ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಟೋಲ್ ಪ್ರತಿಭಟನೆ 
ದೇಶ

ದೀಪಾವಳಿ ಬೋನಸ್ ಕೊಟ್ಟಿಲ್ಲ: ವಾಹನಗಳ ಫ್ರೀಯಾಗಿ ಬಿಟ್ಟ ಟೋಲ್ ಸಿಬ್ಬಂದಿ! Video Viral

ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇ ನ ಫತೇಹಾಬಾದ್ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಟೋಲ್ ಪ್ಲಾಜಾ ಮಾಲೀಕತ್ವ ಹೊಂದಿರುವ ಶ್ರೀ ಸೈನ್ & ದಾತಾರ್ ಕಂಪನಿ ತನ್ನ ಸಿಬ್ಬಂದಿಗಳಿಗೆ ಕೇವಲ 1100 ರೂ ಬೋನಸ್ ನೀಡಿತ್ತು.

ನವದೆಹಲಿ: ಮಾಲೀಕ ಕೊಟ್ಟ ಅಲ್ಪ ಪ್ರಮಾಣದ ದೀಪಾವಳಿ ಬೋನಸ್ ಗೆ ಅಸಮಾಧಾನಗೊಂಡ ಟೋಲ್ ಬೂತ್ ಸಿಬ್ಬಂದಿ ಎಲ್ಲ ವಾಹನಗಳನ್ನೂ ಫ್ರೀಯಾಗಿ ಬಿಟ್ಟ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇ ನ ಫತೇಹಾಬಾದ್ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಟೋಲ್ ಪ್ಲಾಜಾ ಮಾಲೀಕತ್ವ ಹೊಂದಿರುವ ಶ್ರೀ ಸೈನ್ & ದಾತಾರ್ ಕಂಪನಿ ತನ್ನ ಸಿಬ್ಬಂದಿಗಳಿಗೆ ಕೇವಲ 1100 ರೂ ಬೋನಸ್ ನೀಡಿತ್ತು.

ಆದರೆ ಹೆಚ್ಚಿನದನ್ನು ನಿರೀಕ್ಷಿಸಿದ್ದ ಸಿಬ್ಬಂದಿಗಳು ಅಲ್ಪ ಪ್ರಮಾಣದ ಬೋನಸ್ ನಿಂದಾಗಿ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಮಾಲೀಕರಿಗೆ ಮನವಿ ಮಾಡಿದರೂ ಅದರಿಂದ ಪ್ರಯೋಜನವಾಗಿರಲಿಲ್ಲ.

ಹೀಗಾಗಿ ಆಕ್ರೋಶಗೊಂಡ ಟೋಲ್ ಸಿಬ್ಬಂದಿ ಫತೇಹಾಬಾದ್ ಟೋಲ್ ಪ್ಲಾಜಾದ ಎಲ್ಲ ಟೋಲ್ ಗೇಟ್ ಗಳನ್ನು ತೆರೆದು ಎಲ್ಲ ವಾಹನಗಳನ್ನು ಫ್ರೀಯಾಗಿ ಬಿಟ್ಟಿದ್ದಾರೆ. ಈ ವೇಳೆ ಸಾವಿರಾರು ವಾಹನಗಳು ಫ್ರಿಯಾಗಿ ಟೋಲ್ ಬೂತ್ ಹಾದು ಹೋಗಿವೆ.

ಇತರೆ ಟೋಲ್ ಗಳಿಂದ ಸಿಬ್ಬಂದಿ ಕರೆಸಿದ ಮಾಲೀಕರು

ಸಿಬ್ಬಂದಿಗಳ ಧೋರಣೆಯಿಂದ ಬೆಚ್ಚಿದ ಟೋಲ್ ಮಾಲೀಕರು ಬೇರೆ ಟೋಲ್ ಗಳಿಂದ ಸಿಬ್ಬಂದಿ ಕರೆಸಿ ಟೋಲ್ ನಿರ್ವಹಣೆಗೆ ಮುಂದಾದರೂ ಈ ವೇಳೆ ಅವರನ್ನೂ ತಡೆದ ಪ್ರತಿಭಟನಾ ನಿರತ ಸಿಬ್ಬಂದಿ ಅವರು ಕೆಲಸ ಮಾಡದಂತೆ ತಡೆದಿದ್ದಾರೆ. ಇದು ವಿವಾದವನ್ನು ಮತ್ತಷ್ಟು ಹೆಚ್ಚಿಸಿತು.

ಪೊಲೀಸರ ದೌಡು, ಸಂಧಾನ

ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಟೋಲ್ ಸಿಬ್ಬಂದಿ ಮತ್ತು ಮಾಲೀಕರ ನಡುವೆ ಸಂಧಾನ ನಡೆಸಿ ವಿವಾದ ಅಂತ್ಯಗೊಳಿಸಲು ಪ್ರಯತ್ನಿಸಿದರು. ಟೋಲ್ ಅಧಿಕಾರಿಗಳು ಸಿಬ್ಬಂದಿಗೆ ಸುಧಾರಿತ ಪರಿಸ್ಥಿತಿಗಳ ಬಗ್ಗೆ ಭರವಸೆ ನೀಡಿದರು.

ಟೋಲ್ ಕಂಪನಿಯ ಹಿರಿಯ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ ಶೇಕಡಾ 10 ರಷ್ಟು ವೇತನ ಹೆಚ್ಚಳ ಭರವಸೆ ನೀಡಿದರು. ಈ ಭರವಸೆಯ ನಂತರ, ನೌಕರರು ಕೆಲಸವನ್ನು ಪುನರಾರಂಭಿಸಲು ಒಪ್ಪಿಕೊಂಡರು, ಎರಡು ಗಂಟೆಗಳ ಅಡಚಣೆಯ ನಂತರ ಸಾಮಾನ್ಯ ಟೋಲ್ ಕಾರ್ಯಾಚರಣೆ ಪುನಾರಂಭವಾಯಿತು.

ಶ್ರೀ ಸೈನ್ & ದಾತಾರ್ ಸೀಮಿತ ದೀಪಾವಳಿ ಬೋನಸ್‌ನ ನಿರ್ಧಾರಕ್ಕೆ ಬದ್ಧರಾಗಿದ್ದರು, ಮಾರ್ಚ್‌ನಲ್ಲಿ ಒಪ್ಪಂದವನ್ನು ವಹಿಸಿಕೊಂಡಿದೆ ಮತ್ತು ಆದ್ದರಿಂದ ಪೂರ್ಣ ವರ್ಷದ ಬೋನಸ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಜರಾತ್: SIR ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ, 73.73 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

5ನೇ T20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 30 ರನ್ ಗಳ ರೋಚಕ ಜಯ; 3-1 ಸರಣಿ ಗೆಲುವು

Load shedding In bangalore: ಡಿ.20 ರಂದು ನಗರದ ಈ ಏರಿಯಾಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ವಿದ್ಯುತ್ ಕಡಿತ

ಬೇಡಿಕೆ ಈಡೇರಿದೆ, ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ: ಡಿ.ಕೆ ಶಿವಕುಮಾರ್

1,000 ಕೋಟಿ ಬೆಟ್ಟಿಂಗ್ ಆ್ಯಪ್ ತನಿಖೆ: ಯುವರಾಜ್ ಸಿಂಗ್, ಉತ್ತಪ್ಪ, ಮಿಮಿ ಚಕ್ರವರ್ತಿ, ಸೋನು ಸೂದ್ ಆಸ್ತಿ ಮುಟ್ಟುಗೋಲು!

SCROLL FOR NEXT