ನಿತೀಶ್ ಕುಮಾರ್ 
ದೇಶ

10 ಲಕ್ಷ ಮಹಿಳಾ ಫಲಾನುಭವಿಗಳಿಗೆ 1 ಸಾವಿರ ಕೋಟಿ ರೂ. ವಿತರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

ನಿತೀಶ್ ಕುಮಾರ್ ಅವರು ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ, ಡಿಬಿಟಿ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ಫಲಾನುಭವಿಗೆ 10,000 ರೂ.ಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಿದರು.

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯ 10 ಲಕ್ಷ ಫಲಾನುಭವಿಗಳಿಗೆ 1,000 ಕೋಟಿ ರೂ.ಗಳನ್ನು ವಿತರಿಸಿದರು. ಈ ಯೋಜನೆಯು ರಾಜ್ಯದ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಇತ್ತೀಚೆಗೆ ದಾಖಲೆಯ ಐದನೇ ಬಾರಿಗೆ ಅಧಿಕಾರಕ್ಕೆ ಮರಳಿದ ನಿತೀಶ್ ಕುಮಾರ್ ಅವರು ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ, ಡಿಬಿಟಿ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ಫಲಾನುಭವಿಗೆ 10,000 ರೂ.ಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್, "ಇದುವರೆಗೆ ಒಟ್ಟು 1.56 ಕೋಟಿ ಮಹಿಳೆಯರು 10 ಸಾವಿರ ರೂ. ಪಡೆದಿದ್ದಾರೆ" ಎಂದು ಹೇಳಿದರು.

"ಸ್ವಯಂ ಉದ್ಯೋಗಕ್ಕಾಗಿ ಈ ಹಣವನ್ನು ಬಳಸಲು ಫಲಾನುಭವಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಣದಲ್ಲಿ ಸ್ವಯಂ ಉದ್ಯೋಗ ಮಾಡುವವರಿಗೆ ಶೀಘ್ರದಲ್ಲೇ ತಲಾ 2 ಲಕ್ಷ ರೂ.ಗಳ ಹೆಚ್ಚಿನ ಸಹಾಯ ದೊರೆಯಲಿದೆ" ಎಂದು ಅವರು ಹೇಳಿದರು.

ಗಮನಾರ್ಹವಾಗಿ, ಈ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ, ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸುಮಾರು ಒಂದು ತಿಂಗಳ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದರು. ಚುನಾವಣೆ ಘೋಷಣೆಯಾದ ನಂತರವೂ ಈ ಪ್ರಕ್ರಿಯೆಯು ಮುಂದುವರೆಯಿತು. ಹೀಗಾಗಿ ಈ ಹಣದಿಂದ ಮತಗಳನ್ನು "ಖರೀದಿಸಲಾಗುತ್ತಿದೆ" ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೇನೂ ಬೇಡ, ಯಾವುದಕ್ಕೂ ಆತುರ ಪಡಲ್ಲ' ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ: ಡಿಕೆ ಶಿವಕುಮಾರ್

‘ಅವರ ಕೈಗೆ ರಕ್ತ ಅಂಟಿದೆ’: SIR ಸಂಬಂಧಿತ 40 ಸಾವುಗಳನ್ನು ಉಲ್ಲೇಖಿಸಿ CECಗೆ ಟಿಎಂಸಿ ತರಾಟೆ

5 ದಶಕಗಳ ಹಿಂದೆಯೇ ಉಡುಪಿ ಹೊಸ ಆಡಳಿತ ಮಾದರಿಯನ್ನು ಪ್ರಸ್ತುತಪಡಿಸಿದೆ: ಪ್ರಧಾನಿ ಮೋದಿ

BBK ನಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ಧ್ರುವಂತ್: ತಾಳ್ಮೆ ಕಳೆದುಕೊಂಡ ಧನುಷ್, ಸೂರಜ್ ಮುಂದೇನಾಯ್ತು? Video!

ಹರಿಯಾಣ ವಿವಿ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಪುರಾವೆ ಕೇಳಿದ ಆರೋಪ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

SCROLL FOR NEXT