ಪ್ರಾತಿನಿಧಿಕ ಚಿತ್ರ 
ದೇಶ

ರಾಜಸ್ಥಾನ: ಕೋಟಾದಲ್ಲಿ ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ; ಕೊಲೆ ಎಂದು ಕುಟುಂಬಸ್ಥರ ಆರೋಪ

ಪೊಲೀಸರ ಪ್ರಕಾರ, ಆತ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ವಾಸಿಸುತ್ತಿದ್ದ.

ಕೋಟಾ: 20 ವರ್ಷದ ನೀಟ್ ಆಕಾಂಕ್ಷಿಯೊಬ್ಬ ತನ್ನ ಪಿಜಿ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಿಹಾರದ ಪಾಟ್ನಾ ಮೂಲದ ಲಕ್ಕಿ ಚೌಧರಿ, ಬುಧವಾರ ವಿಜ್ಞಾನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೆಕ್ಟರ್ -2 ರಲ್ಲಿರುವ ತನ್ನ ಪಿಜಿಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪೊಲೀಸರ ಪ್ರಕಾರ, ಆತ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ವಾಸಿಸುತ್ತಿದ್ದ.

ಕೊಠಡಿಯ ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಲಾಗಿತ್ತು. ಈ ಹಂತದಲ್ಲಿ ನಮಗೆ ಯಾವುದೇ ಕೃತ್ಯದ ಸುಳಿವು ಕಂಡುಬಂದಿಲ್ಲ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಮುಖೇಶ್ ಮೀನಾ ತಿಳಿಸಿದ್ದಾರೆ.

ಈಮಧ್ಯೆ, ಅದೇ ಪಿಜಿಯ ಪಕ್ಕದ ಕೋಣೆಯಲ್ಲಿ ವಾಸಿಸುತ್ತಿದ್ದ ಬಿಹಾರದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.

ಲಕ್ಕಿಯ ಮಾವ ಕೋಶಲ್ ಕುಮಾರ್ ಚೌಧರಿ, ಲಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿಯ ವ್ಯಕ್ತಿ ಅಲ್ಲ ಎಂದು ಹೇಳಿದರು.

ಶವಾಗಾರದ ಹೊರಗೆ ಪಿಟಿಐ ಜೊತೆ ಮಾತನಾಡಿದ ಅವರು, ಇದರಲ್ಲಿ ರಾಹುಲ್ ಎಂಬ ಯುವಕ ಭಾಗಿಯಾಗಿದ್ದಾನೆ ಎಂದು ಶಂಕಿಸಿದ್ದಾರೆ ಮತ್ತು ಪಾಟ್ನಾ ಮೂಲದ ಯುವಕ ಈಗ ನಾಪತ್ತೆಯಾಗಿದ್ದಾನೆ. ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಮತ್ತು ಅವರ ಮೊಬೈಲ್ ಫೋನ್ ಮತ್ತು ಪರ್ಸ್ ಕೂಡ ಕಾಣೆಯಾಗಿದೆ

ಲಕ್ಕಿಯ ತಂದೆ ಕೂಡ ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ರಾಹುಲ್ ವಿದ್ಯಾರ್ಥಿಯಲ್ಲ ಮತ್ತು ಆಗಾಗ್ಗೆ ತನ್ನ ಗೆಳತಿಯೊಂದಿಗೆ ತನ್ನ ಮಗನ ಕೋಣೆಗೆ ಭೇಟಿ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.

40,000 ರೂ. ಸಾಲ ಪಡೆದಿರುವುದಾಗಿ ಮತ್ತು ಅದನ್ನು ಮರುಪಾವತಿಸುವಂತೆ ಸಾಲದಾತರಿಂದ ಒತ್ತಡವಿತ್ತು ಎಂದು ಲಕ್ಕಿ ತನ್ನ ಸಹೋದರಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ತನ್ನ ಮಗನಿಗೆ ಆನ್‌ಲೈನ್‌ನಲ್ಲಿ 10,000 ರೂ. ಪಾವತಿಸಿರುವುದಾಗಿಯೂ, ಉಳಿದ ಹಣವನ್ನು ಪಾವತಿಸುವುದಾಗಿಯೂ ಅವರ ತಂದೆ ಹೇಳಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಗುರುವಾರ ಲಕ್ಕಿಯ ಕುಟುಂಬ ಸದಸ್ಯರಿಗೆ ಶವವನ್ನು ಹಸ್ತಾಂತರಿಸಲಾಗಿದೆ ಎಂದು ಎಎಸ್‌ಐ ಲಾಲ್ ಸಿಂಗ್ ತಿಳಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 194ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ʻರಿಪಬ್ಲಿಕ್ ಆಫ್ ಬಳ್ಳಾರಿʼಗೆ ಮತ್ತೆ ಅವಕಾಶ ನೀಡಲ್ಲ; ರೆಡ್ಡಿ ಕೋಟೆ ನಿರ್ಮಿಸಿಕೊಂಡಿದ್ದಾರೆ, ಅವರನ್ನು ಕೊಲ್ಲಲು ಸಾಧ್ಯವೇ?

ವೆನೆಜುವೆಲಾಗೆ ನುಗ್ಗಿದ ಅಮೆರಿಕ ಸೇನೆ: 30 ನಿಮಿಷಗಳಲ್ಲೇ ರಣಬೇಟೆ; ಅಧ್ಯಕ್ಷ ಮಡುರೊ-ಪತ್ನಿ ಸೆರೆ, ತುರ್ತುಪರಿಸ್ಥಿತಿ ಘೋಷಣೆ!

NGEFನಲ್ಲಿ 65 ಎಕರೆ Tree Park: ಲಾಲ್ ಬಾಗ್-ಕಬ್ಬನ್ ಪಾರ್ಕ್ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ವೃಕ್ಷೋದ್ಯಾನ!

ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಗಂಭೀರ ಆರೋಪ

6,6,6,6,6,4: ಒಂದೇ ಓವರ್ ನಲ್ಲಿ 34 ರನ್ ಚಚ್ಚಿದ Hardik Pandya, 93 ಎಸೆತಗಳಲ್ಲಿ 133ರನ್ ಗಳಿಕೆ! Video

SCROLL FOR NEXT