ಭೋಪಾಲ್: ಸರ್ಕಾರಿ ಆಸ್ಪತ್ರೆ ಆವರಣದಲ್ಲೇ ದಂಪತಿಗಳು ಅಶ್ಲೀಲವಾಗಿ ವರ್ತಿಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಿಲ್ಲಾಸ್ಪತ್ರೆ ವಿರುದ್ಧ ಅಧಿಕಾರಿಗಳು ಕೆಂಗಣ್ಣಿಗೆ ಗುರಿಯಾಗಿದೆ.
ಮಧ್ಯಪ್ರದೇಶದ ಆಶೋಕ್ ನಗರ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ದಂಪತಿಗಳಿಬ್ಬರು ಆಸ್ಪತ್ರೆ ಆವರಣದಲ್ಲಿ ಕಂಬಳಿ ಹೊದ್ದುಕೊಂಡು ಕಾಮಕೇಳಿಯಲ್ಲಿ ತೊಡಗಿದ್ದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಅಧಿಕಾರಿಗಳ ಪ್ರಕಾರ, ಆಸ್ಪತ್ರೆಯ ವೇಯ್ಟಿಂಗ್ ರೂಮ್ ನ ಆವರಣದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ರಾತ್ರಿ ವೇಳೆ ಅಲ್ಲಿ ಮಲಗಿದ್ದ ದಂಪತಿಗಳು ಕಂಬಳಿ ಹೊದ್ದುಕೊಂಡು ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹಗಲು ಹೊತ್ತಿನಲ್ಲೇ ಜನರು ಹೆಚ್ಚಾಗಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
2ನೇ ಘಟನೆ: ಪೊದೆಯಲ್ಲಿ ಕಳ್ಳಾಟ
ಇದೇ ಆಸ್ಪತ್ರೆಯಲ್ಲಿ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು ಆಸ್ಪತ್ರೆಯ ಮಾಧವ್ ಉದ್ಯಾನ ಉದ್ಯಾನವನದ ಪೊದೆಯಲ್ಲಿ ಮತ್ತಿಬ್ಬರು ದಂಪತಿಗಳು ಪೊದೆಯಲ್ಲಿ ಕುಳಿತು ಅಶ್ಲೀಲ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ಭದ್ರತಾ ಲೋಪ
ಅಂತೆಯೇ ಆಸ್ಪತ್ರೆಯಲ್ಲಿ ಇಂತಹ ಭದ್ರತಾ ಲೋಪ ಇದೇ ಮೊದಲೇನಲ್ಲ.. ಈ ಹಿಂದೆಯೂ ಕೂಡ ಹಗಲಿನಲ್ಲೇ ಇದೇ ಆಸ್ಪತ್ರೆ ಆವರಣದಲ್ಲಿ ಇಬ್ಬರು ವ್ಯಕ್ತಿಗಳು ಮದ್ಯ ಸೇವಿಸಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಆಸ್ಪತ್ರೆಯಲ್ಲಿ ಪದೇ ಪದೇ ಇಂತಹ ಭದ್ರತಾಲೋಪವಾಗುತ್ತಿರುವುದು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಅಧಿಕಾರಿಗಳ ಕೆಂಗಣ್ಣು
ಇನ್ನುಆಶೋಕ್ ನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಈ ಘಟನೆಗಳು ಜಿಲ್ಲಾಸ್ಪತ್ರೆಯ ಅಧಿಕಾರಿಗಳ ತೀವ್ರ ಮುಜುಗರಕ್ಕೆ ಕಾರಣವಾಗಿದ್ದು, ಜಿಲ್ಲಾಸ್ಪತ್ರೆ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಎರಡೂ ವೀಡಿಯೊಗಳು ಎರಡು ಮೂರು ದಿನಗಳ ಹಳೆಯವು ಎಂದು ಹೇಳಲಾಗುತ್ತದೆ. ಇದು ಆಸ್ಪತ್ರೆಯ ಭದ್ರತೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇತ್ತೀಚಿನ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಿವಿಲ್ ಸರ್ಜನ್ ಡಾ. ಭೂಪೇಂದ್ರ ಸಿಂಗ್, ಆಸ್ಪತ್ರೆ ಆಡಳಿತದ ಕಡೆಯಿಂದ ಲೋಪವಾಗಿದೆ ಎಂದು ಒಪ್ಪಿಕೊಂಡರು. ಈ ಕೃತ್ಯಗಳು ವೈದ್ಯಕೀಯ ಸೌಲಭ್ಯಕ್ಕೆ "ತುಂಬಾ ಸೂಕ್ತವಲ್ಲ" ಎಂದು ಅವರು ವಿವರಿಸಿದರು ಮತ್ತು ಅಂತೆಯೇ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ದೃಢಪಡಿಸಿದರು.
"ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಕರೆಸಲಾಗುವುದು ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆಸ್ಪತ್ರೆಯೊಳಗೆ ಶಿಸ್ತು ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳಲು ಅಗತ್ಯ ಸಂಪನ್ಮೂಲಗಳನ್ನು ಹೆಚ್ಚಿಸಲಾಗುವುದು ಮತ್ತು ವ್ಯವಸ್ಥೆಗಳನ್ನು ಸುಧಾರಿಸಲಾಗುವುದು. ಭವಿಷ್ಯದಲ್ಲಿ ಇದೇ ರೀತಿಯ ಕೃತ್ಯಗಳನ್ನು ತಡೆಗಟ್ಟಲು ಆಸ್ಪತ್ರೆಯು ತನ್ನ ಕಣ್ಗಾವಲು ಮತ್ತು ಭದ್ರತಾ ಮೂಲಸೌಕರ್ಯವನ್ನು ಬಲಪಡಿಸುತ್ತದೆ ಎಂದು ಡಾ. ಸಿಂಗ್ ಭರವಸೆ ನೀಡಿದರು.
ಕೋಲಾಹಲದ ನಂತರ, ಆಸ್ಪತ್ರೆ ಆಡಳಿತವು ಆವರಣದಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯುತ ಭದ್ರತಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ, ಪದೇ ಪದೇ ನಡವಳಿಕೆ ಉಲ್ಲಂಘನೆಗಳಿಗೆ ವಿವರಣೆಯನ್ನು ಕೋರಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಮತ್ತು ಸರಿಪಡಿಸುವ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.