ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಅವರೊಂದಿಗೆ ಪೂಜಾ ಶಕುನ್ ಪಾಂಡೆ 
ದೇಶ

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಆಕೆ ಕೆಲವು ಸಮಯದಿಂದ ಅಭಿಷೇಕ್ ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಆಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಆತ ಕಳೆದುಕೊಂಡ ನಂತರ ಅವನ ಹತ್ಯೆಗೆ ಯೋಜಿಸಿದ್ದಳು

ಲಖನೌ: ಸೆಪ್ಟೆಂಬರ್ 26 ರಂದು ಉತ್ತರ ಪ್ರದೇಶದ ಅಲಿಗಢದಲ್ಲಿ ಉದ್ಯಮಿಯೊಬ್ಬರನ್ನು ಹತ್ಯೆಗೈದ ಪ್ರಮುಖ ಆರೋಪಿಯಾಗಿರುವ ಅಖಿಲ ಭಾರತ ಹಿಂದೂ ಮಹಾಸಭಾದ(ABHM) ಪದಾಧಿಕಾರಿ ಪೂಜಾ ಶಕುನ್ ಪಾಂಡೆ ಅವರನ್ನು ಶನಿವಾರ ರಾಜಸ್ಥಾನದ ಭರತ್‌ಪುರದಿಂದ ಬಂಧಿಸಲಾಗಿದೆ.

ದ್ವಿಚಕ್ರ ವಾಹನ ಶೋರೂಂ ಮಾಲೀಕ ಅಭಿಷೇಕ್ ಗುಪ್ತಾ ಹತ್ಯೆ: 25 ವರ್ಷದ ದ್ವಿಚಕ್ರ ವಾಹನ ಶೋರೂಂ ಮಾಲೀಕ ಅಭಿಷೇಕ್ ಗುಪ್ತಾ ಅವರು ಹತ್ರಾಸ್‌ಗೆ ಬಸ್ ಹತ್ತುವಾಗ ಅಲಿಘಡದ ರೋರಾವರ್ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಪೂಜಾ ಶಕುನ್ ಪಾಂಡೆ ಮತ್ತು ಆಕೆಯ ಪತಿ, ABHM ವಕ್ತಾರ ಅಶೋಕ್ ಪಾಂಡೆ, ಮೊಹಮ್ಮದ್ ಫಜಲ್ ಮತ್ತು ಆಸಿಫ್ ಎಂಬ ಇಬ್ಬರು ಶೂಟರ್‌ಗಳಿಗೆ ಸುಫಾರಿ ನೀಡಿದ್ದರು ಎನ್ನಲಾಗಿದೆ.

ಅದೇ ರಾತ್ರಿ ಪೂಜಾ ಮತ್ತು ಆಕೆಯ ಪತಿ ವಿರುದ್ಧ ರೋರಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆಲವು ದಿನ ಅಭಿಷೇಕ್ ಗೆ ಲೈಂಗಿಕ ಕಿರುಕುಳ: ಶುಕ್ರವಾರ ತಡರಾತ್ರಿ ಭರತ್‌ಪುರದಿಂದ ಪೂಜಾ ಅವರನ್ನು ಬಂಧಿಸಲಾಗಿದೆ ಎಂದು ಅಲಿಘಡದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಕುಮಾರ್ ಜಾದೌನ್ ತಿಳಿಸಿದ್ದಾರೆ. ಆಕೆ ಕೆಲವು ದಿನದಿಂದ ಅಭಿಷೇಕ್ ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಆಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಆತ ಕಳೆದುಕೊಂಡ ನಂತರ ಅವನ ಹತ್ಯೆಗೆ ಯೋಜಿಸಿದ್ದಳು ಎಂದು ಅಭಿಷೇಕ್ ಕುಟುಂಬ ಆರೋಪಿಸಿದೆ.

ಅಲ್ಲದೇ ಪೂಜಾ ಮತ್ತು ಅಭಿಷೇಕ್ ನಡುವಿನ ವ್ಯವಹಾರವು ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ಅಶೋಕ್ ಪಾಂಡೆ ಮತ್ತು ಇಬ್ಬರು ಶೂಟರ್‌ಗಳು ಈಗಾಗಲೇ ಜೈಲಿನಲ್ಲಿದ್ದಾರೆ.

ನಾಥೂರಾಂ ಗೋಡ್ಸೆ ಹೊಗಳಿ ಸುದ್ದಿಯಾಗಿದ್ದ ಪೂಜಾ:

'ಮಹಾಮಂಡಳೇಶ್ವರ' ಎಂಬ ಧಾರ್ಮಿಕ ಬಿರುದು ಹೊಂದಿದ್ದು, 'ಅನ್ನಪೂರ್ಣ ಮಾ' ಎಂದೂ ಕರೆಸಿಕೊಳ್ಳುವ ಪೂಜಾ ಶಕುನ್ ಪಾಂಡೆ, ಅಭಿಷೇಕ್ ಗುಪ್ತಾ ಕೊಲೆಯಾದ ರಾತ್ರಿಯಿಂದ ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ರೂ. 50,000 ಬಹುಮಾನ ಘೋಷಿಸಲಾಗಿತ್ತು. ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಸಾರ್ವಜನಿಕವಾಗಿ ಹೊಗಳಿದ್ದಕ್ಕಾಗಿ ಪೂಜಾ ಈ ಹಿಂದೆ ಸುದ್ದಿಯಾಗಿದ್ದರು.

ಬಂಧನದ ನಂತರ ಆಕೆಯನ್ನು ವಿಚಾರಣೆಗಾಗಿ ಅಲಿಗಢಕ್ಕೆ ಕರೆತರಲಾಗಿದೆ. ಪೂಜಾ ಶಕುನ್ ಪಾಂಡೆ ಮತ್ತು ಅಶೋಕ್ ಪಾಂಡೆ ಮತ್ತು ತನ್ನ ಮಗನ ನಡುವಿನ ಸಂಬಂಧವು ಹದಗೆಟ್ಟಿತ್ತು ಎಂದು ಗುಪ್ತಾ ಅವರ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT