ನೈನಿತಾಲ್: ಜನರ ಫೋನ್‌ಗಳನ್ನು ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸುತ್ತಿದ್ದ ಆರೋಪದ ಮೇಲೆ ಉತ್ತರಾಖಂಡ ಪೊಲೀಸರು ಪ್ರಮುಖ ಅಂತರರಾಜ್ಯ ಸೈಬರ್ ಅಪರಾಧ ಜಾಲದ ನಾಲ್ವರನ್ನು ಬಂಧಿಸಿದ್ದಾರೆ.
ಈ ಗ್ಯಾಂಗ್, ಜನರ ಫೋನ್‌ಗಳಿಗೆ ಪ್ರವೇಶ ಪಡೆಯಲು ಸಾಮಾಜಿಕ ಮಾಧ್ಯಮದಲ್ಲಿ ಲಿಂಕ್‌ಗಳನ್ನು ಕಳುಹಿಸುತ್ತಿತ್ತು ಎನ್ನಲಾಗಿದೆ. ಎಲ್ಲಾ ವಹಿವಾಟುಗಳನ್ನು "ಮ್ಯೂಲ್ ಖಾತೆಗಳಿಗೆ" ವರ್ಗಾವಣೆ ಮಾಡಲಾಗಿದ್ದು, ಅವರ ಗುರುತನ್ನು ಮರೆಮಾಚಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, 3.37 ಕೋಟಿ ರೂ.ಗಳ ವಹಿವಾಟು ಅನುಮಾನಾಸ್ಪದವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಚಂದ್ರ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರು ಶನಿವಾರ ನಡೆಸಿದ ತಪಾಸಣೆಯ ಸಮಯದಲ್ಲಿ ದೋ ಗಾಂವ್‌ನ ಭೇದಿಯಪಖಾಡ್ ಮೋಡ್‌ನಲ್ಲಿ ತಲ್ಲಿಟಲ್ ಪೊಲೀಸರು ಕಾರೊಂದನ್ನು ತಡೆದರು.
ಕಾರಿನಲ್ಲಿದ್ದ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ 11 ಫೋನ್‌ಗಳು, ಒಂಬತ್ತು ಸಿಮ್ ಕಾರ್ಡ್‌ಗಳು, ಹಲವಾರು ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು, ಚೆಕ್ ಬುಕ್ ಗಳು, QR ಕೋಡ್‌ಗಳು ಮತ್ತು ಹಲವಾರು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿವೆ.
ವಿಚಾರಣೆಯ ಸಮಯದಲ್ಲಿ, ಆರೋಪಿಗಳು, ಫೋನ್‌ಗಳನ್ನು ಪ್ರವೇಶಿಸಲು ಅವರು ಸಾಮಾಜಿಕ ಮಾಧ್ಯಮದ ಮೂಲಕ APK ಫೈಲ್‌ಗಳನ್ನು ಕಳುಹಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.
ಮೊಬೈಲ್ ಗಳನ್ನು ಹ್ಯಾಕ್ ಮಾಡಿದ ನಂತರ, ಅವರು ವಿವಿಧ "ಮ್ಯೂಲ್ ಖಾತೆಗಳಿಗೆ" ಹಣವನ್ನು ವರ್ಗಾಯಿಸಿದ್ದಾರೆ. ದೆಹಲಿಯಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಗೆ QR ಕೋಡ್ ಅನ್ನು ಲಿಂಕ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜಸ್ಥಾನದ ಅಲ್ವಾರ್‌ನ ಶುಭಂ ಗುಪ್ತಾ, ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಪಿಯೂಷ್ ಗೋಯಲ್, ಉತ್ತರ ಪ್ರದೇಶದ ಗಾಜಿಯಾಬಾದ್‌ನ ರಿಷಭ್ ಕುಮಾರ್ ಮತ್ತು ಹರಿಯಾಣದ ಗುರುಗ್ರಾಮ್‌ನ ಮೋಹಿತ್ ರಥಿ ಎಂದು ಗುರುತಿಸಲಾಗಿದೆ.