ಪ್ರಶಾಂತ್ ಕಿಶೋರ್ online desk
ದೇಶ

'ನಮಗೆ ಆತುರವಿಲ್ಲ, ಪಕ್ಷ ಕಟ್ಟಲು ರಕ್ತ -ಬೆವರು ಸುರಿಸಿದ್ದೇವೆ: ಅಧಿಕಾರಕ್ಕಾಗಿ ಇನ್ನೂ 5 ವರ್ಷ ಕಾಯುತ್ತೇವೆ; ಸಮ್ಮಿಶ್ರ ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ'

ಬಿಹಾರದ ಜನರು ಇನ್ನೂ ಬದಲಾಗಲು ಬಯಸದಿದ್ದರೆ, ನಾವು ಅವರೊಂದಿಗೆ ಇದ್ದು ಇನ್ನೂ ಐದು ವರ್ಷಗಳ ಕಾಲ ಕೆಲಸ ಮಾಡುತ್ತೇವೆ. ಸರ್ಕಾರವನ್ನು ಸೇರುವ ಪ್ರಶ್ನೆಯೇ ಇಲ್ಲ. ಜನ್ ಸುರಾಜ್ ತನ್ನದೇ ಆದ ಬಲದ ಮೇಲೆ ಸರ್ಕಾರ ರಚಿಸುತ್ತದೆ,

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಸಂಪೂರ್ಣ ಬಹುಮತವನ್ನು ಗಳಿಸಲು ವಿಫಲವಾದರೆ, ಸಮ್ಮಿಶ್ರ ಸರ್ಕಾರವನ್ನು ಸೇರುವ ಯಾವುದೇ ಸಾಧ್ಯತೆಯಿಲ್ಲ ಎಂದು ಜನ್ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ,

ANI ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಮ್ಮ ಪಕ್ಷದ ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವ ಬದಲು ಜನರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರದ ಜನರು ಇನ್ನೂ ಬದಲಾಗಲು ಬಯಸದಿದ್ದರೆ, ನಾವು ಅವರೊಂದಿಗೆ ಇದ್ದು ಇನ್ನೂ ಐದು ವರ್ಷಗಳ ಕಾಲ ಕೆಲಸ ಮಾಡುತ್ತೇವೆ. ಸರ್ಕಾರವನ್ನು ಸೇರುವ ಪ್ರಶ್ನೆಯೇ ಇಲ್ಲ. ಜನ್ ಸುರಾಜ್ ತನ್ನದೇ ಆದ ಬಲದ ಮೇಲೆ ಸರ್ಕಾರ ರಚಿಸುತ್ತದೆ, ಅಥವಾ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ. ಮತ್ತು ಅಗತ್ಯವಿದ್ದರೆ, ನಾವು ಮತ್ತೊಂದು ಚುನಾವಣೆಗೆ ಹೋಗುತ್ತೇವೆ. ನಾವು ಸೈದ್ಧಾಂತಿಕ ಆಧಾರದ ಮೇಲೆ ಬಿಜೆಪಿಯನ್ನು ನಾವು ವಿರೋಧಿಸುತ್ತೇವೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ನಾವು ಜನ್ ಸುರಾಜ್ ಅನ್ನು ನಿರ್ಮಿಸಲು ನಮ್ಮ ರಕ್ತ ಮತ್ತು ಬೆವರು ಸುರಿಸಿದ್ದೇವೆ. ಬದಲಾವಣೆ ಈಗಾಗಲೇ ಗೋಚರಿಸುತ್ತಿದೆ, ಆದ್ದರಿಂದ ಫಲಿತಾಂಶಗಳಿಗಾಗಿ ಕಾಯೋಣ. ಸಂಖ್ಯೆಗಳು ಬಂದಾಗ, ಆಗಬಹುದಾದ ಕೆಟ್ಟದ್ದೇನು? ಬಹುಶಃ ಜನ್ ಸುರಾಜ್ ಈ ಬಾರಿ ಅಷ್ಟು ಸ್ಥಾನಗಳನ್ನು ಪಡೆಯದಿರಬಹುದು, ನಂತರ ನಾವು ಇನ್ನೂ ಐದು ವರ್ಷಗಳ ಕಾಲ ಕೆಲಸ ಮಾಡುತ್ತೇವೆ. ಆತುರವೇನು? ನನಗೆ 48 ವರ್ಷ; ನಾನು ಈ ಉದ್ದೇಶಕ್ಕಾಗಿ ಇನ್ನೂ ಐದು ವರ್ಷ ಕಾಯಬಲ್ಲೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Live: Bihar Election Results 2025: ನಿತೀಶ್ ಕುಮಾರ್ ನೇತೃತ್ವದ JD(U) ಪುನರಾಗಮನ ನಿರೀಕ್ಷೆ, NDAಗೆ ಆರಂಭಿಕ ಮುನ್ನಡೆ

Bihar trends- ಬಿಹಾರ ಮತ ಎಣಿಕೆ ಪ್ರಗತಿಯಲ್ಲಿ, ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ, ಮಹಾಘಟಬಂಧನ್ ಹಿನ್ನಡೆ

Bihar Election Results 2025: ಮತ ಎಣಿಕೆ ಆರಂಭ, ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್, ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್

Bihar Election Results 2025: ಇಂದು ಬಿಹಾರ ಚುನಾವಣೆ ಮತ ಎಣಿಕೆ, ಕೆಲವೇ ಹೊತ್ತಿನಲ್ಲಿ ಭವಿಷ್ಯ ನಿರ್ಧಾರ; ಗೆಲುವಿನ 'ಹಾರ' ಯಾರ ಪಾಲು?

Delhi blast: 12 ಜನರ ಸಾವಿಗೆ ಕಾರಣವಾದ ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

SCROLL FOR NEXT