ಪಾಟ್ನಾ: ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ, ಹಾಲಿ ಜೆಡಿ(ಯು) ಶಾಸಕ ಸಂಜೀವ್ ಕುಮಾರ್ ಅವರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸೇರಿದರು.
ಸಂಜೀವ್ ಕುಮಾರ್ ಅವರು, ಪ್ರತಿಪಕ್ಷ ನಾಯಕ, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್, ರಾಜ್ಯ ಅಧ್ಯಕ್ಷ ಮಂಗನಿ ಲಾಲ್ ಮಂಡಲ್ ಮತ್ತು ಇತರ ಹಿರಿಯ ಪಕ್ಷದ ನಾಯಕರ ಸಮ್ಮುಖದಲ್ಲಿ ಆರ್‌ಜೆಡಿ ಸೇರಿದರು.
ಸಂಜೀವ್ ಕುಮಾರ್ ಅವರ ಸೇರ್ಪಡೆಯು ಖಗಾರಿಯಾ ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ನಿರೀಕ್ಷೆಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತೇಜಸ್ವಿ ಹೇಳಿದರು.
ಸಂಜೀವ್ ಕುಮಾರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆಲುವು ಖಚಿತಪಡಿಸಿಕೊಳ್ಳಲು ಚುನಾವಣೆಗೆ ಮುಂಚಿತವಾಗಿ ಪಕ್ಷ ಬದಲಾಯಿಸುತ್ತಾರೆ ಎಂಬ ವದಂತಿಗಳ ನಡುವೆ ಅವರು ಇಂದು ಆರ್ ಜೆಡಿ ಸೇರಿದ್ದಾರೆ.