ಪ್ರಾತಿನಿಧಿಕ ಚಿತ್ರ 
ದೇಶ

ಜಾರ್ಖಂಡ್‌; ಮಾವೋವಾದಿ ವಿರೋಧಿ ಕಾರ್ಯಾಚರಣೆ ವೇಳೆ ವಿಷಪೂರಿತ ಹಾವು ಕಡಿದು ಸಿಆರ್‌ಪಿಎಫ್ ಯೋಧ ಸಾವು!

ಸಾರಂಡಾ ಅರಣ್ಯದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಚೈಬಾಸಾ ಎಸ್ಪಿ ಅಮಿತ್ ರೇಣು ದೃಢಪಡಿಸಿದ್ದಾರೆ.

ರಾಂಚಿ: ಪಶ್ಚಿಮ ಸಿಂಗ್‌ಭೂಮ್‌ನ ಸಾರಂಡಾ ಕಾಡಿನಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಹಾವು ಕಚ್ಚಿದ ನಂತರ ಸಿಆರ್‌ಪಿಎಫ್ ಯೋಧ ಸಾವಿಗೀಡಾಗಿದ್ದಾರೆ.

ಜಾರ್ಖಂಡ್ ಪೊಲೀಸ್ ಪ್ರಧಾನ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ, 209 ಕೋಬ್ರಾ ಬೆಟಾಲಿಯನ್ ಸಾರಂಡಾದ ಛೋಟಾ ನಗರ ಕಾಡುಗಳಲ್ಲಿ ಮಾವೋವಾದಿಗಳ ವಿರುದ್ಧ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು.

ಈವೇಳೆ, ಉತ್ತರ ಪ್ರದೇಶದ ದಿಯೋರಿಯಾ ಮೂಲದ ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಅವರಿಗೆ ವಿಷಪೂರಿತ ಹಾವು ಕಚ್ಚಿದೆ. ಹಾವು ಕಡಿತದ ಬಗ್ಗೆ ಮಾಹಿತಿ ಪಡೆದ ತಕ್ಷಣ, ಅವರನ್ನು ಕೊಲೆಬಿರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂದೀಪ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಮೃತದೇಹವನ್ನು ರಸ್ತೆ ಮೂಲಕ ರಾಂಚಿಗೆ ತರಲಾಗುತ್ತಿದ್ದು, ಅಲ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಲಾಗುವುದು. ನಂತರ, ಅವರ ಮೃತದೇಹವನ್ನು ಉತ್ತರ ಪ್ರದೇಶದ ಅವರ ಹುಟ್ಟೂರಿಗೆ ಕಳುಹಿಸಲಾಗುವುದು.

ಸಾರಂಡಾ ಅರಣ್ಯದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಚೈಬಾಸಾ ಎಸ್ಪಿ ಅಮಿತ್ ರೇಣು ದೃಢಪಡಿಸಿದ್ದಾರೆ.

ಗಮನಾರ್ಹವಾಗಿ, ಹಾವುಗಳು, ಚೇಳುಗಳು, ಸೊಳ್ಳೆಗಳು ಮತ್ತು ಮಿಂಚು-ಗುಡುಗು ಮಾವೋವಾದಿಗಳಿಗಿಂತ ಹೆಚ್ಚು ಸವಾಲಿನವು ಎಂದು ಸಾಬೀತಾಗಿದೆ.

ಎಸ್ಪಿ ಪ್ರಕಾರ, ಸಾರಂಡಾ ಕಾಡುಗಳಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳ ಸಮಯದಲ್ಲಿ ಈ ಹಿಂದೆ ಹಲವಾರು ಹಾವು ಕಡಿತದ ಘಟನೆಗಳು ನಡೆದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

DA hike: ಕೇಂದ್ರ ಸರ್ಕಾರಿ ನೌಕರರಿಗೆ 'ದಸರಾ ಗಿಫ್ಟ್' ; ಶೇ. 3 ರಷ್ಟು ಹೆಚ್ಚುವರಿ ತುಟ್ಟಿ ಭತ್ಯೆ, ಕೇಂದ್ರ ಸಂಪುಟ ಅನುಮೋದನೆ

Pakistan Army ವಿರುದ್ಧ ತಿರುಗಿ ಬಿದ್ದ POK ಜನತೆ, ಸೇನಾಧಿಕಾರಿಗಳ Kidnap, ಸೇನಾ ಟ್ರಕ್ ನದಿಗೆ! Video

Asia Cup 2025: BCCI ವಾಗ್ದಂಡನೆ ಎಚ್ಚರಿಕೆಗೆ ಹೆದರಿದ Mohsin Naqvi, UAE Boardಗೆ ಭಾರತದ ಟ್ರೋಫಿ ಹಸ್ತಾಂತರ: ವರದಿ

ಕೇಂದ್ರದಿಂದ ಬರ ಪರಿಹಾರ: ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ, ಹೇಳಿದ್ದೇನು?

Asia Cup 2025 ಸೋಲಿನ ಬೆನ್ನಲ್ಲೇ ಬರೆ, ಬಾಲ ಬಿಚ್ಚಿದ್ದ ಆಟಗಾರರ ಪುಡಿಗಾಸಿಗೂ PCB ಕೊಕ್ಕೆ!, NOC 'Suspension'

SCROLL FOR NEXT