ನವದೆಹಲಿ: ಭಾರತದ ಭೇಟಿಯಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಭಾನುವಾರದ ಆಗ್ರಾ ಭೇಟಿಯನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಈ ರದ್ದತಿಗೆ ಕಾರಣ ತಿಳಿದುಬಂದಿಲ್ಲ. ಆಫ್ಘನ್ ವಿದೇಶಾಂಗ ಸಚಿವರು ತಾಜ್ ಮಹಲ್ ನೋಡಲು ಇಂದು ಆಗ್ರಾಕ್ಕೆ ತೆರಳಬೇಕಿತ್ತು.
ಮುತಾಕಿ ಉತ್ತರ ಪ್ರದೇಶದಿಂದ ದೆಹಲಿಗೆ ಹಿಂದಿರುಗುವ ಮೊದಲು ತಾಜ್ ಮಹಲ್ ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಳೆಯಲು ನಿರ್ಧರಿಸಲಾಗಿತ್ತು. ಆದರೆ ಭೇಟಿಯನ್ನು ದಿಢೀರನೇ ರದ್ದುಗೊಳಿಸಲಾಗಿದೆ.
ಈ ರದ್ದತಿಯನ್ನು ಜಿಲ್ಲಾಡಳಿತದ ಪ್ರೋಟೋಕಾಲ್ ಇಲಾಖೆ ಖಚಿತಪಡಿಸಿದೆ. ಆರು ದಿನಗಳ ಭಾರತ ಪ್ರವಾಸದಲ್ಲಿರುವ ಮುತಾಕಿ, ನಾಲ್ಕು ವರ್ಷಗಳ ಹಿಂದೆ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಭಾರತಕ್ಕೆ ಭೇಟಿ ನೀಡಿದ ಮೊದಲ ಹಿರಿಯ ತಾಲಿಬಾನ್ ಸಚಿವರಾಗಿದ್ದಾರೆ.
ಅಮೀರ್ ಖಾನ್ ಮುತಾಕಿ, ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿರ್ಬಂಧದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ. ಈ ನಡುವೆ ತಾಜ್ ಮಹಲ್ ಭೇಟಿ ದಿಢೀರ್ ರದ್ದಾಗಿದೆ. ಇದಕ್ಕೆ ನಿರ್ದಿಷ್ಟ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.