ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆಯುವಲ್ಲಿ 'ಜನ್ ಸುರಾಜ್' ವಿಫಲವಾಗಿದ್ದು, ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ಕುರಿತು ಶನಿವಾರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ಸೋಲಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದೆ. ಮಹಿಳೆಯರ ಖಾತೆಗಳಿಗೆ ನಗದು ವರ್ಗಾವಣೆ ಎನ್‌ಡಿಎ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದೆ.
ಭರ್ಜರಿ ಪ್ರಚಾರ ಹಾಗೂ ರಾಜ್ಯದಲ್ಲಿನ ನಿರುದ್ಯೋಗ, ವಲಸೆ ಮತ್ತು ಕೈಗಾರಿಕೆಗಳ ಕೊರತೆಯಂತಹ ಸಮಸ್ಯೆಗಳನ್ನು ಎತ್ತಿದರೂ ಪಕ್ಷ ಮತಗಳನ್ನು ಕ್ರೋಢೀಕರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನ್ ಸುರಾಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್, ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ನಾವು ನಿರಾಶೆಗೊಂಡಿದ್ದೇವೆ ಆದರೆ ಅಸಮಾಧಾನಗೊಂಡಿಲ್ಲ. ನಾವು ಒಂದೇ ಒಂದು ಸ್ಥಾನವನ್ನು ಗೆಲ್ಲದಿದ್ದರೂ, ಆಡಳಿತಾರೂಢ ಎನ್‌ಡಿಎಯನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಬಿಹಾರದಲ್ಲಿ ಮುಸ್ಲಿಂ ಮತದಾರರನ್ನು ಮನವೊಲಿಸುವಲ್ಲಿ ಪಕ್ಷ ಸಾಧ್ಯವಾಗಲಿಲ್ಲ. ಜನರು ಆರ್‌ಜೆಡಿ ಅಧಿಕಾರಕ್ಕೆ ಬರುವುದನ್ನು ಬಯಸಿಲ್ಲ ಎಂಬುದನ್ನು ಜನಾದೇಶವು ಸಾಬೀತುಪಡಿಸಿದೆ ಎಂದು ಸಿಂಗ್ ಹೇಳಿದರು.
ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಸರ್ಕಾರ ಮಹಿಳೆಯರ ಖಾತೆಗಳಿಗೆ ರೂ. 40,000 ಕೋಟಿ ನಗದು ವರ್ಗಾವಣೆ ಅದರ ಗೆಲುವಿನಲ್ಲಿ "ಪ್ರಮುಖ ಪಾತ್ರ" ವಹಿಸಿದೆ. ಮಹಿಳಾ ರೋಜ್‌ಗಾರ್ ಯೋಜನೆಯಡಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನು ವರ್ಗಾಯಿಸಲಾಗಿದೆ. ಚುನಾವಣೆಗೆ ಮುಂಚಿತವಾಗಿ ಜನರಿಗೆ ಲಂಚ ನೀಡಿ ಮತಗಳ ಖರೀದಿಸಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರವೂ ನಗದು ಪ್ರಯೋಜನಗಳನ್ನು ವರ್ಗಾಯಿಸಲಾಗಿದೆ" ಎಂದು ಅವರು ಆರೋಪಿಸಿದರು.
ಈಗ ಉಳಿದ 2 ಲಕ್ಷ ರೂ.ಗಳನ್ನು ಸರ್ಕಾರವು ರಾಜ್ಯದ ಮಹಿಳೆಯರ ಖಾತೆಗಳಿಗೆ ಹೇಗೆ ವರ್ಗಾಯಿಸುತ್ತದೆ ಎಂದು ನೋಡಲು ನಾವು ಕಾಯುತ್ತಿದ್ದೇವೆ. ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಶೇಕಡಾ 50 ರಷ್ಟು ಮತಗಳನ್ನು ಸಹ ಪಡೆದಿಲ್ಲ ಎಂದು ಅವರು ಹೇಳಿದರು. ಜೆಡಿಯು 25 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರುವಂತೆಯೇ ಪ್ರಶಾಂತ್ ಕಿಶೋರ್ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, "ನೀವು ಈ ಪ್ರಶ್ನೆಯನ್ನು ಕಿಶೋರ್‌ಗೆ ಅವರನ್ನೇ ಕೇಳಬೇಕು"ಎಂದು ಹೇಳಿದರು.