ಮಮತಾ ಬ್ಯಾನರ್ಜಿ 
ದೇಶ

ಸಿಲಿಗುರಿಯಲ್ಲಿ 'ಮಹಾಕಾಲ' ದೇವಸ್ಥಾನ ನಿರ್ಮಾಣ: ಪಶ್ಚಿಮ ಬಂಗಾಳ ಸಿಎಂ ಮಮತಾ

ಸಿಲಿಗುರಿಯಲ್ಲಿ ಪ್ರಸ್ತಾವಿತ ಸಮಾವೇಶ ಕೇಂದ್ರದ ಪಕ್ಕದಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಕೋಲ್ಕತ್ತಾ: ಸಿಲಿಗುರಿಯಲ್ಲಿ ದೊಡ್ಡ 'ಮಹಾಕಾಲ' ದೇವಸ್ಥಾನವನ್ನು ನಿರ್ಮಿಸಲಾಗುವುದು ಮತ್ತು ಇದಕ್ಕಾಗಿ ಟ್ರಸ್ಟ್ ಅನ್ನು ರಚಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ಇಂದು ಡಾರ್ಜಿಲಿಂಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, ಸಿಲಿಗುರಿಯಲ್ಲಿ ಪ್ರಸ್ತಾವಿತ ಸಮಾವೇಶ ಕೇಂದ್ರದ ಪಕ್ಕದಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಹಿಂದೂ ಪುರಾಣಗಳಲ್ಲಿ ಮಹಾಕಾಲ ಎಂಬುದು ಶಿವನ ಮತ್ತೊಂದು ಹೆಸರು.

"ಸಿಲಿಗುರಿಯಲ್ಲಿ ಪ್ರಸ್ತಾವಿತ ಸಮಾವೇಶ ಕೇಂದ್ರದ ಬಳಿ ದೊಡ್ಡ ಮಹಾಕಾಲ ದೇವಸ್ಥಾನ ತಲೆ ಎತ್ತಲಿದೆ. ಇದಕ್ಕಾಗಿ ಟ್ರಸ್ಟ್ ಅನ್ನು ರಚಿಸಬೇಕಾಗಿದೆ" ಎಂದು ಡಾರ್ಜಿಲಿಂಗ್‌ನ ಮಹಾಕಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಮತಾ ಬ್ಯಾನರ್ಜಿ ತಿಳಿಸಿದರು.

ದಿಘಾದಲ್ಲಿ ಜಗನ್ನಾಥ ದೇವಾಲಯವನ್ನು ಸ್ಥಾಪಿಸಿದ ಕೀರ್ತಿಯೂ ಮಮತಾ ಬ್ಯಾನರ್ಜಿ ಅವರಿಗೆ ಸಲ್ಲುತ್ತದೆ.

ಮಹಾ ಮಳೆ ಮತ್ತು ಭೂಕುಸಿತದಿಂದ 32 ಜನ ಪ್ರಾಣ ಕಳೆದುಕೊಂಡ ಉತ್ತರ ಬಂಗಾಳದಲ್ಲಿ ದೀದಿ ಇಂದು ಸಾರ್ವಜನಿಕ ಸಂಪರ್ಕ ಸಭೆ ನಡೆಸಿದರು.

ದೇವಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಲಿದೆ, ಆದರೆ ದೇವಾಲಯ ನಿರ್ಮಾಣಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಇಂದಿರಾ, ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್!

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ನೀವು ಮಿತಿ ಮೀರಿದ್ದೀರಿ: ಕನ್ನಡದಲ್ಲೇ ಎಚ್ಚರಿಕೆ ಕೊಟ್ಟ ರಶ್ಮಿಕಾ; ಸಂಕಷ್ಟದ ಸಮಯದಲ್ಲಿ ಕನ್ನಡವೇ ಬೇಕಾಯ್ತಾ? ಎಂದ ನೆಟ್ಟಿಗರು!

SCROLL FOR NEXT