ನವದೆಹಲಿ: ದೆಹಲಿಯಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಡಾ. ಉಮರ್ ಉನ್ ನಬಿ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಕೆಲಸ ಮಾಡುತ್ತಿದ್ದಾಗ ಮಹಿಳಾ ರೋಗಿಗಳೊಂದಿಗೆ ಮಾತನಾಡಿದ ರೀತಿ, ಅವರು ತೀವ್ರ ಮೂಲಭೂತವಾದಿಗಳಾಗಿದ್ದರು ಎಂಬುದನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಇದು ಆತ್ಮಾಹುತಿ ಬಾಂಬರ್ ಆಗಿ ಮಾರ್ಪಟ್ಟು 13 ಜನರನ್ನು ಕೊಂದ ವೈದ್ಯನ ಚಿಂತನೆ ಬಗ್ಗೆ ತನಿಖಾಧಿಕಾರಿಗಳಿಗೆ ಸ್ಪಷ್ಪ ಚಿತ್ರಣ ನೀಡಿದೆ.
ಸಮಸ್ಯಾತ್ಮಕ" ಎಂದು ಭಾವಿಸುವ ಮಹಿಳಾ ರೋಗಿಗಳನ್ನು ಅವರು ಹೆಚ್ಚಾಗಿ ಗುರುತಿಸುತ್ತಿದ್ದರು. ಹಿಜಾಬ್ ಧರಿಸದಿರುವ ಬಗ್ಗೆ ಕೇಳುತ್ತಿದ್ದರು ಎಂದು ಅನಂತ್ ನಾಗ್ ನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ (GMC) ಕೆಲಸ ಮಾಡುತ್ತಿದ್ದಾಗ ನೋಡಿದ್ದ ಜನರು ಹೇಳುತ್ತಾರೆ.
ಡಾ. ಉಮರ್ ಉನ್ ನಬಿ ಮಹಿಳಾ ರೋಗಿಗಳೊಂದಿಗೆ ಮಾತನಾಡುತ್ತಿದ್ದನ್ನುಕೇಳಿದ್ದೇವೆ. 'ನೀವು ಹಿಜಾಬ್ ಏಕೆ ಧರಿಸುತ್ತಿಲ್ಲ? ನಿಮ್ಮ ತಲೆಯನ್ನು ಏಕೆ ಸರಿಯಾಗಿ ಮುಚ್ಚಿಲ್ಲ' ಎಂದು ಕೇಳುವುದನ್ನು ನಾವು ಕೇಳಿದ್ದೇವೆ" ಎಂದು ಜನರು ಹೇಳಿರುವುದಾಗಿ ಮೂಲಗಳು ತಿಳಿಸಿದೆ.
ನೀವು ಎಷ್ಟು ಬಾರಿ ನಮಾಜ್ ಮಾಡುತ್ತೀರಿ?" ಎಂದು ಕೇಳುತ್ತಿದ್ದ. ಆಸ್ಪತ್ರೆಯ ಇತರರು ನಬಿಯನ್ನು ಧಾರ್ಮಿಕ ವಿಚಾರದಲ್ಲಿ ಕಠಿಣ ವಿಧಾನವನ್ನು ಹೊಂದಿದ್ದ ವ್ಯಕ್ತಿ ಎಂದು ತಿಳಿದಿದ್ದನ್ನು ನೆನಪಿಸಿಕೊಂಡರು. ನಬಿ ಇತರ ಧರ್ಮಗಳ ಮೇಲೆ ಇಸ್ಲಾಮಿಕ್ ಪ್ರಾಬಲ್ಯವನ್ನು ಹೇರಲು ಬಯಸುವ ಅತ್ಯಂತ ಆಮೂಲಾಗ್ರ ವ್ಯಕ್ತಿ ಆಗಿದ್ದ ಎಂದು ಕೆಲವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ತರಗತಿಯಲ್ಲಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲು ಸಹ ಆತ ಕರೆ ನೀಡಿದ್ದ ಎನ್ನಲಾಗಿದೆ.
ಕೆಲವು ರೋಗಿಗಳು ಆತ ಪ್ರಶ್ನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಂತಿಮವಾಗಿ, ರೋಗಿಗಳು ಜಿಎಂಸಿ ಅನಂತನಾಗ್‌ಗೆ ದೂರು ಸಲ್ಲಿಸಿದ್ದರು. ನಂತರ ಆಡಳಿತ ಮಂಡಳಿಯು ಅವರನ್ನು ಕೆಲಸದಿಂದ ವಜಾಗೊಳಿಸಿತು.