ಸ್ವೀಟ್ ಅಂಗಡಿ ಮಾಲೀಕನ ಜೊತೆ ರಾಹುಲ್ ಗಾಂಧಿ 
ದೇಶ

ಜಲೇಬಿ, ಬೇಸನ್ ಲಡ್ಡು ತಯಾರಿಸಿದ ರಾಹುಲ್ ಗಾಂಧಿ: ವಿಪಕ್ಷ ನಾಯಕನಿಗೆ ಸ್ವೀಟ್ ಅಂಗಡಿ ಮಾಲೀಕ ನೀಡಿದ ಸಲಹೆ ಏನು ಗೊತ್ತೆ?

ಈ ವೇಳೆ ಮಾಲೀಕ ಸುಶಾಂತ್ ಜೈನ್, ರಾಹುಲ್ ಗಾಂಧಿಗೆ, ನೀವು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಇದ್ದೀರಿ, ನೀವು ಬೇಗ ಮದುವೆಯಾಗಿ, ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ.

ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 235 ವರ್ಷ ಹಳೆಯ ದೆಹಲಿ ಬೇಕರಿಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ದೆಹಲಿಯ ಐತಿಹಾಸಿಕ ಗಂಟೆವಾಲ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಕೆಲ ಸಿಹಿ ತಿನಿಸುಗಳನ್ನು ಕೈಯಾರೆ ಮಾಡಿದ್ದಾರೆ. ಇಷ್ಟೇ ಅಲ್ಲ ಮಾಲೀಕರ ಜೊತೆಗಿನ ಮಾತುಕತೆ ವಿಡಿಯೋಗಳು ಇದೀಗ ಸದ್ದು ಮಾಡುತ್ತಿದೆ.

ಈ ವೇಳೆ ಅಂಗಡಿ ಮಾಲೀಕ ಸುಶಾಂತ್‌ ಜೈನ್‌, ರಾಹುಲ್‌ ಜಿ ಬೇಗ ಮದ್ವೆ ಆಗಿ, ನಿಮ್ಮ ಮದ್ವೆಗೆ ಸಿಹಿ ತಿಂಡಿ ಆರ್ಡರ್‌ ಪಡೆಯಲು ನಾವು ಕಾಯ್ತಿದ್ದೇವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಜಿಲೇಬಿ ಸೇರಿದಂತೆ ಕೆಲ ಸಿಹಿ ತಿನಿಸುಗಳನ್ನು ತಯಾರಿಸಿದ್ದಾರೆ.

ಈ ವೇಳೆ ಮಾಲೀಕ ಸುಶಾಂತ್ ಜೈನ್, ರಾಹುಲ್ ಗಾಂಧಿಗೆ, ನೀವು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಇದ್ದೀರಿ, ನೀವು ಬೇಗ ಮದುವೆಯಾಗಿ, ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ.

ಸುಶಾಂತ್ ಜೈನ್ ಮಾತುಗಳನ್ನು ಕೇಳಿಸಿಕೊಂಡ ರಾಹುಲ್ ಗಾಂಧಿ ನಕ್ಕಿದ್ದಾರೆ. ಆದರೆ ಬಳಿಕ ಹೇಳಿದ ಮಾತು, ರಾಹುಲ್ ಗಾಂಧಿ ಮುಖದಲ್ಲಿ ಮತ್ತಷ್ಟು ನಗು ತರಿಸಿತ್ತು. ಕಾರಣ ನೀವು ಮದುವೆಯಾಗಿ, ಕಾರಣ ನಿಮ್ಮ ಮದುವೆ ಸ್ವೀಟ್ಸ್ ಆರ್ಡರ್ ಪಡೆಯಲು ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ.

ದೆಹಲಿಯ ಗಂಟೆವಾಲ ಸ್ವೀಟ್ ಶಾಪ್‌ಗೆ ಸುದೀರ್ಘ ಇತಿಹಾಸವಿದೆ. ರಾಜೀವ್ ಗಾಂಧಿ ಕಾಲದಲ್ಲೇ ಈ ಸ್ವೀಟ್ ಶಾಪ್ ಅತ್ಯಂತ ಜನಪ್ರಿಯವಾಗಿತ್ತು. ಹಲವು ದಶಕಗಳಿಂದ ದೆಹಲಿಯಲ್ಲಿ ಸ್ವೀಟ್ಸ್ ವ್ಯವಹಾರದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ರಾಹುಲ್ ಗಾಂಧಿ ಭೇಟಿ ವೇಳೆ, ನಿಮ್ಮ ತಂದೆ ರಾಜೀವ್ ಗಾಂಧಿಗೆ ಜಿಲೇಬಿ ತುಂಬಾ ಇಷ್ಟದ ಸಿಹಿ ತಿಂಡಿಯಾಗಿತ್ತು.

ನೀವು ಟ್ರೈ ಮಾಡಿ, ಇದರ ಜೊತೆಗೆ ಅವರಿಗೆ ಬೇಸನ್ ಲಡ್ಡುಕೂಡ ತುಂಬಾ ಇಷ್ಟವಿತ್ತು ಎಂದಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಜಲೇಬಿ ಹಾಗೂ ಬೇಸನ್ ಲಡ್ಡು ಸ್ವೀಟ್ ಕೈಯಾರಿ ತಯಾರಿಸಿದ್ದಾರೆ. ಸ್ವೀಟ್ ಶಾಪ್ ಮಾಲೀಕ ಹಾಗೂ ಚೆಫ್ ಮಾರ್ಗದರ್ಶನದಲ್ಲಿ ಸ್ವೀಟ್ಸ್ ತಯಾರಿಸಿದ್ದಾರೆ. ಇಷ್ಟೇ ಅಲ್ಲ ಜಿಲೇಬಿ ಹಾಗೂ ಬೇಸನ್ ಲಡ್ಡು ಖರೀದಿಸಿದ್ದಾರೆ.

ರಾಹುಲ್ ಗಾಂಧಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ವೀಟ್ ಶಾಪ್ ಭೇಟಿಯ ವಿಡಿಯೋ ಹಂಚಿಕೊಂಡಿದ್ದಾರೆ. ಶತಮಾನಗಳ ಹಳೆಯ ಸ್ವೀಟ್ ಶಾಪ್‌ನಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸಿದ್ದೇನೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಾಪ್‌ಗೆ ಬೇಟಿ ನೀಡಿ ಸ್ವೀಟ್ಸ್ ತಯಾರಿಸಿದ್ದೇನೆ. ಈ ಸ್ವೀಟ್ ಶಾಪ್‌ನಲ್ಲಿ ದಶಕಗಳ ಹಿಂದೆ ಇದ್ದ ಅದೇ ಸ್ವಾದ, ಅದೇ ಸಿಹಿ, ಅದೇ ರುಚಿ ಈಗಲೂ ಇದೆ. ಸಾಂಪ್ರದಾಯಿಕ ರೀತಿಯ ತಯಾರಿಕೆ, ವಿಶೇಷ ಖಾದ್ಯಗಳು ಈ ಶಾಪ್ ಜೊತೆಗಿನ ಸಂಬಂಧ ಮತ್ತಷ್ಟುಗಟ್ಟಿಗೊಳಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್‌ ಪಂದ್ಯ, ರಾಜ್ಯ ಸಚಿವ ಸಂಪುಟದ ಒಪ್ಪಿಗೆ? ಗೃಹ ಇಲಾಖೆಗೆ ಭದ್ರತೆಯ ಹೊಣೆ!

2ನೇ ಟಿ20: 51 ರನ್ ಗಳ ಅಂತರದಿಂದ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ! ಅನಗತ್ಯ ದಾಖಲೆ ಬರೆದ ಅರ್ಷದೀಪ್

ಸಿಎಂ ಸಿದ್ದರಾಮಯ್ಯರ ವಿಮಾನ ಪ್ರಯಾಣ: 'ರಾಜ್ಯದ ಬೊಕ್ಕಸ'ದಿಂದ ಆದ ಖರ್ಚು ಎಷ್ಟು ಗೊತ್ತಾ?

ಟ್ರಂಪ್ ಗೆ ಮೋದಿ ದೂರವಾಣಿ ಕರೆ: ಮಹತ್ವದ ಚರ್ಚೆ!

KSCA ಗೆ ಹೊಸ ಸದಸ್ಯರ ಸೇರ್ಪಡೆ: ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ- ವೆಂಕಟೇಶ್ ಪ್ರಸಾದ್

SCROLL FOR NEXT