ಯುವತಿ ಎದೆ ಮುಟ್ಟಿದ ಬ್ಲಿಂಕಿಟ್ ಡೆಲವರಿ ಏಜೆಂಟ್ 
ದೇಶ

ಡೆಲಿವರಿಗೆ ಬಂದು ಎದೆ ಮುಟ್ಟಿದ Blinkit ಏಜೆಂಟ್! ಯುವತಿ ಆರೋಪವೇನು? Video Viral

ಮಹಿಳೆಯ ಎದೆ ಮುಟ್ಟಿ ಡೆಲಿವರಿ ಬಾಯ್​ ಒಬ್ಬ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈ: ಆನ್ಲೈನ್ ಡೆಲಿವರಿ ಏಜೆಂಟ್ ಓರ್ವ ಡೆಲಿವರಿ ನೆಪದಲ್ಲಿ ಯುವತಿಯ ಎದೆ ಮುಟ್ಟಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೋ ಕೂಡ ವ್ಯಾಪಕ ವೈರಲ್ ಆಗುತ್ತಿದೆ.

ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಬ್ಲಿಂಕಿಟ್ ಡೆಲಿವರಿ ಏಜೆಂಟ್ ನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಯ ಎದೆ ಮುಟ್ಟಿ ಡೆಲಿವರಿ ಬಾಯ್​ ಒಬ್ಬ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಕ್ಸ್​​ನಲ್ಲಿ ಎಟರ್ನಲ್ ಎಕ್ಸ್​ಫ್ಲೇಮ್ಸ್​ ಎನ್ನುವ ಖಾತೆಯಿಂದ ಈ ವಿಡಿಯೋ ಅಪ್​ಲೋಡ್ ಮಾಡಲಾಗಿದ್ದು, ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿಯನ್ನು ಇವರು ನೀಡಿಲ್ಲ.

ಪಾರ್ಸೆಲ್ ನೀಡಲು ಬಂದವನು ಒಂದು ಕೈಯಲ್ಲಿ ಹಣ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಪಾರ್ಸೆಲ್ ಕೊಡುವಾಗ ಮಹಿಳೆಯ ಎದೆ ಮುಟ್ಟಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದೆ. ಮಹಿಳೆ ದೂರು ದಾಖಲಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಬ್ಲಿಂಕಿಟ್ ಆತನನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.

ಮುಂಬೈ ಪೊಲೀಸರ ಪ್ರತಿಕ್ರಿಯೆ

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಪ್ರತಿಕ್ರಿಯೆ ನೀಡಿರುವ, ಮುಂಬೈ ಪೊಲೀಸರು, "ನಾವು ನಿಮ್ಮನ್ನು ಅನುಸರಿಸಿದ್ದೇವೆ. ದಯವಿಟ್ಟು ನಿಮ್ಮ ಸಂಪರ್ಕ ವಿವರಗಳನ್ನು ನೇರ ಸಂದೇಶದಲ್ಲಿ (DM) ನಲ್ಲಿ ಹಂಚಿಕೊಳ್ಳಿ" ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Namma Metro ಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: Hindu ಯುವಕನ ಜೊತೆ Muslim ಯುವತಿ ಪರಾರಿ?: ಪೊಲೀಸ್ ಠಾಣೆ ಎದುರೇ ಚೂರಿ ಇರಿತ!

ಜಾತಿ ಗಣತಿ ಕುರಿತು ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ ಪ್ರತಿಪಕ್ಷ ಬಿಜೆಪಿ, ಜೆಡಿಎಸ್

ಮಧ್ಯ ಪ್ರದೇಶದಲ್ಲಿ ಕೋಲ್ಡ್ರಿಫ್ ಸಿರಪ್ ನಿಂದ ಮತ್ತೆ ಇಬ್ಬರು ಮಕ್ಕಳು ಸಾವು

Couple Romance: ರೈಲಿನಲ್ಲಿ ಜನರ ಎದುರೆ ಒಬ್ಬರಿಗೊಬ್ಬರು ತಬ್ಬಿಕೊಂಡು ಚುಂಬಿಸಿ ಯುವಜೋಡಿ; ಮುಜುಗರಕ್ಕೀಡಾದ ಪ್ರಯಾಣಿಕರು, Video!

SCROLL FOR NEXT