ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 100 ವರ್ಷಗಳ ಹಿಂದೆ ವಿಜಯ ದಶಮಿಯಂದು RSS ಸ್ಥಾಪನೆಗೊಂಡಿದ್ದನ್ನು ಅವರು ಇಂದು ಸ್ಮರಿಸಿಕೊಂಡಿದ್ದಾರೆ.
ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡಲು RSS ಹುಟ್ಟಿಕೊಂಡಿತು ಎಂದು ಹೇಳಿಕೊಂಡಿದ್ದಾರೆ.
ಇಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, 100 ವರ್ಷಗಳ ಹಿಂದೆ ವಿಜಯ ದಶಮಿಯಂದು, RSS ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುವ ಗುರಿಯೊಂದಿಗೆ ಹುಟ್ಟಿಕೊಂಡಿತು. ನೂರು ವರ್ಷಗಳಿಗೂ ಹೆಚ್ಚು ಕಾಲ, ಅಸಂಖ್ಯಾತ ಸ್ವಯಂಸೇವಕರು ಈ ದೃಷ್ಟಿಕೋನವನ್ನು ಈಡೇರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಬರೆದುಕೊಂಡಿದ್ದಾರೆ.
ಪುಣೆಯಲ್ಲಿ ಆರ್‌ಎಸ್‌ಎಸ್ 'ಪಥ ಸಂಚಲನ'ವನ್ನು ನಡೆಯಿತು. ಸಚಿವ ಚಂದ್ರಕಾಂತ್ ಪಾಟೀಲ್, ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ಮತ್ತು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಭಾಗವಹಿಸಿದ್ದರು. ಅವರು ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.