ಆಫ್ರಿಕಾದಲ್ಲಿ ನಡೆಯುತ್ತಿರುವ ಮೊದಲ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಶುಕ್ರವಾರ ಬೆಳಗ್ಗೆ ದಕ್ಷಿಣ ಆಫ್ರಿಕಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಇಂದು ನವೆಂಬರ್ 21 ರಿಂದ 23 ರವರೆಗೆ ನಡೆಯುವ ಶೃಂಗಸಭೆಯಲ್ಲಿ ಮೋದಿ ಅವರು ಭಾಗವಹಿಸಲಿದ್ದು, ಇದು ಆಫ್ರಿಕಾ ಖಂಡದಲ್ಲಿ ನಡೆಯುವ ಮೊದಲ ಜಿ20 ಶೃಂಗಸಭೆಯಾಗಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.
2016 ರಲ್ಲಿ ದ್ವಿಪಕ್ಷೀಯ ಭೇಟಿ ಮತ್ತು 2018 ಮತ್ತು 2023 ರಲ್ಲಿ ನಡೆದ ಎರಡು ಬ್ರಿಕ್ಸ್ ಶೃಂಗಸಭೆಗಳಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಅವರು ದಕ್ಷಿಣ ಆಫ್ರಿಕಾಕ್ಕೆ ನೀಡುವ ನಾಲ್ಕನೇ ಅಧಿಕೃತ ಭೇಟಿ ಇದಾಗಿದೆ.
ಜೋಹಾನ್ಸ್‌ಬರ್ಗ್‌ನಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ, ಜಿ20 ಹೊರತಾಗಿ ಪ್ರಧಾನಿ ಅವರು ಆರನೇ ಐಬಿಎಸ್‌ಎ ಶೃಂಗಸಭೆಯಲ್ಲಿಯೂ ಭಾಗವಹಿಸಲಿದ್ದಾರೆ.
"ವಸುಧೈವ ಕುಟುಂಬಕಂ" ಮತ್ತು "ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ" ಎಂಬ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಶೃಂಗಸಭೆಯಲ್ಲಿ ದೇಶದ ಚಿಂತನೆಯನ್ನು ನಾನು ಪ್ರಸ್ತುತಪಡಿಸುತ್ತೇನೆ" ಎಂದು ಮೋದಿ ಪ್ರವಾಸ ಕೈಗೊಳ್ಳುವ ಮುನ್ನ ತಮಮ್ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಹೊರಗಿನ ಅತಿದೊಡ್ಡ ದೇಶಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ವಲಸಿಗರೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಲಿದ್ದಾರೆ.
G20 ಜಾಗತಿಕ GDP ಯ ಶೇಕಡಾ 85ರಷ್ಟು ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಶೇಕಡಾ 75ರಷ್ಟು ಪ್ರತಿನಿಧಿಸುವ ಪ್ರಮುಖ ಆರ್ಥಿಕತೆಗಳನ್ನು ಒಳಗೊಂಡಿದೆ. ದಕ್ಷಿಣ ಆಫ್ರಿಕಾ ಅಧ್ಯಕ್ಷತೆ ಆತಿತ್ಯ ವಹಿಸುವ ಈ ಶೃಂಗಸಭೆ 'ಐಕಮತ್ಯ, ಸಮಾನತೆ, ಸುಸ್ಥಿರತೆ' ಎಂಬ ವಿಷಯದ ಅಡಿಯಲ್ಲಿ ಆದ್ಯತೆಯ ಕ್ಷೇತ್ರಗಳನ್ನು ವೇದಿಕೆ ಗುರುತಿಸಿದೆ.
ಇಂಡೋನೇಷ್ಯಾ, ಭಾರತ ಮತ್ತು ಬ್ರೆಜಿಲ್‌ನ ಅಧ್ಯಕ್ಷತೆಗಳ ನಂತರ ಜಾಗತಿಕ ದಕ್ಷಿಣವು ಆಯೋಜಿಸುತ್ತಿರುವ ಸತತ ನಾಲ್ಕನೇ G20 ಸಭೆ ಇದಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಮೊದಲು, G20 ಶೃಂಗಸಭೆ ಅಧ್ಯಕ್ಷತೆಗಳನ್ನು ಬ್ರೆಜಿಲ್ (2024), ಭಾರತ (2023) ಮತ್ತು ಇಂಡೋನೇಷ್ಯಾ (2022) ವಹಿಸಿದ್ದವು.
ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ER) ಸುಧಾಕರ್ ದಲೇಲಾ ಅವರ ಪ್ರಕಾರ, G20 ಒಂದು ಪ್ರಮುಖ ವೇದಿಕೆಯಾಗಿದ್ದು, ಹಿಂದಿನ ಅಧಿವೇಶನಗಳಲ್ಲಿ ದೇಶಗಳು ಜಾಗತಿಕ ದಕ್ಷಿಣದ ಮೇಲೆ ಪರಿಣಾಮ ಬೀರುವ ಹಲವಾರು ವಿಷಯಗಳ ಕುರಿತು ಒಮ್ಮತದ ಘೋಷಣೆ, ಮುಂಚೂಣಿಯ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿವೆ.
ಈ ಚರ್ಚೆಗಳು ಬ್ರೆಜಿಲ್ ಅಧ್ಯಕ್ಷತೆಯಲ್ಲಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ತನ್ನದೇ ಆದ ಅಧ್ಯಕ್ಷತೆಗಾಗಿ ರೂಪಿಸಿರುವ ನಾಲ್ಕು ಹಂತಗಳ ಅಡಿಯಲ್ಲಿ ಮುಂದುವರೆದಿವೆ. ಈ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ವರ್ಷವಿಡೀ ಹಲವಾರು ಸಾಧನೆಗಳನ್ನು ಮಾಡಲಾಗಿದೆ. ಆದ್ದರಿಂದ ಜಾಗತಿಕ ದಕ್ಷಿಣಕ್ಕೆ ಮಹತ್ವದ ವಿಷಯಗಳು ಚರ್ಚೆಯ ಕೇಂದ್ರಬಿಂದುವಾಗಿದ್ದು, ಅವುಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಕಾರ್ಯದರ್ಶಿ ಹೇಳಿದರು.
ಜಿ20 ಶೃಂಗಸಭೆಯ ಸಂದರ್ಭದಲ್ಲಿ ನಡೆಯಲಿರುವ ದ್ವಿಪಕ್ಷೀಯ ಸಭೆಗಳ ಕುರಿತು, ಕಾರ್ಯದರ್ಶಿ ದಲೇಲಾ ಅವರು ಆಯೋಜಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹೇಳಿದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ಅವರ ಸಹಕಾರವು ಮೂರು ಸ್ತಂಭಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ರಾಜಕೀಯ ಸಹಕಾರ ಎಂದು ಹೇಳಿದರು.