ಸಾಂದರ್ಭಿಕ ಚಿತ್ರ 
ದೇಶ

ಬಿಹಾರದಲ್ಲಿ NDA ಅಧಿಕಾರ ಹಂಚಿಕೆ ಸೂತ್ರ ಅಂತಿಮ: ಯಾರಿಗೆ ಎಷ್ಟು ಸಚಿವ ಖಾತೆ?

ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಎನ್ ಡಿಎ ಸಭೆಯಲ್ಲಿ ಬಿಜೆಪಿಯಿಂದ ಸುಮಾರು 15 ರಿಂದ 16 ಸಚಿವರು, ಜೆಡಿಯುನಿಂದ ಸುಮಾರು 14 ಸಚಿವರು ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಾಟ್ನಾ: ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ ಜೆಡಿಯು ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದರೂ, ಬಿಹಾರದ ಹೊಸ ಸರ್ಕಾರದಲ್ಲಿ ಬಿಜೆಪಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವ ಸಾಧ್ಯತೆಯಿದೆ ಎಂದು ಸಂಪುಟ ರಚನೆಗೆ ಸಂಬಂಧಿಸಿದ ವಿವರಗಳ ಬಗ್ಗೆ ತಿಳಿದಿರುವ ಮೂಲಗಳು ಭಾನುವಾರ ತಿಳಿಸಿವೆ.

ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಎನ್ ಡಿಎ ಸಭೆಯಲ್ಲಿ ಬಿಜೆಪಿಯಿಂದ ಸುಮಾರು 15 ರಿಂದ 16 ಸಚಿವರು, ಜೆಡಿಯುನಿಂದ ಸುಮಾರು 14 ಸಚಿವರು ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನವೆಂಬರ್ 6 ಮತ್ತು 11 ರಂದು ನಡೆದ 243 ಸದಸ್ಯರ ವಿಧಾನಸಭೆಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಮತ್ತು ಜೆಡಿಯು 85 ಸ್ಥಾನಗಳನ್ನು ಗೆದ್ದಿದೆ.

19 ಸ್ಥಾನಗಳನ್ನು ಪಡೆದಿರುವ NDA ಮೈತ್ರಿಪಕ್ಷವಾದ ಲೋಕ ಜನ ಶಕ್ತಿ (ರಾಮ್ ವಿಕಾಸ್) ಪಕ್ಷ ಮೂರು ಕ್ಯಾಬಿನೆಟ್ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಪಕ್ಷವನ್ನು ಗೆದ್ದ ಜಿತನ್ ರಾಮ್ ಮಾಂಝಿ ಐದು ಸ್ಥಾನಗಳನ್ನು ಗಳಿಸಿದರೆ, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು ತಲಾ ಒಂದು ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಆರು ಶಾಸಕರಿಗೆ ಒಂದು ಸಚಿವ ಸ್ಥಾನದ ಸೂತ್ರವನ್ನು ಸಹ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 19 ಅಥವಾ 20 ರಂದು ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA 202 ಸ್ಥಾನಗಳನ್ನು ಗಳಿಸಿತು. ಬಿಜೆಪಿ 89 ಸ್ಥಾನ ಪಡೆಯುವುದರೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್, ಆರ್ ಜೆಡಿ ಹಾಗೂ ಮೂರು ಎಡ ಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್ 35 ಸ್ಥಾನ ಗಡಿಯನ್ನು ದಾಟಲು ಹೆಣಗಾಡಿದೆ.

ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) 238 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಖಾತೆ ತೆರೆಯಲು ವಿಫಲವಾಯಿತು. ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಐದು ಸ್ಥಾನಗಳನ್ನು ಗೆದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 42 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

ಬಿಹಾರ: ನ. 20ಕ್ಕೆ ನೂತನ ಸಿಎಂ ಪದ ಗ್ರಹಣ, ಪ್ರಧಾನಿ ಮೋದಿ ಸಮಾರಂಭದಲ್ಲಿ ಭಾಗಿ!

ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್: ಸಿಎಂ ಸಿದ್ದರಾಮಯ್ಯ ಓಟಕ್ಕೆ 'ಬಂಡೆ' ಬ್ರೇಕ್! KN ರಾಜಣ್ಣ ಕಮ್ ಬ್ಯಾಕ್?

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ

SCROLL FOR NEXT