ಪ್ರಶಾಂತ್ ಕಿಶೋರ್ 
ದೇಶ

JD-U 2 ಲಕ್ಷ ರೂಪಾಯಿ ಚುನಾವಣೆ ಭರವಸೆಯನ್ನು ಈಡೇರಿಸಿದರೆ ನಾನು ರಾಜಕೀಯ ತೊರೆಯುತ್ತೇನೆ: ಪ್ರಶಾಂತ್ ಕಿಶೋರ್

ಜನ ಸುರಾಜ್ ಪಕ್ಷವು ಪ್ರಾಮಾಣಿಕ ಪ್ರಯತ್ನ ಮಾಡಿತು. ಆದರೆ ಚುನಾವಣೆಯಲ್ಲಿ ಒಂದು ಗುರುತು ಮೂಡಿಸಲು ವಿಫಲವಾಯಿತು ಮತ್ತು ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತಾನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ವಿಧಾನಸಭಾ ಚುನಾವಣೆಗೆ ಮೊದಲು ಪ್ರತಿ ಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ 10,000 ರಿಂದ 60,000 ಫಲಾನುಭವಿಗಳಿಗೆ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದನ್ನು ನೀಡದಿದ್ದರೆ ಮತ್ತು ಸ್ವಯಂ ಉದ್ಯೋಗ ಉಪಕ್ರಮಗಳ ಅಡಿಯಲ್ಲಿ ರಾಜ್ಯಾದ್ಯಂತ 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂ.ಗಳ ಭರವಸೆ ನೀಡದೆ ಇರುತ್ತಿದ್ದರೆ ಇಂದು ಜೆಡಿಯು ಕೇವಲ 25 ಸ್ಥಾನ ಗಳಿಸಿ ಸೋಲುತ್ತಿತ್ತು ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಜನ ಸುರಾಜ್ ಪಕ್ಷವು ಪ್ರಾಮಾಣಿಕ ಪ್ರಯತ್ನ ಮಾಡಿತು. ಆದರೆ ಚುನಾವಣೆಯಲ್ಲಿ ಒಂದು ಗುರುತು ಮೂಡಿಸಲು ವಿಫಲವಾಯಿತು ಮತ್ತು ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತಾನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು.

ರಾಷ್ಟ್ರ ಮಟ್ಟದಲ್ಲಿ ಮತಗಳ್ಳತನ

'ವೋಟ್ ಚೋರಿ' (ಮತಗಳ ಕಳ್ಳತನ) ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತದೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದ ಪ್ರಶಾಂತ್ ಕಿಶೋರ್, ರಾಷ್ಟ್ರೀಯ ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಮತ್ತು ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬೇಕೆಂದು ಒತ್ತಾಯಿಸಿದರು.

ನಮಗೆ ಹಿನ್ನಡೆಯಾಗಿದೆ ಆದರೆ ನಾವು ತಪ್ಪುಗಳನ್ನು ಸರಿಪಡಿಸುತ್ತೇವೆ. ನಮ್ಮನ್ನು ನಾವು ಮತ್ತೆ ರಾಜಕೀಯವಾಗಿ ನಿರ್ಮಿಸಿಕೊಂಡು ಬಲವಾಗಿ ಮತ್ತೆ ಬರುತ್ತೇವೆ. ನಮಗೆ ಹಿಂದೆ ಸರಿಯುವ ಯಾವುದೇ ಮಾರ್ಗವಿಲ್ಲ ಎಂದು ಅವರು ಪ್ರತಿಪಾದಿಸಿದರು. ಜಾತಿ ಮತ್ತು ಧಾರ್ಮಿಕ ಆಧಾರದ ಮೇಲೆ ಜನರನ್ನು ವಿಭಜಿಸಿ ಹಣ ಬಳಸಿ ಜನರ ಮತಗಳನ್ನು ಖರೀದಿಸಿದ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರಂತೆ ಬಿಹಾರವನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾದೆವು ಎಂದರು.

ಮತಗಳನ್ನು ಪಡೆಯದಿರುವುದು ಅಪರಾಧವಲ್ಲ. ನಾನು ಭ್ರಷ್ಟಾಚಾರ ಅಥವಾ ವಿಭಜಕ ರಾಜಕೀಯದಲ್ಲಿ ತೊಡಗಿಲ್ಲ ಎಂಬುದೇ ಖುಷಿಯ ವಿಚಾರ. ಎನ್‌ಡಿಎ ಸರ್ಕಾರ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿದರೆ ಮತ್ತು ಸ್ವ-ಉದ್ಯೋಗ ಉಪಕ್ರಮಗಳ ಅಡಿಯಲ್ಲಿ ತಲಾ 1.5 ಕೋಟಿ ಮಹಿಳೆಯರಿಗೆ ತಲಾ 2 ಲಕ್ಷ ರೂ.ಗಳನ್ನು ನೀಡಿದರೆ, ರಾಜಕೀಯವನ್ನು ಖಂಡಿತವಾಗಿಯೂ ತ್ಯಜಿಸುತ್ತೇನೆ ಎಂದು ಕಿಶೋರ್ ಹೇಳಿದರು.

ಹಣ ಸಿಗದವರು ನಮ್ಮ ಪಕ್ಷಕ್ಕೆ ಬನ್ನಿ

ಜನರು ಎನ್‌ಡಿಎಗೆ ಜನಾದೇಶ ನೀಡಿದ್ದಾರೆ, ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಚುನಾವಣಾ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುವುದು ಅವರ ಹೆಗಲ ಮೇಲಿದೆ ಎಂದು ಹೇಳಿದರು. ಸ್ವ-ಉದ್ಯೋಗ ಬಹಳ ಮುಖ್ಯ; ಅವರು ಭರವಸೆ ನೀಡಿದ 2 ಲಕ್ಷ ರೂ.ಗಳನ್ನು ನೀಡಬೇಕು. ಆರು ತಿಂಗಳೊಳಗೆ ಹಣ ಸಿಗದ ಜನರು ಜನ್ ಸುರಾಜ್‌ಗೆ ಬರಬಹುದು, ಅವರಿಗೆ ಮೊತ್ತ ಸಿಗುವಂತೆ ನೋಡಿಕೊಳ್ಳಲು ನಾವು ಹೋರಾಡುತ್ತೇವೆ ಎಂದು ಹೇಳಿದರು. ನವೆಂಬರ್ 20 ರಂದು ಪಶ್ಚಿಮ ಚಂಪಾರಣ್ ಜಿಲ್ಲೆಯ ಬಿತಿಹರ್ವಾದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು. ಆಗ ಹೊಸ ಎನ್‌ಡಿಎ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 202 ಸ್ಥಾನಗಳನ್ನು ಗೆದ್ದು ಎನ್‌ಡಿಎ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿತು. ಬಿಜೆಪಿ 89, ಜೆಡಿ(ಯು) 85, ಎಲ್‌ಜೆಪಿ(ಆರ್‌ವಿ) 19, ಎಚ್‌ಎಎಂ 5 ಮತ್ತು ಆರ್‌ಎಲ್‌ಎಂ 4 ಸ್ಥಾನಗಳನ್ನು ಗೆದ್ದುಕೊಂಡಿತು. ಜನ್ ಸುರಾಜ್ ಪಕ್ಷವು ತನ್ನ ಮೊದಲ ಚುನಾವಣೆಯಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

'Glad Was In Audience': ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್, ಗುಲಾಮ ಮನಸ್ಥಿತಿ ಕುರಿತ ಹೇಳಿಕೆ, ಕಾಂಗ್ರೆಸ್ ಕೆಂಡ!

'ವಾರಕ್ಕೆ 72 ಗಂಟೆ ಕೆಲಸ, ಮನಸ್ಥಿತಿ ಬದಲಾಗಬೇಕು, ಪ್ರಧಾನಿ ಮೋದಿ ಆದರ್ಶ': ಚೀನಾ ಹಿಂದಿಕ್ಕಲು ಇನ್ಫೋಸಿಸ್ ನಾರಾಯಣ ಮೂರ್ತಿ '9,9,6' ಸೂತ್ರ!

Delhi blast: ಸ್ಫೋಟಕ್ಕೂ ಮುನ್ನ 'ಆತ್ಮಾಹುತಿ ಬಾಂಬ್ ದಾಳಿ' ಬಗ್ಗೆ ಮಾತಾಡಿದ ಡಾ. ಉಮರ್; ವಿಡಿಯೋದಲ್ಲಿ ಉಗ್ರ ಹೇಳಿದ್ದೇನು?

'ಬೆಂಗಳೂರು ಟೆಕ್ ಸಮ್ಮಿಟ್ 2025'ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

SCROLL FOR NEXT