ಬಾಲಕನ ಆತ್ಮಹತ್ಯೆ (ಸಾಂದರ್ಭಿಕ ಚಿತ್ರ) 
ದೇಶ

4 ನಿಮಿಷದಲ್ಲಿ 52 ಬಾರಿ Sorry: ಫೋನ್ ತಂದಿದ್ದಕ್ಕೇ ಪ್ರಿನ್ಸಿಪಾಲ್ ಶಿಸ್ತುಕ್ರಮ; ಹೆದರಿದ ಬಾಲಕ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ!

ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಆಟಗಾರ ಕೂಡ ಆಗಿರುವ 8ನೇ ತರಗತಿಯ ವಿದ್ಯಾರ್ಥಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಭೋಪಾಲ್: ಶಾಲಾ ಪ್ರಾಂಶುಪಾಲರ ಶಿಸ್ತುಕ್ರಮಕ್ಕೆ ಹೆದರಿದ 13 ವರ್ಷದ ಬಾಲಕನೋರ್ನ ಶಾಲಾ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ರತ್ಲಂನ ಡೊಂಗ್ರೆ ನಗರದಲ್ಲಿರುವ ಖಾಸಗಿ ಶಾಲೆಯ ಮೂರನೇ ಮಹಡಿಯಿಂದ 13 ವರ್ಷದ ಬಾಲಕ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಆಟಗಾರ ಕೂಡ ಆಗಿರುವ 8ನೇ ತರಗತಿಯ ವಿದ್ಯಾರ್ಥಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ವಿದ್ಯಾರ್ಥಿ ಗುರುವಾರ ತನ್ನಮೊಬೈಲ್ ಫೋನ್ ಅನ್ನು ಶಾಲೆಗೆ ತಂದು ತರಗತಿಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದ, ನಂತರ ಅದನ್ನು ಸಾಮಾಜಿಕ ಮಾಧ್ಯಮಕ್ಕೆ ಅಪ್‌ಲೋಡ್ ಮಾಡಿದ್ದ. ಶಾಲಾ ಆಡಳಿತವು ವಿಡಿಯೋವನ್ನು ಪತ್ತೆಹಚ್ಚಿ ಶುಕ್ರವಾರ ಆತನ ಪೋಷಕರಿಗೆ ಕರೆ ಮಾಡಿ ಶಾಲಾ ನಿಯಮಗಳ ಉಲ್ಲಂಘನೆಯ ಬಗ್ಗೆ ಚರ್ಚಿಸಿತ್ತು.

ಇದಾದ ಬಳಿಕ ಬಾಲಕ ಶಾಲೆಯ ಮೂರನೇ ಅಂತಸ್ತಿನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಾಲಕ ಶೈಕ್ಷಣಿಕ ಜೀವನವನ್ನೇ ಅಂತ್ಯಗೊಳಿಸುವ ಬೆದರಿಕೆ ಹಾಕಿದ್ದ ಪ್ರಾಂಶುಪಾಲರು

ಇನ್ನು ಬಾಲಕನ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ಈ ವೇಳೆ ತನಿಖೆಯ ಭಾಗವಾಗಿರುವ ಶಾಲೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ 13 ವರ್ಷದ ಬಾಲಕ ಪ್ರಾಂಶುಪಾಲರ ಕಚೇರಿಗೆ ಪ್ರವೇಶಿಸುತ್ತಿರುವುದು ದಾಖಲಾಗಿದೆ.

ಪ್ರಾಂಶುಪಾಲರ ಕಚೇರಿ ಒಳಗೆ, ಬಾಲಕ ಪ್ರಾಂಶುಪಾಲರ ಕ್ಷಮೆ ಯಾಚಿಸಿದ್ದಾನೆ. ಆದರೆ ಈ ವೇಳೆ ಪ್ರಾಂಶುಪಾಲರು ಆಕ್ರೋಶದಿಂದ ಮಾತನಾಡಿದ್ದು, ಈ ವೇಳೆ ಪ್ರಾಂಶುಪಾಲರು ಬಾಲಕನ ಶೈಕ್ಷಣಿಕ ಜೀವನ ಅಂತ್ಯ ಮಾಡುವುದಾಗಿ ಹೆದರಿಸಿದ್ದಾರೆ. ಈ ವೇಳೆ ಹೆದರಿದ ಬಾಲಕ 4 ನಿಮಿಷಗಳ ಅಂತರದಲ್ಲಿ ಬರೊಬ್ಬರಿ 52 ಬಾರಿ ಸಾರಿ (Sorry) ಕೇಳಿದ್ದಾನೆ. ಅದಾಗ್ಯೂ ಮನಸ್ಸು ಕರಗದ ಪ್ರಾಂಶುಪಾಲರು ಬಾಲಕ ಸ್ಕೇಟಿಂಗ್ ನಲ್ಲಿ ಗಳಿಸಿದ್ದ ಎಲ್ಲ ಪದಕಗಳನ್ನು ವಾಪಸ್ ಪಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.

ಬಾಲಕ ಸ್ಕೇಟಿಂಗ್‌ನಲ್ಲಿ ಈಗಾಗಲೇ ಸಾಧನೆಗಳಿಗೆ ಹೆಸರುವಾಸಿಯಾಗಿದ್ದ, ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದ ಬಾಲಕ ಇದನ್ನು ಕೇಳಿದ ನಂತರ ತೀವ್ರವಾಗಿ ಕುಸಿದಿದ್ದ. ಬಳಿಕ ಆತಂಕದಿಂದ ಶಾಲೆಯ 3ನೇ ಅಂತಸ್ತಿಗೆ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಬಾಲಕನ ಅತ್ಮಹತ್ಯೆ ವೇಳೆ ಸ್ಥಳದಲ್ಲೇ ಇದ್ದ ತಂದೆ

ಇನ್ನು ಆಘಾತಕಾರಿ ವಿಚಾರ ಎಂದರೆ ಬಾಲಕ ಆತ್ಮಹತ್ಯೆಗೆ ಶರಣಾಗುವ ವೇಳೆ ಬಾಲಕನ ತಂದೆ ಕೂಡ ಸ್ಥಳದಲ್ಲೇ ಇದ್ದರು. ಅವರಿಗೆ ಶಾಲೆಯಲ್ಲಿ ಏನಾಗುತ್ತಿದೆ ಎಂಬುದೇ ತಿಳಿದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಶಾಲೆಗೆ ಬಂದು ಭೇಟಿಯಾಗುವಂತೆ ಶಾಲೆಯಿಂದ ಸಂದೇಶ ಬಂದಿತ್ತು. ಹೀಗಾಗು ನಾನು ಶಾಲೆಗೆ ಬಂದಿದ್ದೆ. ಆದರೆ ಶಾಲೆಗೆ ಬರುತ್ತಲೇ ಮಗ ಕೆಳಗೆ ಬಿದ್ದಿದ್ದಾನೆ ಎಂದು ತಿಳಿಯಿತು ಎಂದು ತಂದೆ ಪ್ರೀತಮ್ ಕಟಾರಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

27 ವರ್ಷದಲ್ಲಿ 3 ಗಗನ ಯಾತ್ರೆ: 608 ದಿನಗಳ ಬಾಹ್ಯಾಕಾಶ ವಾಸ; ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ನಿವೃತ್ತಿ!

'ಮದರ್ ಆಫ್ ಆಲ್ ಡೀಲ್': ಭಾರತ-ಯುರೋಪಿಯನ್ ಒಕ್ಕೂಟದ FTA ಮಾತುಕತೆ ಅಂತಿಮ ಹಂತಕ್ಕೆ!

ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣ; ಶೀಘ್ರದಲ್ಲೇ ದಕ್ಷಿಣ ಭಾರತದ ಸಿಎಂಗಳ ಸಮ್ಮೇಳನ: ಸಿದ್ದರಾಮಯ್ಯ

ರಾಯಚೂರು: ಸಿಂಧನೂರು ಬಳಿ ಭೀಕರ ಸರಣಿ ಅಪಘಾತ; ಐವರು ಸ್ಥಳದಲ್ಲೇ ಸಾವು

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಅವಿರೋಧ ಆಯ್ಕೆ

SCROLL FOR NEXT