ನೌಕರರಿಗೆ ಕಾರು ಉಡುಗೊರೆಕೊಟ್ಟ ಉದ್ಯಮಿ ಭಾಟಿಯಾ 
ದೇಶ

ಸತತ 3ನೇ ವರ್ಷವೂ ಸಿಬ್ಬಂದಿಗೆ ದೀಪಾವಳಿಯ ಭರ್ಜರಿ ಉಡುಗೊರೆ; ಉದ್ಯಮಿ MK Bhatia ನಡೆ ವೈರಲ್

ಔಷಧ ಹಾಗೂ ಕಾಸ್ಮೆಟಿಕ್ ತಯಾರಿಕಾ ಕಂಪನಿ ಮಿಟ್ಸ್ ಕಾರ್ಟ್ ಮಾಲೀಕ ಎಂ.ಕೆ ಭಾಟಿಯಾ ತಮ್ಮ ಸಂಸ್ಥೆಯ ನೌಕರರಿಗೆ ಈ ಬಾರಿಯೂ ದುಬಾರಿ ಕಾರು ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಚಂಡೀಗಢ: ಖ್ಯಾತ ಉದ್ಯಮಿ ಹಾಗೂ Mitskart ಸಂಸ್ಥೆಯ ಮಾಲೀಕ ಎಂಕೆ ಭಾಟಿಯಾ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ತಮ್ಮ ಸಂಸ್ಥೆಯ ಸಿಬ್ಬಂದಿಗೆ ಎಸ್ ಯುವಿ ಕಾರುಗಳ ಉಡುಗೊರೆ ನೀಡಿದ್ದಾರೆ.

ಹೌದು.. ಔಷಧ ಹಾಗೂ ಕಾಸ್ಮೆಟಿಕ್ ತಯಾರಿಕಾ ಕಂಪನಿ ಮಿಟ್ಸ್ ಕಾರ್ಟ್ ಮಾಲೀಕ ಎಂ.ಕೆ ಭಾಟಿಯಾ ತಮ್ಮ ಸಂಸ್ಥೆಯ ನೌಕರರಿಗೆ ಈ ಬಾರಿಯೂ ದುಬಾರಿ ಕಾರು ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಈ ಸಲ ದೀಪಾವಳಿ ಹಬ್ಬಕ್ಕೆ ಅವರು ತಮ್ಮ 12 ಜನ ನೌಕರರಿಗೆ ವಿವಿಧ ಬಣ್ಣದ ಟಾಟಾ ಪಂಚ್ (TATA Punch) ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದುವರೆಗೆ ಅವರು ತಮ್ಮ 51 ನೌಕರರಿಗೆ ಎಸ್ ಯುವಿ ಕಾರುಗಳ ಉಡುಗೊರೆ ನೀಡಿದ್ದಾರೆ.

ಉದ್ಯಮದೊಂದಿಗೆ ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿರುವ ಭಾಟಿಯಾ ಹರಿಯಾಣದ ಪಂಚಕುಲಾದಲ್ಲಿ ಮಿಟ್ಸ್‌ಕಾರ್ಟ್ ಎಂಬ ಕಂಪನಿ ಹೊಂದಿದ್ದಾರೆ. ಪ್ರತಿ ಸಲ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆಗಳನ್ನು ನೀಡುವ ಪರಿಪಾಠ ಹೊಂದಿದ್ದಾರೆ.

ಅದೇ ರೀತಿ ಈ ಬಾರಿ ಸಂಸ್ಥೆಯ ಉದ್ಯೋಗಿಗಳನ್ನು ಕಾರ್ ಷೋರೂಮ್‌ಗೆ ಕರೆದೊಯ್ದು ಹೊಸ ಕಾರುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಕಾರು ಸ್ವೀಕರಿಸಿದ ಸಿಬ್ಬಂದಿ ಷೋರೂಮ್‌ನಿಂದ ಕಚೇರಿವರೆಗೂ ಹೊಸ ಕಾರುಗಳನ್ನು ಚಲಾಯಿಸಿಕೊಂಡು ಜಾಥಾ ರೀತಿ ಮಾಡಿ ಸಂಭ್ರಮಿಸಿದ್ದಾರೆ.

ಸಂಸ್ಥೆಗೆ 50 ವರ್ಷ

ತಮ್ಮ ಸಂಸ್ಥೆ ನಿರ್ಮಾಣವಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಭಾಟಿಯಾ ಸಿಬ್ಬಂದಿಗೆ ಕಾರುಗಳನ್ನು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾಟಿಯಾ, 'ಸಿಬ್ಬಂದಿಗೆ ಕಾರು ಕೊಟ್ಟೆನೆಂದು ಪ್ರಚಾರ ಪಡೆದುಕೊಳ್ಳೋದು ನಮ್ಮ ಉದ್ದೇಶವಲ್ಲ. ನಮ್ಮ ಸಂಸ್ಥೆಗೆ ನೌಕರರೇ ಜೀವಾಳ. ಅವರ ಶ್ರಮವನ್ನು ಗುರುತಿಸಿ ಮತ್ತಷ್ಟು ಅವರನ್ನು ಉತ್ತೇಜಿಸುವುದೇ ನಮ್ಮ ಗುರಿ. ಸಿಬ್ಬಂದಿ ಸಂತುಷ್ಟವಾಗಿದ್ದರೆ ಅದು ಸಂಸ್ಥೆ ಶ್ರೇಯೋಭಿವೃದ್ಧಿಗೆ ಸಹಕಾರಿ ಎಂದು ಹೇಳಿದ್ದಾರೆ.

'ನನ್ನ ಸಿಬ್ಬಂದಿಗಳು ನನ್ನ ಔಷಧ ಕಂಪನಿಗಳ ಬೆನ್ನೆಲುಬು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮರ್ಪಣೆ ನಮ್ಮ ಯಶಸ್ಸಿನ ಅಡಿಪಾಯ. ಅವರ ಪ್ರಯತ್ನಗಳನ್ನು ಗುರುತಿಸುವುದು ಮತ್ತು ಅವರನ್ನು ಪ್ರೇರೇಪಿಸುವುದು ನನ್ನ ಏಕೈಕ ಗುರಿ - ಅವರನ್ನು ಪ್ರೇರೇಪಿಸುವುದು ಮತ್ತು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವುದು ನನ್ನ ಅಭಿಲಾಶೆಯಾಗಿದೆ. ತಂಡ ಸಂತೋಷವಾಗಿದ್ದಾಗ "ಕಂಪನಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಧುನಿಕ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಪ್ರೇರಣೆಯ ಮಾನದಂಡ' ಎಂದು ಭಾಟಿಯಾ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್