ಸಾಂಕೇತಿಕ ಚಿತ್ರ 
ದೇಶ

ಬಿಹಾರ: ಹಳಿ ದಾಟುತ್ತಿದ್ದ ವೇಳೆ ರೈಲು ಹರಿದು ನಾಲ್ವರ ದುರ್ಮರಣ; ದೀಪಾವಳಿ ಜಾತ್ರೆ ಮುಗಿಸಿ ಮನೆಗೆ ಹೋಗುವಾಗ ದುರಂತ

ದೀಪಾವಳಿ ಪ್ರಯುಕ್ತ ತಮ್ಮ ಗ್ರಾಮದ ಬಳಿ ಆಯೋಜಿಸಿದ್ದ ಜಾತ್ರೆ ಮುಗಿಸಿಕೊಂಡು ರೈಲು ಹಳಿ ದಾಟಿ ವಾಪಸ್ ಮನೆ ಕಡೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಬರುವುದನ್ನು ಸರಿಯಾಗಿ ಗಮನಿಸದೇ ಹೋಗಿದ್ದರಿಂದ ಘಟನೆ ಸಂಭವಿಸಿದೆ.

ಬೇಗುಸರಾಯ್: ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ತಾಯಿ, ಮಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬೇಗುಸರಾಯ್ ಜಿಲ್ಲೆಯ ಭರೌನಿ–ಕತಿಹಾರ್ ರೈಲು ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎಂದು ಸಾಹೇಬ್‌ಪುರ ಕಮಲ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮೃತರನ್ನು ರಾಹುವಾ ಎಂಬ ಹಳ್ಳಿಯ ರೀಟಾ ದೇವಿ (40) ಮತ್ತು ಅವರ ಮಗಳು ರೋಶನಿ ಕುಮಾರಿ (14) ಹಾಗೂ ಅದೇ ಊರಿನವರಾದ ಆರೋಹಿ (7) ಹಾಗೂ ಧರ್ಮದೇವ್ ಮೆಹತೋ (36) ಎಂದು ಗುರುತಿಸಲಾಗಿದೆ.

ಈ ನಾಲ್ವರೂ ದೀಪಾವಳಿ ಪ್ರಯುಕ್ತ ತಮ್ಮ ಗ್ರಾಮದ ಬಳಿ ಆಯೋಜಿಸಿದ್ದ ಜಾತ್ರೆ ಮುಗಿಸಿಕೊಂಡು ರೈಲು ಹಳಿ ದಾಟಿ ವಾಪಸ್ ಮನೆ ಕಡೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಬರುವುದನ್ನು ಸರಿಯಾಗಿ ಗಮನಿಸದೇ ಹೋಗಿದ್ದರಿಂದ ಘಟನೆ ಸಂಭವಿಸಿದೆ. ಮೃತದೇಹಗಳನ್ನು ಗುರುತಿಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar polls: ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ

Diwali : ಕ್ಯಾಲ್ಸಿಯಂ ಕಾರ್ಬೈಡ್ ಗನ್ ತಂದ ಆಪತ್ತು, 60 ಮಕ್ಕಳಿಗೆ ಗಾಯ; ಕಣ್ಣು ಕಳೆದುಕೊಂಡ 14 ಮಕ್ಕಳು! Video

ಅಮೆರಿಕ: ಡ್ರಗ್ಸ್‌ನ ಅಮಲಿನಲ್ಲಿ 'ಅಡ್ಡಾದಿಡ್ಡಿ'ಯಾಗಿ ಟ್ರಕ್ ಓಡಿಸಿದ ಭಾರತೀಯ ವಲಸಿಗ, ಮೂವರು ಸಾವು! Video

ದೇವಾಲಯದ ಎದುರು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ ಮೂತ್ರ ನೆಕ್ಕುವ ಶಿಕ್ಷೆ!

ಮೈಸೂರು: ಸಿಎಂ ತವರು ಕ್ಷೇತ್ರದಲ್ಲಿ ಅಕ್ರಮ ಲಿಂಗ ಪತ್ತೆ ಪರೀಕ್ಷೆ, ಹೆಣ್ಣು ಭ್ರೂಣ ಹತ್ಯೆ, ಐವರ ಬಂಧನ!

SCROLL FOR NEXT