ಸಾಂದರ್ಭಿಕ ಚಿತ್ರ 
ದೇಶ

SIR ಕೆಲಸ ಬಹಿಷ್ಕರಿಸಿದ ತಮಿಳುನಾಡು ಕಂದಾಯ ಇಲಾಖೆ ನೌಕರರು!

"ನಾವು ಇಂದಿನಿಂದ SIR ಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ಹಾಜರಾಗುತ್ತಿಲ್ಲ" ಎಂದು FERA ರಾಜ್ಯ ಸಂಯೋಜಕ ಎಂ ಪಿ ಮುರುಗಯನ್ ಅವರು ತಿಳಿಸಿದ್ದಾರೆ.

ಚೆನ್ನೈ: ಅತಿಯಾದ ಕೆಲಸದ ಹೊರೆ, ಸಾಕಷ್ಟು ಮಾನವಶಕ್ತಿ, ಗಡುವಿನ ಒತ್ತಡ ಮತ್ತು ಅಸಮರ್ಪಕ ತರಬೇತಿಯನ್ನು ವಿರೋಧಿಸಿ ತಮಿಳುನಾಡು ಕಂದಾಯ ಇಲಾಖೆ ನೌಕರರ ಸಂಘಗಳ ಒಕ್ಕೂಟ(FERA)ದ ಸದಸ್ಯರು ಮಂಗಳವಾರದಿಂದ SIR ಕೆಲಸವನ್ನು ಬಹಿಷ್ಕರಿಸಿದ್ದಾರೆ.

ಬಹಿಷ್ಕಾರಕ್ಕೆ ಮುಂಚಿತವಾಗಿ ಸೋಮವಾರ ಸಂಜೆ "ಪೆರುಂದಿರಲ್(ಸಾಮೂಹಿಕ) ಮನವಿ" ಕಾರ್ಯಕ್ರಮದ ಸಂದರ್ಭದಲ್ಲಿ ಸಂಘದ ಸದಸ್ಯರು 32 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ SIR ಕೆಲಸ ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಿದರು ಎಂದು ಸಂಘ ತಿಳಿಸಿದೆ.

"ನಾವು ಇಂದಿನಿಂದ SIR ಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ಹಾಜರಾಗುತ್ತಿಲ್ಲ" ಎಂದು FERA ರಾಜ್ಯ ಸಂಯೋಜಕ ಎಂ ಪಿ ಮುರುಗಯನ್ ಅವರು ತಿಳಿಸಿದ್ದಾರೆ.

ಆದರೆ ಕಂದಾಯ ಇಲಾಖೆಯ ನಿಯಮಿತ ಕೆಲಸ ಮುಂದುವರಿಯುತ್ತದೆ. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕೆಲಸ ಬಹಿಷ್ಕಾರದಿಂದಾಗಿ ಇಲಾಖೆಯ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

ಎಲ್ಲಾ ಅಧಿಕಾರಿಗಳಿಗೆ ಸರಿಯಾದ ತರಬೇತಿ, ಹೆಚ್ಚುವರಿ ಅಧಿಕಾರಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಾಗಿ ನೇಮಿಸುವುದು ಮತ್ತು BLO ಮಟ್ಟದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿ ರಾಜ್ಯವ್ಯಾಪಿ ಎಸ್ಐಆರ್ ಕೆಲಸವನ್ನು ಬಹಿಷ್ಕರಿಸಲಾಗಿದೆ.

ಜಿಲ್ಲಾಧಿಕಾರಿಗಳು ಮಧ್ಯರಾತ್ರಿಯವರೆಗೆ ಪರಿಶೀಲನಾ ಸಭೆಗಳನ್ನು ನಡೆಸುವುದನ್ನು ಮತ್ತು ವಿಮರ್ಶೆಗಳ ಹೆಸರಿನಲ್ಲಿ ಪ್ರತಿದಿನ ಮೂರು ವಿಡಿಯೋ ಕಾನ್ಫೆರೆನ್ಸ್ ಸಭೆ ನಡೆಸುವುದನ್ನು ಸಂಘ ವಿರೋಧಿಸಿದೆ.

ಎಸ್ಐಆರ್ ಪೂರ್ಣಗೊಳಿಸಲು ಡಿಸೆಂಬರ್ 4ರ ಡೆಡ್ ಲೈನ್ ನೀಡಲಾಗಿದ್ದು, ವಿಶೇಷ ಸಮಗ್ರ ಪರಿಷ್ಕರಣೆಯು ಫಾರ್ಮ್‌ಗಳನ್ನು ವಿತರಿಸುವುದು ಮತ್ತು ಸಂಗ್ರಹಿಸುವುದು, ಅವುಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು ಮತ್ತು ಪರಿಶೀಲನಾ ಸಭೆಗಳನ್ನು ನಡೆಸುವುದನ್ನು ಒಳಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

'ಬೆಂಗಳೂರು ಟೆಕ್ ಸಮ್ಮಿಟ್ 2025'ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Delhi blast: ಸ್ಫೋಟಕ್ಕೂ ಮುನ್ನ 'ಆತ್ಮಾಹುತಿ ಬಾಂಬ್ ದಾಳಿ' ಬಗ್ಗೆ ಮಾತಾಡಿದ ಡಾ. ಉಮರ್; ವಿಡಿಯೋದಲ್ಲಿ ಉಗ್ರ ಹೇಳಿದ್ದೇನು?

ನೌಕರಿ, ಹಣಕಾಸು ದಾಂಪತ್ಯ - ಹೀಗಿದೆ ಈ ವಾರದ ಭವಿಷ್ಯ

ಆಂಧ್ರ ಪ್ರದೇಶ: ಮೋಸ್ಟ್ ವಾಂಟೆಂಡ್ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ಸೇರಿ ಆರು ಮಂದಿ ಎನ್‌ಕೌಂಟರ್‌ಗೆ ಬಲಿ

SCROLL FOR NEXT