಯ ನಿರ್ಧಾರ; ಗೆಲುವಿನ 'ಹಾರ' ಯಾರ ಪಾಲು?

'ನಮಗೆ ಆತುರವಿಲ್ಲ, ಪಕ್ಷ ಕಟ್ಟಲು ರಕ್ತ -ಬೆವರು ಸುರಿಸಿದ್ದೇವೆ: ಅಧಿಕಾರಕ್ಕಾಗಿ ಇನ್ನೂ 5 ವರ್ಷ ಕಾಯುತ್ತೇವೆ; ಸಮ್ಮಿಶ್ರ ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ'

Delhi blast: 12 ಜನರ ಸಾವಿಗೆ ಕಾರಣವಾದ ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

SCROLL FOR NEXT