ಪ್ರಧಾನಿ ಮೋದಿ, ಸಿಎಂ ಭಗವಂತ್ ಮಾನ್ ಸಾಂದರ್ಭಿಕ ಚಿತ್ರ 
ದೇಶ

ರಾಜಧಾನಿ 'ಚಂಡೀಗಢ' ಕಸಿದುಕೊಳ್ಳಲು ಪಿತೂರಿ: ಕೇಂದ್ರದ ವಿರುದ್ಧ ಸಿಡಿದೆದ್ದ ಪಂಜಾಬ್! ಗಂಭೀರ ಪರಿಣಾಮದ ಎಚ್ಚರಿಕೆ

ಪಂಜಾಬ್‌ನಾದ್ಯಂತ AAP, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದಿಂದ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಿವೆ.

ಚಂಡೀಗಢ: ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಿದೆ. ಇದು ಕೇಂದ್ರಾಡಳಿತ ಪ್ರದೇಶಕ್ಕೆ ನಿಯಮಗಳನ್ನು ರಚಿಸಲು ಮತ್ತು ನೇರವಾಗಿ ಶಾಸನ ರಚಿಸಲು ರಾಷ್ಟ್ರಪತಿಗೆ ಅಧಿಕಾರ ನೀಡುತ್ತದೆ.

ಈ ಕ್ರಮ ಪಂಜಾಬ್‌ನಾದ್ಯಂತ AAP, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದಿಂದ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಿವೆ. ಕೇಂದ್ರ ಸರ್ಕಾರ ಪಂಜಾಬ್ ನಗರದ ಮೇಲಿನ ದೀರ್ಘಕಾಲದ ಹಕ್ಕನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಂವಿಧಾನ 131 ನೇ ತಿದ್ದುಪಡಿ) ಮಸೂದೆ ಮಂಡನೆಗೆ ಸಿದ್ಧತೆ: ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿರುವ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ 2025 ಚಂಡೀಗಢಕ್ಕೆ ನಿಯಮಗಳನ್ನು ಮಾಡಲು ಮತ್ತು ಸ್ವತಂತ್ರ ಆಡಳಿತಗಾರರನ್ನು ನೇಮಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುತ್ತದೆ.

ಸಂಸತ್ತಿನ ಬುಲೆಟಿನ್‌ ಪ್ರಕಾರ, ಮಸೂದೆಯು ಚಂಡೀಗಢವನ್ನು ಶಾಸಕಾಂಗಗಳಿಲ್ಲದ ಇತರ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಮತ್ತು ಪುದುಚೇರಿ (ಅದರ ವಿಧಾನಸಭೆಯನ್ನು ವಿಸರ್ಜಿಸಿದಾಗ ಅಥವಾ ಅಮಾನತುಗೊಳಿಸಿದಾಗ) ಜೊತೆ ಜೋಡಿಸುವ ಗುರಿಯನ್ನು ಹೊಂದಿದೆ. 240 ನೇ ವಿಧಿಯು ಅಧ್ಯಕ್ಷರು ಸಂಸದೀಯ ಕಾನೂನಿನ ಬಲವನ್ನು ಹೊಂದಿರುವ ನಿಯಮಗಳನ್ನು ಹೊರಡಿಸಲು ಅನುಮತಿಸುತ್ತದೆ.

ಈ ಪ್ರಸ್ತಾಪ ಪಂಜಾಬ್‌ನ ರಾಜಕೀಯ ವಲಯದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.ಇದನ್ನು ಗಂಭೀರ ಅನ್ಯಾಯ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕರೆದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪಂಜಾಬ್‌ನ ರಾಜಧಾನಿಯನ್ನು ಕಿತ್ತುಕೊಳ್ಳಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಕ್ಷಾತೀತ ಹೋರಾಟಕ್ಕೆ ಕರೆ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಪಕ್ಷಾತೀತವಾಗಿ ಒಗ್ಗಟ್ಟಿಗೆ ಹೋರಾಟಕ್ಕೆ ಕರೆ ನೀಡಿದ್ದಾರೆ. ಕೇಂದ್ರವು ಚಂಡೀಗಢವನ್ನು 240 ನೇ ವಿಧಿಯಡಿ ತರಲು ಉದ್ದೇಶಿಸಿದೆ. ಇತರ ಕೇಂದ್ರಾಡಳಿತ ಪ್ರದೇಶಗಳಂತೆ ಇದನ್ನು ನೇರವಾಗಿ ಕೇಂದ್ರದಿಂದ ನೇಮಕಗೊಂಡ ಆಡಳಿತಾಧಿಕಾರಿ ಅಡಿಯಲ್ಲಿ ಇರಿಸುತ್ತದೆ ಎಂದು ಬಜ್ವಾ ಎಚ್ಚರಿಸಿದ್ದಾರೆ.

ಗಂಭೀರ ಪರಿಣಾಮದ ಎಚ್ಚರಿಕೆ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ, ಕೇಂದ್ರ ಸರ್ಕಾರದಿಂದ ಸ್ಪಷ್ಟೀಕರಣವನ್ನು ಕೋರಿದ್ದಾರೆ. ಪರಿಸ್ಥಿತಿಯನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಚಂಡೀಗಢ ಪಂಜಾಬ್‌ಗೆ ಸೇರಿದ್ದು ಮತ್ತು ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದ ಜನತೆ ದಿನಬೆಳಗಾದರೆ ನೋಡಿ ಬೇಸತ್ತು ಹೋಗಿದ್ದಾರೆ, ಕಾಂಗ್ರೆಸ್ ಹೈಕಮಾಂಡ್ ಸಿಎಂ ಯಾರು ಎಂದು ಸ್ಪಷ್ಟಪಡಿಸಲಿ: ಆರ್ ಅಶೋಕ್

ಬೆಂಗಳೂರು ಎಟಿಎಂ ವ್ಯಾನ್ ದರೋಡೆ: ದರೋಡೆ ಹಿಂದಿನ ಅಸಲಿ ಕಾರಣ ಬಹಿರಂಗ! ಇಡೀ ಪ್ರಕರಣದ ಸೂತ್ರದಾರ ಯಾರು ಗೊತ್ತಾ?

ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂಧಾನ: ಪಲಾಶ್ ಮುಚ್ಚಲ್ ಜೊತೆಗೆ ಮಸ್ತ್ ಡ್ಯಾನ್ಸ್! Video ವೈರಲ್

ಭೂ ಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ, ತನಿಖೆಗೆ ಎಸ್ ಐಟಿ ರಚನೆ- ಡಿಕೆ ಶಿವಕುಮಾರ್

ಕೆ ಎನ್ ರಾಜಣ್ಣ ಪುತ್ರ ಅಮಿತ್ ಶಾರನ್ನು ಭೇಟಿಯಾಗಿದ್ದರೇ MLC ರಾಜೇಂದ್ರ ಏನೆಂದರು?

SCROLL FOR NEXT