ಪ್ರಧಾನಿ ಮೋದಿ 
ದೇಶ

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಮುಂಬೈ ಮೆಟ್ರೋ ಲೈನ್ -3ರ ಹಂತ 2 ಬಿ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದನ್ನು 12,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಬುಧವಾರ 19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದರು.

1,160 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ಹೊಸ ವಿಮಾನ ನಿಲ್ದಾಣವು ಭಾರತದ ವಾಯುಯಾನ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಭಾರೀ ಸಂಚಾರ ಹೊರೆಯನ್ನು ಕಡಿಮೆ ಮಾಡಲು ಸಜ್ಜಾಗಿದೆ.

ಪ್ರಧಾನಿ ಮೋದಿ ಅವರು ನವಿ ಮುಂಬೈ ವಿಮಾನ ನಿಲ್ದಾಣ ಉದ್ಘಾಟನೆಗೆ ಮುನ್ನ, ವಿಮಾನ ನಿಲ್ದಾಣದ ಒಳಗೆ ಒಂದು ಸುತ್ತು ಓಡಾಡಿ, ಅತ್ಯಾಧುನಿಕ ಸೌಲಭ್ಯಗಳನ್ನು ಪರಿಶೀಲಿಸಿದರು.

ಈ ವೇಳೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಕೇಂದ್ರ ಸಚಿವ ಮುರಳೀಧರ್ ಮೊಹೋಲ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯಪಾಲ ಆಚಾರ್ಯ ದೇವವ್ರತ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪಸ್ಥಿತರಿದ್ದರು.

ಇದು ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯಾಗಿದ್ದು, ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದೆ.

ಇದೇ ವೇಳೆ ಪ್ರಧಾನಿ ಮೋದಿ, ಅತ್ರೆ ಚೌಕ್‌ನಿಂದ ಕಫೆ ಪೆರೇಡ್‌ವರೆಗೆ ವಿಸ್ತರಿಸಿರುವ ಮುಂಬೈ ಮೆಟ್ರೋ ಲೈನ್ -3ರ ಹಂತ 2 ಬಿ ಅನ್ನು ಉದ್ಘಾಟಿಸಿದರು. ಇದನ್ನು 12,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಸಾರ್ವಜನಿಕ ಸಾರಿಗೆ ನಿರ್ವಾಹಕರಲ್ಲಿ ಸಂಯೋಜಿತ ಮೊಬೈಲ್ ಟಿಕೆಟಿಂಗ್ ಸೇರಿದಂತೆ ಪ್ರಯಾಣಿಕರಿಗೆ ಹಲವಾರು ಪ್ರಯೋಜನಗಳನ್ನು ನೀಡುವ ಮುಂಬೈ ಒನ್ ಅಪ್ಲಿಕೇಶನ್ ಅನ್ನು ಸಹ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಮಹಾರಾಷ್ಟ್ರದಲ್ಲಿ ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಇಲಾಖೆಯ ಅಲ್ಪಾವಧಿಯ ಉದ್ಯೋಗಾವಕಾಶ ಕಾರ್ಯಕ್ರಮ(STEP)ಕ್ಕೂ ಪ್ರಧಾನಿ ಚಾಲನೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಶೀಘ್ರವೇ ಭಾರತದ ವಶ; ಗಡಿಗಳು ಬದಲಾಗಲಿವೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್; ಪಾಕ್ ಗಡ ಗಡ!

'ತಾಯಿ ಎದೆ ಹಾಲಿನಲ್ಲೇ ಯುರೇನಿಯಂ ಅಂಶ, ಬಿಹಾರದಲ್ಲಿ ಶಿಶುಗಳ ಮೇಲೆ ಮಾರಕ ಪರಿಣಾಮ': ತಜ್ಞರು ಹೇಳಿದ್ದೇನು?

Video: 'ಮನೆಹಾಳು ಕೆಲಸ ಬೇಡ.. ನನ್ನ ಮತ್ತು ಕುಮಾರಸ್ವಾಮಿ ನಡುವೆ ತಂದಿಡಬೇಡಿ..': ಮಾಧ್ಯಮಗಳ ವಿರುದ್ಧ ಡಿಕೆ ಶಿವಕುಮಾರ್ ಕಿಡಿ

ನನಗೇನು ಗೊತ್ತಿಲ್ಲ, ನನ್ನೇನು ಕೇಳ್ಬೇಡಿ: ಏನೇ ಇದ್ದರೂ ತೀರ್ಮಾನ ಹೈಕಮಾಂಡ್ ಮಾಡುತ್ತೇ: ರಾಜ್ಯ ರಾಜಕಾರಣ ಕುರಿತು ಖರ್ಗೆ ಹೇಳಿಕೆ

ಲೈಂಗಿಕ ಬಲವರ್ಧನೆಗೆ ಆಯುರ್ವೇದ ಔಷಧಿ: 'ವಿಜಯ್ ಗುರೂಜಿ' ನಂಬಿ, ಕಿಡ್ನಿ, 48 ಲಕ್ಷ ಕಳೆದುಕೊಂಡ ಬೆಂಗಳೂರು ಟೆಕ್ಕಿ!

SCROLL FOR NEXT