ವಿವಾಹ (ಸಾಂಕೇತಿಕ ಚಿತ್ರ) online desk
ದೇಶ

'ಆಕೆಯ ತಂದೆಯ ಶ್ರಮದ ಸಂಪಾದನೆ ಹಣ ನನಗೆ ಬೇಡ': 31 ಲಕ್ಷ ರೂ ವರದಕ್ಷಿಣೆ ನಿರಾಕರಿಸಿದ ವರ; ಮೆಚ್ಚುಗೆಯ ಮಹಾಪೂರ!

ವರನ ಪೋಷಕರೂ ಆತನ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರನ ನಿರ್ಧಾರದಿಂದ ವಧುವಿನ ಕುಟುಂಬದಲ್ಲೂ ಸಂತಸ ಮೂಡಿದ್ದು ವಿವಾಹ ಅದ್ಧೂರಿಯಿಂದ ನಡೆದಿದೆ.

ಆಗ್ರಾ: ವರದಕ್ಷಿಣೆಗಾಗಿ ಮದುವೆಗಳು ಮುರಿದು ಬೀಳುತ್ತಿರುವ ಪ್ರಕರಣಗಳು ಇಂದಿಗೂ ವರದಿಯಾಗುತ್ತಿರುವ ದಿನಗಳಲ್ಲಿ ಆಗ್ರಾದಲ್ಲಿನ ವರನೊಬ್ಬನ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಮುಜಾಫರ್ ನಗರದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದರಲ್ಲಿ ವರ ವರದಕ್ಷಿಣೆಯ ಭಾಗವಾಗಿ ತನ್ನ ಭಾವಿ ಪತ್ನಿಯ ಪೋಷಕರು ನೀಡಿದ್ದ 31 ಲಕ್ಷ ರೂಪಾಯಿಗಳನ್ನು ನಿರಾಕರಿಸಿದ್ದಾರೆ.

ಸಂಪ್ರದಾಯದ ಭಾಗವಾಗಿ ಕೇವಲ 1 ರೂಪಾಯಿ ಪಡೆದಿದ್ದಾರೆ. 24 ವರ್ಷದ ಯುವತಿ ಕೋವಿಡ್ ಸಂದರ್ಭದಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಆಕೆಯ ಕುಟುಂಬ ಯುವತಿಗೆ ಮದುವೆ ನಿಶ್ಚಯ ಮಾಡಿ ವರದಕ್ಷಿಣೆ ನೀಡಲು ಮುಂದಾಗಿತ್ತು.

ಮದುವೆಯ ಭಾಗವಾಗಿದ್ದ ತಿಲಕ್ ಕಾರ್ಯಕ್ರಮದಲ್ಲಿ ವರನಿಗೆ 31 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು. ಆದರೆ ಹಣದ ಎದುರು ನಮಸ್ಕರಿಸಿದ ಯುವಕ ವರದಕ್ಷಿಣಿ ಸ್ವೀಕರಿಸಲು ನಿರಾಕರಿಸಿದ್ದಾನೆ. ಯುವತಿಯ ತಂದೆಯ ಶ್ರಮದ ಸಂಪಾದನೆ ತೆಗೆದುಕೊಳ್ಳುವುದು ನನಗೆ ಸೂಕ್ತವಲ್ಲ ಅದರ ಮೇಲೆ ನನ್ನ ಹಕ್ಕು ಇಲ್ಲ, ನಾನು ಇದನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಹಣವನ್ನು ವಾಪಸ್ ಕೊಟ್ಟಿದ್ದಾರೆ.

ವರನ ಪೋಷಕರೂ ಆತನ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರನ ನಿರ್ಧಾರದಿಂದ ವಧುವಿನ ಕುಟುಂಬದಲ್ಲೂ ಸಂತಸ ಮೂಡಿದ್ದು ವಿವಾಹ ಅದ್ಧೂರಿಯಿಂದ ನಡೆದಿದೆ. ಗ್ರಾಮಸ್ಥರೂ ಸಹ ವರ ಅವಧೇಶ್ ರಾಣಾ ಕುಟುಂಬದ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವಧೇಶ್ ಕಾಸ್ಮೆಟಿಕ್ಸ್ ಉದ್ಯಮಿಯಾಗಿದ್ದು, ಆತನನ್ನು ವಿವಾಹವಾಗಿರುವ ಅದಿತಿ ಎಂಎಸ್ಸಿ ಪದವೀಧರೆಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Op Sindoor ವೇಳೆ 'ಉಗ್ರರ ಹೆಡ್ ಆಫೀಸ್' ಸಂಪೂರ್ಣ ಧ್ವಂಸ: ಸತ್ಯ ಒಪ್ಪಿಕೊಂಡ ಲಷ್ಕರ್ ಕಮಾಂಡರ್! ಮತ್ತೆ ಪಾಕ್ ಮುಖವಾಡ ಬಯಲು!

BMC Exit polls: ಮತಗಟ್ಟೆ ಸಮೀಕ್ಷೆ ಪ್ರಕಟ! ಯಾರಿಗೆ ಎಷ್ಟು ಸ್ಥಾನ?

'ಬೆಟ್ಟಿಂಗ್ ಆ್ಯಪ್, ಸಾಲಗಾರರ ಕಾಟ, ತಂಗಿ ನಾಪತ್ತೆ'; ನಟಿ ಕಾರುಣ್ಯ ರಾಮ್ ಕಣ್ಣೀರು! ಸರಣಿ ಪೋಸ್ಟ್! Video

T20 World Cup: ಬಾಂಗ್ಲಾದೇಶದ ಪಂದ್ಯಗಳ ಸ್ಥಳಾಂತರದ ವದಂತಿ; BCCI ಹೇಳಿದ್ದೇನು?

BiggBoss ಅನ್ನೋದೇ ಪುಟಗೋಸಿ..!: ಕರವೇ ನಾಯಕನ ಆಕ್ರೋಶ; ಆಗಿದ್ದೇನು?

SCROLL FOR NEXT