ದುಬೈ ಏರ್ ಶೋ ತೇಜಸ್ ಅಪಘಾತದಲ್ಲಿ ಐಎಎಫ್‌ನ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಮೃತ್ಯು 
ದೇಶ

ದುಬೈ ಏರ್ ಶೋದಲ್ಲಿ ತೇಜಸ್ ಯುದ್ಧ ವಿಮಾನ ಪತನ: ಮೃತಪಟ್ಟ ಈ ವಿಂಗ್ ಕಮಾಂಡರ್ ಯಾರು? ಸಾವಿಗೆ ಮುನ್ನ ಕೊನೆಕ್ಷಣ Video viral

37 ವರ್ಷ ವಯಸ್ಸಿನ ವಿಂಗ್ ಕಮಾಂಡರ್ ಕಾರ್ಯಕ್ರಮದ ಕೊನೆಯ ದಿನದಂದು ಕೆಳಮಟ್ಟದ ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸುತ್ತಿದ್ದಾಗ, ದುರದೃಷ್ಟಕರವಾಗಿ ಫೈಟರ್ ಜೆಟ್ ಪತನಗೊಂಡಿತು.

ದುಬೈ ವಾಯು ಪ್ರದರ್ಶನದ ಸಂದರ್ಭದಲ್ಲಿ ತೇಜಸ್ ಲಘು ಯುದ್ಧ ವಿಮಾನ (LCA MK-1) ಪತನಗೊಂಡು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಹುತಾತ್ಮರಾಗಿದ್ದಾರೆ.

ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರು ಪತ್ನಿ, ಆರು ವರ್ಷದ ಮಗಳು ಮತ್ತು ಪೋಷಕರನ್ನು ಅಗಲಿದ್ದಾರೆ.

37 ವರ್ಷ ವಯಸ್ಸಿನ ಅವರು ಕಾರ್ಯಕ್ರಮದ ಕೊನೆಯ ದಿನದಂದು ಕೆಳಮಟ್ಟದ ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸುತ್ತಿದ್ದಾಗ, ದುರದೃಷ್ಟಕರವಾಗಿ ಫೈಟರ್ ಜೆಟ್ ಪತನಗೊಂಡಿತು.

ಹೇಳಿಕೆಯಲ್ಲಿ, IAF, "ದುಬೈ ವೈಮಾನಿಕ ಪ್ರದರ್ಶನ ಸಮಯದಲ್ಲಿ IAF ತೇಜಸ್ ವಿಮಾನ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಪೈಲಟ್‌ಗೆ ಮಾರಣಾಂತಿಕ ಗಾಯಗಳಾಗಿ ಮೃತಪಟ್ಟಿದ್ದಾರೆ. ಜೀವಹಾನಿಗೆ IAF ತೀವ್ರವಾಗಿ ವಿಷಾದಿಸುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯವನ್ನು ರಚಿಸಲಾಗುತ್ತಿದೆ ಎಂದಿದ್ದಾರೆ.

2016 ರಲ್ಲಿ ಈ ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರಿಸಿದಾಗಿನಿಂದ ಇದು ಸ್ಥಳೀಯ ತೇಜಸ್ ಯುದ್ಧ ವಿಮಾನವನ್ನು ಒಳಗೊಂಡ ಎರಡನೇ ಅಪಘಾತವಾಗಿದೆ.

ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಯಾರು?

ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರು. ಸ್ಯಾಲ್ ಅವರ ಪತ್ನಿ ಕೂಡ ಭಾರತೀಯ ವಾಯುಪಡೆ ಅಧಿಕಾರಿ ಆಗಿದ್ದಾರೆ, ಆರು ವರ್ಷದ ಮಗಳು ಮತ್ತು ಅವರ ಪೋಷಕರನ್ನು ಅವರು ಅಗಲಿದ್ದಾರೆ.

ಅವರು ಸುಜನ್‌ಪುರ್ ತಿರಾದ ಸೈನಿಕ್ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಡಿಸೆಂಬರ್ 24, 2009 ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು.

ಸ್ಯಾಲ್ ಅವರ ಸಂಬಂಧಿ ರಮೇಶ್ ಕುಮಾರ್: “ನಮಾನ್ಶ್ ಅವರ ಪೋಷಕರು ಪ್ರಸ್ತುತ ತಮಿಳುನಾಡಿನ ಕೊಯಮತ್ತೂರು ಬಳಿಯ ಸುಲೂರ್ ಬಳಿಯಿದ್ದಾರೆ. ಅವರ ಪತ್ನಿ IAF ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕಾಲೇಜು ಶಿಕ್ಷಣವನ್ನು ಕೋಲ್ಕತ್ತಾದಲ್ಲಿ ಪೂರೈಸಿದರು. ಅವರ ತಂದೆ ಜಗನ್ನಾಥ್ ಸ್ಯಾಲ್ ಭಾರತೀಯ ಸೇನೆಯ ವೈದ್ಯಕೀಯ ದಳದಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದರು, ನಂತರ ಪ್ರಾಂಶುಪಾಲರಾಗಿ ನಿವೃತ್ತರಾದರು.”

ಹಿಮಾಚಲ ಪ್ರದೇಶ ಸಿಎಂ ಸಂತಾಪ

ವಿಂಗ್ ಕಮಾಂಡರ್ ಸ್ಯಾಲ್ ಅವರ ಸಾವಿನ ಸುದ್ದಿ ಅವರ ತವರು ರಾಜ್ಯವನ್ನು ತೀವ್ರ ದುಃಖವನ್ನುಂಟುಮಾಡಿದೆ. ಸಿಎಂ ಸುಖವಿಂದರ್ ಸಿಂಗ್ ಸುಖು, ರಾಷ್ಟ್ರವು ಧೈರ್ಯಶಾಲಿ, ಕರ್ತವ್ಯನಿಷ್ಠ ಪೈಲಟ್ ನ್ನು ಕಳೆದುಕೊಂಡಿದೆ ಎಂದು ಬರೆದಿದ್ದಾರೆ, ಅವರು ಕುಟುಂಬಕ್ಕೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೂಡ ಈ ಘಟನೆಯನ್ನು "ಅತ್ಯಂತ ಹೃದಯವಿದ್ರಾವಕ ಮತ್ತು ನೋವಿನಿಂದ ಕೂಡಿದೆ" ಎಂದು ಸಂತಾಪ ಸೂಚಿಸಿದ್ದಾರೆ.

ಸಾವಿಗೆ ಮುನ್ನ ವಿಡಿಯೊ ವೈರಲ್

ತೇಜಸ್ ಫೈಟರ್ ಜೆಟ್ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ದುಬೈ ಏರ್ ಶೋ ಸಮಯದಲ್ಲಿ ಭಾರತದ ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್, ಯುಎಇಗೆ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಗಲ್ಫ್ ವಿಭಾಗದ ಭಾರತದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಮಹಾಜನ್ ಅವರೊಂದಿಗೆ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೊ ಘಟನೆ ನಂತರ ವೈರಲ್ ಆಗಿದೆ.

ದುಬೈ ಏರ್ ಶೋನಲ್ಲಿ ಏನಾಯಿತು?

150 ಕ್ಕೂ ಹೆಚ್ಚು ದೇಶಗಳು ತಮ್ಮ ಏರೋಸ್ಪೇಸ್ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿರುವ ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ದುಬೈ ಏರ್ ಶೋನಲ್ಲಿ ನಿಯಮಿತ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಏರ್ ಶೋ ನವೆಂಬರ್ 17 ರಂದು ಪ್ರಾರಂಭವಾಗಿತ್ತು.

ಅಂತಿಮ ದಿನದ ದೃಶ್ಯಗಳು ತೇಜಸ್ ಯುದ್ಧವಿಮಾನವು ಇದ್ದಕ್ಕಿದ್ದಂತೆ ಬೆಂಕಿಯ ಚೆಂಡಾಗಿ ಸ್ಫೋಟಗೊಂಡು ವಾಯುನೆಲೆಯಾದ್ಯಂತ ಹೊಗೆಯಾಡುತ್ತಿದ್ದುದನ್ನು ತೋರಿಸುತ್ತವೆ. ಈಗ ವಿಚಾರಣಾ ನ್ಯಾಯಾಲಯವು ತನಿಖೆ ನಡೆಸುತ್ತಿದೆ.

ಮಾರ್ಚ್ 2024 ರಲ್ಲಿ ಜೈಸಲ್ಮೇರ್ ಬಳಿ ತರಬೇತಿ ಹಾರಾಟದ ಸಮಯದಲ್ಲಿ ಮತ್ತೊಂದು ತೇಜಸ್ ಅಪಘಾತಕ್ಕೀಡಾಗಿತ್ತು. ಅಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಹೋಗುವಲ್ಲಿ ಯಶಸ್ವಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

New Labour Codes- ಕೇಂದ್ರ ಸರ್ಕಾರದಿಂದ ಐತಿಹಾಸಿಕ 4 ಕಾರ್ಮಿಕ ಸಂಹಿತೆ ಜಾರಿ, ಯೂನಿಯನ್‌ ಗಳ ವಿರೋಧ, ಎಚ್ಚರಿಕೆ ಹೆಜ್ಜೆಯಿಡಲು ಕಂಪೆನಿಗಳ ನಿರ್ಧಾರ

ಸಿಎಂ ಹುದ್ದೆಗಾಗಿ ಮುಂದುವರಿದ ಹಗ್ಗಜಗ್ಗಾಟ: ದೆಹಲಿಯಲ್ಲಿ ಡಿಕೆ ಶಿವಕುಮಾರ್ ಬಣದ ಮೇಲಾಟ; ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ!

ಇಂದು ಸಿಎಂ ಆಗಿರುವ ಮಹಾನುಭಾವರೇ ಅಂದು ಕುಮಾರಸ್ವಾಮಿ ಸರ್ಕಾರ ಕೆಡವಿದ್ರು: ಎಚ್.ಡಿ ದೇವೇಗೌಡ

ಬಣ ಬಡಿದಾಟ, ಅಧಿಕಾರ ಗುದ್ದಾಟ: ಇಂದು ಸಿದ್ದರಾಮಯ್ಯ- ಡಿಕೆಶಿ ಜೊತೆ ಮಲ್ಲಿಕಾರ್ಜುನ ಖರ್ಗೆ ಮುಖಾಮುಖಿ ಚರ್ಚೆ ಸಾಧ್ಯತೆ, ತೆರೆ ಎಳೆಯುತ್ತಾರೆಯೇ ಗೊಂದಲಕ್ಕೆ?

ನಾನಂತೂ ಬರೋಬ್ಬರಿ 100 ವರ್ಷ ಬದುಕುತ್ತೇನೆ: ಸಿಎಂ ಸಿದ್ದರಾಮಯ್ಯ

SCROLL FOR NEXT