ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಡಿಸೆಂಬರ್ 1 ರಿಂದ ಚಳಿಗಾಲ ಅಧಿವೇಶನ: ಇಂದು ಸರ್ವಪಕ್ಷ ಸಭೆ; ಸರ್ಕಾರ ಸಂಸತ್ತಿನ ಕಲಾಪ ಹಳಿ ತಪ್ಪಿಸಲು ಯತ್ನಿಸುತ್ತಿದೆ- ಕಾಂಗ್ರೆಸ್

ಸರ್ಕಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಅವರ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯಸಭಾ ನಾಯಕ ಜೆ ಪಿ ನಡ್ಡಾ ಇದ್ದರು.

ಸರ್ವಪಕ್ಷ ಸಭೆ
Sumana Upadhyaya
Updated On : 30 Nov 2025, 2:53 pm

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆ ಭಾನುವಾರ ನಡೆಯಿತು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ದೆಹಲಿ ಸ್ಫೋಟ ಮತ್ತು ವಿದೇಶಾಂಗ ನೀತಿಯ ಕಾಳಜಿಗಳಂತಹ ವಿಷಯಗಳನ್ನು ವಿರೋಧ ಪಕ್ಷಗಳು ಅಧಿವೇಶನದಲ್ಲಿ ಎತ್ತುವ ಸಾಧ್ಯತೆಗಳಿವೆ.

ಸರ್ಕಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಅವರ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯಸಭಾ ನಾಯಕ ಜೆ ಪಿ ನಡ್ಡಾ ಇದ್ದರು.

ವಿರೋಧ ಪಕ್ಷವನ್ನು ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಗೌರವ್ ಗೊಗೊಯ್ ಮತ್ತು ಪ್ರಮೋದ್ ತಿವಾರಿ; ಡಿಎಂಕೆಯ ಟಿ ಆರ್ ಬಾಲು; ಟಿಎಂಸಿಯ ಡೆರೆಕ್ ಒ'ಬ್ರೇನ್; ಮತ್ತು ಐಯುಎಂಎಲ್‌ನ ಇ ಟಿ ಮೊಹಮ್ಮದ್ ಬಶೀರ್ ಪ್ರತಿನಿಧಿಸಿದ್ದರು. ಆರ್‌ಜೆಡಿಯ ಮನೋಜ್ ಝಾ, ಎಸ್‌ಎಡಿಯ ಹರ್‌ಸಿಮ್ರತ್ ಕೌರ್ ಮತ್ತು ಜೆಡಿ (ಯು) ನ ಸಂಜಯ್ ಝಾ ಭಾಗವಹಿಸಿದ್ದರು.

Advertisement

Advertisement

ಸಭೆಯ ನಂತರ ಲೋಕಸಭೆಯಲ್ಲಿನ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಪಕ್ಷವು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು, ಸಂಸತ್ತನ್ನು ಹಳಿತಪ್ಪಿಸಲು ಮತ್ತು ಸಂಸದೀಯ ಸಂಪ್ರದಾಯಗಳನ್ನು ಹೂತುಹಾಕಲು ಬಯಸುತ್ತಿದೆ ಎಂದು ಆರೋಪಿಸಿದರು.

ಸರ್ವಪಕ್ಷ ಸಭೆಯಲ್ಲಿ ಅವರು, ರಾಷ್ಟ್ರೀಯ ಭದ್ರತೆ, ವಾಯು ಮಾಲಿನ್ಯ, ಮತದಾರರ ಪಟ್ಟಿಯ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು, ರೈತರ ಸಮಸ್ಯೆಗಳು ಮತ್ತು ವಿದೇಶಾಂಗ ನೀತಿಯ ಕುರಿತು ಚರ್ಚೆಗೆ ಕಾಂಗ್ರೆಸ್ ಒತ್ತಾಯಿಸಿದೆ ಎಂದರು.

ಪ್ರಧಾನಿ ಮತ್ತು ಗೃಹ ಸಚಿವರ ನೇತೃತ್ವದಲ್ಲಿ ಸರ್ಕಾರವು ಭಾರತದ ಪ್ರಜಾಪ್ರಭುತ್ವ ಮತ್ತು ಸಂಸದೀಯ ಸಂಪ್ರದಾಯಗಳನ್ನು ಕೊನೆಗೊಳಿಸಲು ನೋಡುತ್ತಿರುವಂತೆ ತೋರುತ್ತಿದೆ ಎಂದು ಅವರು ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರೊದಿಗೆ ಮಾತನಾಡುವಾಗ ಆರೋಪಿಸಿದರು.

ದೆಹಲಿ ಸ್ಫೋಟದ ನಂತರ ರಾಷ್ಟ್ರೀಯ ಭದ್ರತೆ ಸೇರಿದಂತೆ ದೇಶದಲ್ಲಿ ಭದ್ರತೆಯ ಕುರಿತು ಚರ್ಚೆ ನಡೆಯಬೇಕೆಂದು ತಮ್ಮ ಪಕ್ಷವು ಒತ್ತಾಯಿಸಿದೆ ಎಂದು ಗೊಗೊಯ್ ಹೇಳಿದರು.

ರಾಷ್ಟ್ರೀಯ ಭದ್ರತೆಯ ಕುರಿತು ಸರ್ಕಾರ ಅಲ್ಪಾವಧಿಯ ಚರ್ಚೆಯನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು.

Also Read

ಡಿಸೆಂಬರ್ 1 ರಿಂದ ಸಂಸತ್ತಿನ ಚಳಿಗಾಲ ಅಧಿವೇಶನ: ನವೆಂಬರ್ 30 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ಎರಡನೆಯದು ಪ್ರಜಾಪ್ರಭುತ್ವದ ಭದ್ರತೆ. ಚುನಾವಣೆಗಳ ಮೊದಲು, ಸಮಯದಲ್ಲಿ ಮತ್ತು ನಂತರ ಚುನಾವಣಾ ಆಯೋಗವು ಪಕ್ಷಪಾತದಿಂದ ವರ್ತಿಸುತ್ತಿದೆ. ಮತದಾರರ ಪಟ್ಟಿಯ ಶುದ್ಧತೆಯ ಕುರಿತು ಚರ್ಚೆ ನಡೆಯಬೇಕು ಎಂದು ಅವರು ಹೇಳಿದರು.

ವಾಯು ಮಾಲಿನ್ಯದ ವಿಷಯದ ಕುರಿತು ಚರ್ಚೆಗೆ ಕಾಂಗ್ರೆಸ್ ಕೂಡ ಒತ್ತಾಯಿಸಿದೆ ಎಂದು ಗೊಗೊಯ್ ಹೇಳಿದರು.

ನಾಲ್ಕನೆಯದು ಆರ್ಥಿಕ ಭದ್ರತೆ. ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ.... ಪ್ರಕೃತಿ ವಿಕೋಪಗಳ ವಿರುದ್ಧವೂ ಭದ್ರತೆ ಬೇಕಿದೆ ಎಂದರು.

ನಾವು ವಿದೇಶಾಂಗ ನೀತಿಯ ವಿಷಯವನ್ನು ಸಹ ಎತ್ತಿದ್ದೇವೆ. ಭಾರತವು ಇತರ ದೇಶಗಳ ಆಧಾರದ ಮೇಲೆ ತನ್ನ ವಿದೇಶಾಂಗ ನೀತಿಯನ್ನು ರೂಪಿಸುತ್ತಿದೆ. ನಾವು ರಷ್ಯಾದಿಂದ ತೈಲ ಖರೀದಿಸುವುದನ್ನು ಇಷ್ಟಪಡುವುದಿಲ್ಲ. ಇನ್ನೊಂದು ದೇಶವು ತನ್ನ ರಕ್ಷಣೆಯಲ್ಲಿ ಹೂಡಿಕೆ ಮಾಡುತ್ತಿದೆ ಎಂದರು.

ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ. ಪ್ರಜಾಪ್ರಭುತ್ವದ ದೇವಾಲಯವನ್ನು ಒಬ್ಬ ವ್ಯಕ್ತಿಯ ಗೀತೆಗಳನ್ನು ಹಾಡಲು ಮಾತ್ರ ಬಳಸುವುದನ್ನು ಬಯಸುವುದಿಲ್ಲ ಎಂದು ಗೊಗೊಯ್ ಹೇಳಿದರು.

ಹಲವಾರು ಹೊಸ ಮಸೂದೆಗಳನ್ನು ಮಂಡಿಸಲು ಯೋಜಿಸಲಾಗಿರುವ ಅಧಿವೇಶನದಲ್ಲಿ ಉಭಯ ಸದನಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಇಂದಿನ ಸಭೆ ಕರೆಯಲಾಗಿದೆ.

ಚಳಿಗಾಲದ ಅಧಿವೇಶನವು ನಾಳೆ ಪ್ರಾರಂಭವಾಗಿ ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ. ಈ ಬಾರಿ ಒಟ್ಟು 15 ಅಧಿವೇಶನಗಳು ನಡೆಯಲಿವೆ. ಸಾಮಾನ್ಯವಾಗಿ, ಸಂಸತ್ತಿನ ಅಧಿವೇಶನಗಳು 20 ಅಧಿವೇಶನಗಳನ್ನು ಹೊಂದಿರುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement