ಕಾಡಾನೆ ಬಾಲ ಎಳೆಯುತ್ತಿರುವ ಯುವಕ 
ದೇಶ

West Bengal: ಬಾಲ ಎಳೆದು 'ಕುಚೇಷ್ಟೆ' ಮಾಡಿದವನಿಗೆ ಕಾಡಾನೆ ಮಾಡಿದ್ದೇನು? Video ವೈರಲ್

ಯುವಕ ಮೋಜಿಗಾಗಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್, ಲೈಕ್ ಗಾಗಿ ಹಿಂದಿನಿಂದ ಆನೆಯ ಬಳಿಗೆ ಬಂದು ಅದರ ಬಾಲವನ್ನು ಎಳೆಯುತ್ತಾನೆ.

ಮೇದಿನಿಪುರ್: ಜನರ ಗುಂಪೊಂದು ಕಾಡಾನೆಯೊಂದರ ಬಾಲ ಎಳೆದು, ಅದರ ಕಿವಿ ಮೇಲೆ ಕಲ್ಲು ಎಸೆದು ಕಿರುಕುಳ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಚೋದನೆ ವರ್ತನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದ ಮೇದಿನಿಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಅರಣ್ಯ ಪ್ರದೇಶದ ಸಮೀಪವಿರುವ ಹಳ್ಳಿಯೊಂದಕ್ಕೆ ನುಗ್ಗಿದ ಆನೆಗಳ ಹಿಂಡಿನ ಹತ್ತಿರ ಜನರು ಗುಂಪು ಗುಂಪಾಗಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಯುವಕ ಮೋಜಿಗಾಗಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್, ಲೈಕ್ ಗಾಗಿ ಹಿಂದಿನಿಂದ ಆನೆಯ ಬಳಿಗೆ ಬಂದು ಅದರ ಬಾಲವನ್ನು ಎಳೆಯುತ್ತಾನೆ.

ಗಾಬರಿಗೊಂಡ ಕಾಡಾನೆ ದೂರ ಸರಿಯಲು ಪ್ರಯತ್ನಿಸುತ್ತಿರುವಾಗ ಆ ಯುವಕ ನಗುತ್ತಾ ವಾಪಸ್ಸಾಗುವುದು ವಿಡಿಯೋದಲ್ಲಿದೆ. ಬೇರೆಯವರು ಆನೆ ಕಿವಿ ಮೇಲೆ ಕಲ್ಲುಗಳನ್ನು ಕೂಡಾ ಎಸೆಯುತ್ತಾರೆ.

ಇಲ್ಲಿ ನಿಜವಾದ ವನ್ಯಪ್ರಾಣಿ ಯಾರು? ಅಥವಾ ಮನುಷ್ಯರು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆಯೇ? ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಜನರ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾಡು ಪ್ರಾಣಿಗಳಿಗೆ ಕಿರುಕುಳ ನೀಡುವುದು ಅಥವಾ ಪ್ರಚೋದಿಸುವುದು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಆನೆಗೆ ಹೀಗೆ ಕಿರುಕುಳ ನೀಡಿದವರಿಗೆ ಕಟ್ಟುನಿಟ್ಟಿನ ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಬಳಕೆದಾರರು ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆಂಗಳೂರು ಬಿಸಿನೆಸ್ ಕಾರಿಡಾರ್ ಗೆ ಸಂಪುಟ ಅನುಮೋದನೆ; ಎರಡು ವರ್ಷದಲ್ಲಿ ಪೂರ್ಣ

ರಷ್ಯಾ ತೈಲ ಖರೀದಿ ವಿಷಯವಾಗಿ ಮೋದಿ ಟ್ರಂಪ್ ಜೊತೆ ಮಾತಾಡೇ ಇಲ್ಲ- EAM

Gujarat: ಒಂದು ಕಾಲದ ಬಿಜೆಪಿ ವಿರೋಧಿಗಳಿಗೆ ಒಲಿದ ಸಚಿವ ಸ್ಥಾನ?: ನೂತನ ಸಂಪುಟದಲ್ಲಿ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್!

ಅಕ್ರಮ ಗಣಿಗಾರಿಕೆ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿ ಮೇಲೆ ಹಲ್ಲೆ, ಮೂತ್ರ ವಿಸರ್ಜನೆ!

KPCC ಯಲ್ಲಿ ಕೆಲಸದಲ್ಲಿರುವುದಾಗಿ ನಂಬಿಸಿ ಮಹಿಳೆಯರ ಜೊತೆ ರಾಸಲೀಲೆ: ಗಂಡನ S**X ವಿಡಿಯೋ ನೋಡಿ ದಂಗಾದ ಪತ್ನಿ!

SCROLL FOR NEXT