ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಆಸ್ಪತ್ರೆಯಲ್ಲಿಯೇ ತಾಳಿ ಕಟ್ಟಿದ ವರ 
ದೇಶ

ಕೇರಳ: ಮದುವೆ ದಿನವೇ ಅಪಘಾತ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಆಸ್ಪತ್ರೆಯಲ್ಲಿಯೇ ತಾಳಿ ಕಟ್ಟಿದ ವರ!

ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಇಂದು ಬೆಳಗ್ಗೆಯೇ ಮನೆಯಿಂದ ತೆರಳಿದ್ದ ವಧು ಅವನಿ ಅನಿರೀಕ್ಷಿತ ಅಪಘಾತದಿಂದ ಗಾಯಗೊಂಡಿದ್ದಾರೆ.

ಕೊಚ್ಚಿ: ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ವರ ತಾಳಿ ಕಟ್ಟಿರುವ ಘಟನೆ ನಡೆದಿದೆ.

ಹೌದು. ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಇಂದು ಬೆಳಗ್ಗೆಯೇ ಮನೆಯಿಂದ ತೆರಳಿದ್ದ ವಧು ಅವನಿ ಅನಿರೀಕ್ಷಿತ ಅಪಘಾತದಿಂದ ಗಾಯಗೊಂಡಿದ್ದಾರೆ. ಆರಂಭದಲ್ಲಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಧಾವಿಸಿದ ನಂತರ ಅವರನ್ನು ವಿಶೇಷ ಆರೈಕೆಗಾಗಿ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬೆನ್ನುಮೂಳೆಯ ಗಾಯದಿಂದ ತೀವ್ರವಾದ ನೋವಿನ ಹೊರತಾಗಿಯೂ, ಅವನಿ ಮತ್ತು ವರ ಶರೋನ್ ಅವರ ದೃಢಸಂಕಲ್ಪ ಕೊನೆಗೂ ನೇರವೇರಿದೆ. ಆಸ್ಪತ್ರೆಯೊಳಗೆ ವಿವಾಹ ನಡೆದಿದೆ. ಅವನಿ ತುರ್ತು ವಾರ್ಡ್‌ನಲ್ಲಿ ಹಾಸಿಗೆಯ ಮೇಲೆ ಮಲಗಿರುವಂತೆಯೇ ಆಕೆಯ ಕುತ್ತಿಗೆಗೆ ಶರೋನ್ ತಾಳಿ ಕಟ್ಟಿದ್ದಾರೆ. ಕುಟುಂಬ ಸದಸ್ಯರು ಇದಕ್ಕೆ ಸಾಕ್ಷಿಯಾಗಿದ್ದು, ಅವರ ವಿವಾಹ ಪ್ರತಿಜ್ಞೆಯನ್ನು ಪೂರೈಸಿದ್ದಾರೆ.

ಅವನಿ ತುರ್ತು ವಿಭಾಗದಲ್ಲಿ ದಾಖಲಾಗಿದ್ದು, ಮಧ್ಯಾಹ್ನ 12:15 ರಿಂದ 12:30 ರ ನಡುವೆ ಮದುವೆ ನಡೆದಿದೆ. ಆಸ್ಪತ್ರೆಯಲ್ಲಿಯೇ ಸಮಾರಂಭ ನಡೆಸಬೇಕೆಂದು ವರನ ಕುಟುಂಬ ಮನವಿ ಮೇರೆಗೆ ಇಲ್ಲಿಯೇ ಮದುವೆ ನಡೆಸಿದ್ದೇವೆ ಎಂದು ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಸಮಾರಂಭದ ನಂತರ, ಅವನಿಯನ್ನು ಐಸಿಯುಗೆ ಸ್ಥಳಾಂತರಿಸಲಾಯಿತು

. ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧೀಶ್ ಕರುಣಾಕರನ್ ಅವರ ಆರೈಕೆಯಲ್ಲಿ ಶನಿವಾರ ಅವನಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಮಧ್ಯೆ ಆಲಪ್ಪುಳದಲ್ಲಿರುವ ವಿವಾಹ ಸ್ಥಳಕ್ಕೆ ಆಗಮಿಸಿದ ಅತಿಥಿಗಳಿಗೆ ಮೊದಲೇ ಯೋಜಿಸಿದಂತೆ ಭರ್ಜರಿ ಊಟ ನೀಡಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಎಂದೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ; ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

ಕೇರಳ, ಯುಪಿ, ಇತರ ರಾಜ್ಯಗಳಲ್ಲಿ SIR ವಿರುದ್ಧ ಹೊಸ ಅರ್ಜಿ: EC ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

Karnataka Politics: 'ನನ್ ಹತ್ರ ಯಾವ್ ಬಣ್ಣನೂ ಇಲ್ಲ.. ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ': ಡಿಕೆ ಶಿವಕುಮಾರ್, Video

'ಹಾರರ್ ಚಿತ್ರ ಮಾಡಲು ನಿರ್ದೇಶಕರು ದೆವ್ವವಾಗಬೇಕೇ'? ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ರಾಜ ಗೋಪಾಲ್ ವರ್ಮಾ!

'ಕೈ ಇಟ್ಟಲೆಲ್ಲಾ ದುಡ್ಡೋ ದುಡ್ಡು..': ಕರ್ನಾಟಕದಿಂದ ಕೇರಳಕ್ಕೆ ಹಣ ಕಳ್ಳಸಾಗಣೆ, 3.15 ಕೋಟಿ ರೂ. ನಗದು ಕಸ್ಟಮ್ಸ್ ವಶಕ್ಕೆ! Video

SCROLL FOR NEXT