ಸ್ಫೋಟ ಸಂಭವಿಸುವುದು  
ದೇಶ

ಶ್ರೀನಗರ ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: 9 ಸಾವು, 27 ಮಂದಿ ಗಾಯ, ದೆಹಲಿ ಸ್ಫೋಟ ಬೆನ್ನಲ್ಲೇ ಮತ್ತೊಂದು ಘಟನೆ

ಅಧಿಕಾರಿಗಳ ಪ್ರಕಾರ, ನಿನ್ನೆ ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಒಂಭತ್ತು ಜನರು ಮೃತಪಟ್ಟು 27 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳು.

ಶ್ರೀನಗರ: ಜಮ್ಮು-ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿದ್ದು, ಒಂಭತ್ತು ಮೃತಪಟ್ಟು , 27 ಜನರು ಗಾಯಗೊಂಡಿದ್ದಾರೆ.

'ವೈಟ್-ಕಾಲರ್' ಭಯೋತ್ಪಾದಕ ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಶಪಡಿಸಿಕೊಂಡ ಸ್ಫೋಟಕಗಳ ದೊಡ್ಡ ಸಂಗ್ರಹದಿಂದ ಅಧಿಕಾರಿಗಳು ಮಾದರಿಗಳನ್ನು ಹೊರತೆಗೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಇಂದು ಬೆಳಗ್ಗೆ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ನಿನ್ನೆ ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಒಂಭತ್ತು ಜನರು ಮೃತಪಟ್ಟು 27 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳು.

ಹರಿಯಾಣದ ಫರಿದಾಬಾದ್‌ನಿಂದ ತರಲಾಗಿದ್ದ ಸ್ಫೋಟಕ ವಸ್ತುಗಳನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಹೇಳಿದರು.

ಬಂಧಿತ ವೈದ್ಯ ಮುಜಮ್ಮಿಲ್ ಗನೈ ಅವರ ಬಾಡಿಗೆ ನಿವಾಸದಿಂದ ವಶಪಡಿಸಿಕೊಂಡ 360 ಕಿಲೋಗ್ರಾಂಗಳಷ್ಟು ಸ್ಫೋಟಕಗಳ ಭಾಗವಾಗಿರುವ ಈ ವಸ್ತುವನ್ನು ನಡೆಯುತ್ತಿರುವ ತನಿಖೆಯ ಭಾಗವಾಗಿ ಮಾದರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಸ್ಥಳದಿಂದ ಶವಗಳನ್ನು ಹೊರತೆಗೆಯಲಾಗಿದೆ, ಮೃತರನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅವರು ಹೇಳಿದರು. ಶವಗಳನ್ನು ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆದೊಯ್ಯಲಾಗಿದೆ.

ಕನಿಷ್ಠ 24 ಪೊಲೀಸ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು.

ಬಾಂಬ್ ನಿಷ್ಕ್ರಿಯ ದಳದ ತಕ್ಷಣದ ರಕ್ಷಣಾ ಕಾರ್ಯಾಚರಣೆಗೆ ಸಣ್ಣಪುಟ್ಟ ಸ್ಫೋಟಗಳು ಅಡ್ಡಿಯಾಗಿವೆ. ವಶಪಡಿಸಿಕೊಂಡ ಕೆಲವು ಸ್ಫೋಟಕಗಳನ್ನು ಪೊಲೀಸ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇರಿಸಲಾಗಿದ್ದರೂ, 360 ಕೆಜಿ ಸ್ಫೋಟಕಗಳಲ್ಲಿ ಹೆಚ್ಚಿನ ಭಾಗವನ್ನು ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಲಾಗಿದೆ, ಅಲ್ಲಿ ಭಯೋತ್ಪಾದಕ ಘಟಕದ ಪ್ರಾಥಮಿಕ ಪ್ರಕರಣ ದಾಖಲಾಗಿದೆ.

ಕಳೆದ ಅಕ್ಟೋಬರ್ ಮಧ್ಯದಲ್ಲಿ ನೌಗಾಮ್‌ನ ಬನ್‌ಪೋರಾದಲ್ಲಿ ಗೋಡೆಗಳ ಮೇಲೆ ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಬೆದರಿಕೆ ಹಾಕುವ ಪೋಸ್ಟರ್‌ಗಳು ಕಾಣಿಸಿಕೊಂಡ ನಂತರ ಪಿತೂರಿ ಬಯಲಿಗೆ ಬಂದಿತ್ತು.

ಘಟನೆಯನ್ನು ಗಂಭೀರ ಬೆದರಿಕೆ ಎಂದು ಪರಿಗಣಿಸಿ, ಶ್ರೀನಗರ ಪೊಲೀಸರು ಅಕ್ಟೋಬರ್ 19 ರಂದು ಪ್ರಕರಣ ದಾಖಲಿಸಿ ತನಿಖೆಗೆ ತಂಡ ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಸೂಕ್ಷ್ಮವಾದ, ವಿಶ್ಲೇಷಣೆಯು ತನಿಖಾಧಿಕಾರಿಗಳು ಮೊದಲ ಮೂವರು ಶಂಕಿತರಾದ ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್, ಯಾಸಿರ್-ಉಲ್-ಅಶ್ರಫ್ ಮತ್ತು ಮಕ್ಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹಿದ್ ಅವರನ್ನು ಬಂಧಿಸಲಾಯಿತು.

ಈ ಮೂವರ ವಿರುದ್ಧ ಕಲ್ಲು ತೂರಾಟದ ಪ್ರಕರಣಗಳು ದಾಖಲಾಗಿದ್ದವು. ಅವರು ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ಪತ್ತೆಯಾಗಿತ್ತು.

ಅವರ ವಿಚಾರಣೆಯ ನಂತರ, ಶೋಪಿಯಾನ್‌ನಿಂದ ಇಮಾಮ್ ಆಗಿ ಬದಲಾದ ಮಾಜಿ ಪ್ಯಾರಾಮೆಡಿಕ್ ಮೌಲ್ವಿ ಇರ್ಫಾನ್ ಅಹ್ಮದ್ ಬಂಧನಕ್ಕೆ ಕಾರಣವಾಯಿತು, ಈತ ಪೋಸ್ಟರ್‌ಗಳನ್ನು ಪೂರೈಸಿದ ಮತ್ತು ವೈದ್ಯಕೀಯ ಸಮುದಾಯಕ್ಕೆ ತನ್ನ ಸುಲಭ ಪ್ರವೇಶವನ್ನು ಬಳಸಿಕೊಂಡು ವೈದ್ಯರನ್ನು ಮೂಲಭೂತವಾದಿಯನ್ನಾಗಿ ಬದಲಾಯಿಸಿದನೆಂದು ಹೇಳಲಾಗುತ್ತಿದೆ.

ಈ ಜಾಡು ಅಂತಿಮವಾಗಿ ಶ್ರೀನಗರ ಪೊಲೀಸರನ್ನು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು, ಅಲ್ಲಿ ಅವರು ಡಾ. ಮುಜಮ್ಮಿಲ್ ಅಹ್ಮದ್ ಗನೈ ಮತ್ತು ಡಾ. ಶಾಹೀನ್ ಸಯೀದ್ ಅವರನ್ನು ಬಂಧಿಸಿದರು.

ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್ ಸೇರಿದಂತೆ ಬೃಹತ್ ಪ್ರಮಾಣದ ರಾಸಾಯನಿಕಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಯಿತು.

ವೈಟ್ ಕಾಲರ್ ಭಯೋತ್ಪಾದನೆ ಮಾಡ್ಯೂಲ್ ನ್ನು ಮೂವರು ವೈದ್ಯರು ನಡೆಸುತ್ತಿದ್ದರು. ಮುಜಮ್ಮಿಲ್ ಗನೈ (ಬಂಧನ), ಉಮರ್ ನಬಿ (ನವೆಂಬರ್ 10 ರಂದು ಕೆಂಪು ಕೋಟೆಯ ಬಳಿ ಸ್ಫೋಟಗೊಂಡ ಸ್ಫೋಟಕಗಳನ್ನು ತುಂಬಿದ ಕಾರಿನ ಚಾಲಕ) ಮತ್ತು ಮುಜಮ್ಮರ್ ರಾಥರ್ (ಪರಾರಿ). ಎಕೆ -56 ರೈಫಲ್ ನ್ನು ವಶಪಡಿಸಿಕೊಂಡಿರುವ ಎಂಟನೇ ಬಂಧಿತ ವ್ಯಕ್ತಿ ಡಾ. ಅದೀಲ್ ರಾಥರ್ . ಪರಾರಿಯಾಗಿರುವ ಡಾ. ಮುಜಮ್ಮರ್ ರಾಥರ್ ಅವರ ಸಹೋದರ - ಡಾ. ಅದೀಲ್ ರಾಥರ್ ಅವರ ಪಾತ್ರ ಇನ್ನೂ ತನಿಖೆಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀರಾವರಿ ಯೋಜನೆ: ಡಿಕೆಶಿ ಕೊಂಡಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದ ಅನ್ಯಾಯ ಬಗ್ಗೆ ಮೌನ ತಾಳಿರುವ BJP-JDS ಸಂಸದರ ವಿರುದ್ಧ ಕಿಡಿ

ಬೆಳೆಗಾರರ ಹೆಸರಲ್ಲಿ ಕಬ್ಬಿನ ಟ್ರ್ಯಾಕ್ಟರ್'ಗಳಿಗೆ ಬೆಂಕಿ: ತನಿಖೆಗೆ ರಾಜ್ಯ ಸರ್ಕಾರ ಆದೇಶ

ಮುಸ್ಲಿಂ-ಯಾದವ್ RJD ತುಷ್ಠಿಕರಣಕ್ಕೆ ಬುದ್ಧಿ ಕಲಿಸಿದ್ದು ನಮ್ಮ ಮಹಿಳೆ-ಯುವಕರ M-Y ಸೂತ್ರ: ಪ್ರಧಾನಿ ಮೋದಿ

ಬಿಹಾರ ಚುನಾವಣೆಯಲ್ಲಿ ಅನ್ಯಾಯ; ಫಲಿತಾಂಶಗಳು ಆಘಾತಕಾರಿ: ಹೀನಾಯ ಸೋಲಿನ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ!

ಬಿಹಾರ ಸಿಎಂ ಗಾದಿಯಲ್ಲಿ ಮುಂದುವರೆಯುತ್ತಾರಾ ನಿತೀಶ್ ಕುಮಾರ್?: ಮೋದಿಯ ಹನುಮಾನ್ ಚಿರಾಗ್ ಪಾಸ್ವಾನ್ ಹೇಳಿದ್ದೇನು?

SCROLL FOR NEXT