ಅಶೋಕ್ ಗೆಹ್ಲೋಟ್ 
ದೇಶ

ಹಣದ ಆಮಿಷದಿಂದ ಸಿಕ್ಕ ಗೆಲುವು: ಬಿಹಾರ ಚುನಾವಣಾ ಫಲಿತಾಂಶ ಕುರಿತು ಅಶೋಕ್ ಗೆಹ್ಲೋಟ್‌ ಹೇಳಿಕೆ

ಬಿಹಾರ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿರುವ ಅವರು, ಚುನಾವಣಾ ಫಲಿತಾಂಶ ನಿರಾಶದಾಯಕವಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಲಾಗಿದೆ.

ಜೈಪುರ: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೊಡಿಸಿದ್ದು, ಮತದಾರರಿಗೆ ಹಣ ಕೊಟ್ಟು ಪಡೆದ ಗೆಲುವು ಇದಾಗಿದೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹ್ಲೋಟ್ ಅವರು ಶುಕ್ರವಾರ ಹೇಳಿದ್ದಾರೆ,

ಬಿಹಾರ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿರುವ ಅವರು, ಚುನಾವಣಾ ಫಲಿತಾಂಶ ನಿರಾಶದಾಯಕವಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಲಾಗಿದೆ. ಇದು ಮಹಿಳಾ ಮತದಾರರಿಗೆ ಹಣ ಕೊಟ್ಟು ಪಡೆದ ಗೆಲುವು ಎಂದು ಟೀಕಿಸಿದ್ದಾರೆ.

ಚುನಾವಣೆಗೂ ಮುನ್ನ ಬಿಹಾರದ ಮಹಿಳಾ ಮತದಾರರಿಗೆ ತಲಾ 10,000 ರೂ.ಗಳನ್ನು ನೀಡಲಾಗಿದೆ. ಮಹಿಳೆಯರಿಗೆ ಹಣದ ಆಮಿಷವೊಡ್ಡಿದೆ. ಚುನಾವಣಾ ಪ್ರಚಾರದ ಸಮಯದಲ್ಲೂ ಇದು ನಡೆದಿದೆ. ಆದರೆ, ಚುನಾವಣಾ ಆಯೋಗವು ಮೂಕ ಪ್ರೇಕ್ಷಕನಾಗಿತ್ತು ಎಂದು ಆರೋಪಿಸಿದ್ದಾರೆ.

ಬಿಹಾರ ಫಲಿತಾಂಶಗಳು ನಿರಾಶಾದಾಯಕವಾಗಿವೆ. ಬಿಹಾರದಲ್ಲಿ ನಾನು ಕಂಡಂತೆ, ಹಣ ಹಂಚಿಕೆ ನಡೆಯುತ್ತಲೇ ಇತ್ತು. ಆದರೆ, ಚುನಾವಣಾ ಆಯೋಗ ಅದನ್ನು ನಿಲ್ಲಿಸಲಿಲ್ಲ. ಬಿಜೆಪಿ ಹಣದ ಶಕ್ತಿಯನ್ನು ಬಳಸಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡಿದೆ, ದೇಶಕ್ಕೆ ಕಾಂಗ್ರೆಸ್ ಮತ್ತು ಅದರ ಸಿದ್ಧಾಂತದ ಅಗತ್ಯವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ?, ಕೊಲಂಬೋದಲ್ಲಿ ಶೇ.94ರಷ್ಟು ವರ್ಷಧಾರೆ ಸಾಧ್ಯತೆ!

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ: 6 ದಿನಗಳ ನಂತರ ಶವ ಪತ್ತೆ

ಬೆಂಗಳೂರಿನ ಡಬಲ್ ಡೆಕ್ಕರ್ ಯೋಜನೆ ಬಗ್ಗೆ ಕೇಂದ್ರ ಕಳವಳ!

Bannerghatta Biological Park: ಚಿರತೆ ದಾಳಿಗೊಳಗಾದ ಸಿಬ್ಬಂದಿಗೆ ಶಸ್ತ್ರ ಚಿಕಿತ್ಸೆ

T20 World Cup 2026: ಭಾರತದ ಸಂಭಾವ್ಯ ಪ್ಲೇಯಿಂಗ್ XI; ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್‌ಗೆ ತಲೆನೋವಾದ ಆಯ್ಕೆ!

SCROLL FOR NEXT