ಆನಂದಿ ಬೆನ್ ಪಟೇಲ್  
ದೇಶ

'ಹೆಣ್ಣುಮಕ್ಕಳನ್ನು 50 ತುಂಡುಗಳಾಗಿ ಕತ್ತರಿಸಿದ್ದನ್ನು ನೋಡಿದ್ದೇವೆ, ಲಿವ್-ಇನ್ ಸಂಬಂಧಗಳಿಂದ ದೂರವಿರಿ': ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಕಿವಿಮಾತು!

ವಾರಣಾಸಿಯಲ್ಲಿರುವ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ 47 ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಆನಂದಿ ಬೆನ್ ಪಟೇಲ್, ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕ ವಿತರಿಸಿ ಮಾತನಾಡುವಾಗ ಈ ಕಿವಿಮಾತುಗಳನ್ನು ಹೇಳಿದ್ದಾರೆ.

ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೆಣ್ಣುಮಕ್ಕಳು ಲಿವ್-ಇನ್ ಸಂಬಂಧಗಳಿಂದ ದೂರವಿರಬೇಕೆಂದು ಒತ್ತಾಯಿಸಿದ್ದಾರೆ. ಲಿವ್ ಇನ್ ಸಂಬಂಧಗಳನ್ನು ಯುವತಿಯರನ್ನು ಶೋಷಣೆಗೆ ಗುರಿಯಾಗಿಸಬಹುದು ಎಂದು ಎಚ್ಚರಿಸಿದ್ದಾರೆ.

ಹೆಣ್ಣುಮಕ್ಕಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು. ಲಿವ್-ಇನ್ ಸಂಬಂಧಗಳು ಶೋಷಣೆಗೆ ಕಾರಣವಾಗುವ ಸಂದರ್ಭಗಳಿಂದ ದೂರವಿರಬೇಕು ಎಂದು ಎಚ್ಚರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿ ರಾಜಭವನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಾರಣಾಸಿಯಲ್ಲಿರುವ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ 47 ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಆನಂದಿ ಬೆನ್ ಪಟೇಲ್, ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕ ವಿತರಿಸಿ ಮಾತನಾಡುವಾಗ ಈ ಕಿವಿಮಾತುಗಳನ್ನು ಹೇಳಿದ್ದಾರೆ.

ನಮ್ಮ ಹೆಣ್ಣುಮಕ್ಕಳಿಗೆ ನಾನು ಒಂದೇ ಒಂದು ಸಂದೇಶವನ್ನು ಹೇಳಬೇಕೆಂದು ಇಚ್ಛಿಸುತ್ತೇನೆ: ಲಿವ್-ಇನ್ ಸಂಬಂಧಗಳು ಈಗ ಫ್ಯಾಷನ್‌ ಆಗಿರಬಹುದು, ಆದರೆ ಅದನ್ನು ಮಾಡಬೇಡಿ. ನಿಮ್ಮ ಜೀವನದ ಬಗ್ಗೆ ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ. ಏನಾಗುತ್ತದೆ ಎಂಬುದನ್ನು ನೀವು ನೋಡಿದ್ದೀರಿ - 50 ತುಂಡುಗಳಾಗಿ ಮಾಡಿದವರನ್ನು ಈ ಸಮಾಜದಲ್ಲಿ ಕಂಡಿದ್ದೇವೆ. ಕಳೆದ 10 ದಿನಗಳಲ್ಲಿ, ಅಂತಹ ಪ್ರಕರಣಗಳ ಬಗ್ಗೆ ನನಗೆ ವರದಿಗಳು ಬರುತ್ತಿವೆ ಮತ್ತು ನಾನು ಅವುಗಳನ್ನು ನೋಡಿದಾಗಲೆಲ್ಲಾ, ನಮ್ಮ ಹೆಣ್ಣುಮಕ್ಕಳು ಈ ಆಯ್ಕೆಗಳನ್ನು ಏಕೆ ಮಾಡುತ್ತಾರೆ ನೋವಾಗುತ್ತದೆ ಎಂದರು.

ಮಹಿಳೆಯರ ಮೇಲಿನ ಅಪರಾಧಗಳು

ಮಹಿಳೆಯರ ಮೇಲಿನ ಹೆಚ್ಚುತ್ತಿರುವ ಹಿಂಸಾಚಾರ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಜಾಗರೂಕರಾಗಿರಲು ಸಲಹೆ ನೀಡಿದ್ದಾರೆ. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮತ್ತು ತಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಜನರ ಬಗ್ಗೆ ಜಾಗೃತರಾಗಿರಲು ಅವರು ಕರೆ ನೀಡಿದ್ದಾರೆ.

ಶಿಕ್ಷಣವು ಶಿಸ್ತು ಮತ್ತು ಕರ್ತವ್ಯವನ್ನು ಬೆಳೆಸಬೇಕು

ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯ ಕುರಿತು ತಮ್ಮ ಸಂದೇಶ ನೀಡಿರುವ ಅವರು, ಶಿಕ್ಷಣವೆಂದರೆ ಕೇವಲ ಪದವಿ ಗಳಿಸುವುದಲ್ಲ, ಶಿಕ್ಷಣವು ಕೇವಲ ಪ್ರಮಾಣಪತ್ರಗಳನ್ನು ಗಳಿಸುವ ಸಾಧನವಲ್ಲ, ಜೀವನದಲ್ಲಿ ಬದಲಾವಣೆಯನ್ನು ತರುವ ಸಾಧನವಾಗಿದೆ ಎಂದು ಹೇಳಿದರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಕರ್ತವ್ಯ ಮತ್ತು ರಾಷ್ಟ್ರೀಯತೆಯ ಪ್ರಜ್ಞೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿದರು.

ವಿದ್ಯಾರ್ಥಿಗಳು ಹಾಸ್ಟೆಲ್‌ಗಳು ಮತ್ತು ವಿಶ್ವವಿದ್ಯಾಲಯಗಳನ್ನು ನೋಡಿಕೊಳ್ಳಬೇಕು, ಪ್ರತಿ ವಾರ ಕನಿಷ್ಠ ಒಂದು ಗಂಟೆ ಸ್ವಚ್ಛತಾ ಅಭಿಯಾನಗಳಲ್ಲಿ ಭಾಗವಹಿಸಬೇಕು, ತಮ್ಮ ಸುತ್ತಲಿನ ಪ್ರದೇಶಗಳಿಗೆ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಸಂಶೋಧನೆ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನಹರಿಸಿ

ಪರಿಸರ ಸಂರಕ್ಷಣೆ, ಸಾವಯವ ಕೃಷಿ ಮತ್ತು ವಿಪತ್ತು ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು, ನೈಸರ್ಗಿಕ ವಿಕೋಪಗಳು ಮಾನವ ಪರಿಸರ ಸಮತೋಲನದ ಅಡ್ಡಿಪಡಿಸುವಿಕೆಗೆ ಸಂಬಂಧಿಸಿವೆ ಎಂದರು. ನಾವು ಪರಿಸರವನ್ನು ಕೆಡಿಸುತ್ತಿದ್ದೇವೆ. ಅದರ ಸಮತೋಲನವನ್ನು ಪುನಃಸ್ಥಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ತೃತೀಯ ಲಿಂಗಿಗಳ ಶಿಕ್ಷಣವನ್ನು ಉತ್ತೇಜಿಸುವಲ್ಲಿ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಆನಂದಿ ಬೆನ್ ಪಟೇಲ್ ಶ್ಲಾಘಿಸಿದರು. ಶೈಕ್ಷಣಿಕ ಸಹಯೋಗವನ್ನು ವಿಸ್ತರಿಸಲು ತೈವಾನ್‌ನೊಂದಿಗೆ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಘೋಷಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

Maria Corina Machado: ನೋಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾ ಮಚಾದೊ ಕುರಿತು ಆಸಕ್ತಿಕರ ಮಾಹಿತಿ ಇಲ್ಲಿದೆ!

ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಮರುಜೀವ?: ಗಿರೀಶ್ ಮಟ್ಟಣ್ಣವರ್ ಗೆ ಸಂಕಷ್ಟ!

'ಇದೇ ಕೊನೆ, ಇನ್ನೆಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.. ಕರ್ನಾಟಕ 3 ಭಾಗ, ಭಾರತ 2 ಭಾಗ, ಮೋದಿ ದೇಶದ ರಕ್ಷಾ ಕವಚ': "ಬ್ರಹ್ಮಾಂಡ" ಭವಿಷ್ಯ

SCROLL FOR NEXT