ಅಮಿತ್ ಶಾ 
ದೇಶ

RJD ಬಿಹಾರವನ್ನು ಅಪಹರಣ, ಸುಲಿಗೆಯ ಕೇಂದ್ರವನ್ನಾಗಿ ಮಾಡಿದೆ: ಅಮಿತ್ ಶಾ

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಅಧಿಕಾರಕ್ಕೆ ಮರಳಿದರೆ ಮುಂದೆ ಬಿಹಾರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಬಹುದು ಎಂದು ಶಾ ಹೇಳಿದರು.

ಪಾಟ್ನಾ: ಲಾಲು ಪ್ರಸಾದ್ ನೇತೃತ್ವದ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ವಿರುದ್ಧದ ತಮ್ಮ ದಾಳಿಯನ್ನು ತೀಕ್ಷ್ಣಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಜೆಡಿ ಆಳ್ವಿಕೆಯಲ್ಲಿ ಬಿಹಾರದಲ್ಲಿ ಕೇವಲ ಒಂದು "ಉದ್ಯಮ" ಮಾತ್ರ ಪ್ರವರ್ಧಮಾನಕ್ಕೆ ಬಂದಿತು - ಅದು "ಅಪಹರಣ, ಸುಲಿಗೆ, ಸುಪಾರಿ ಹತ್ಯೆಗಳು ಮತ್ತು ಡಕಾಯಿತಿ" ಎಂದು ಆರೋಪಿಸಿದರು.

"ಆರ್‌ಜೆಡಿ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಎಲ್ಲಾ ಕೈಗಾರಿಕಾ ಘಟಕಗಳು ಮುಚ್ಚಲ್ಪಟ್ಟವು" ಎಂದು ಕೇಂದ್ರ ಗೃಹ ಸಚಿವರು ದೂರಿದರು.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಅಧಿಕಾರಕ್ಕೆ ಮರಳಿದರೆ ಮುಂದೆ ಬಿಹಾರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಬಹುದು ಎಂದು ಶಾ ಹೇಳಿದರು.

ನಳಂದ ಜಿಲ್ಲೆಯ ಬಿಹಾರ್‌ಶರೀಫ್‌ನಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಎನ್‌ಡಿಎನ ಉತ್ತಮ ಆಡಳಿತದ ದಾಖಲೆಯು ಬಿಹಾರದಲ್ಲಿ ಮತದಾನದ ಹಂತಗಳನ್ನು ಈಗಾಗಲೇ ಕಡಿಮೆ ಮಾಡಿದೆ ಎಂದು ತಿಳಿಸಿದರು.

"ಮುಂದಿನ ಬಾರಿ, ನಾವು ಅಧಿಕಾರಕ್ಕೆ ಮರಳಿದರೆ ಕೇವಲ ಒಂದು ಹಂತದಲ್ಲಿ ಚುನಾವಣೆಗಳು ನಡೆಯುತ್ತವೆ" ಎಂದು ಅಮಿತ್ ಶಾ ಹೇಳಿದರು.

ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿದ ಶಾ, ಅವರ ನಾಯಕತ್ವದಲ್ಲಿ ಎನ್‌ಡಿಎ ರಾಜ್ಯವನ್ನು 'ಜಂಗಲ್ ರಾಜ್' ಮತ್ತು ನಕ್ಸಲಿಸಂನ ಪಿಡುಗಿನಿಂದ ಮುಕ್ತಗೊಳಿಸಿದೆ ಎಂದರು.

"ಕೇಂದ್ರದಲ್ಲಿರುವ ನಮ್ಮ ಸರ್ಕಾರ ಇಡೀ ದೇಶವನ್ನು ನಕ್ಸಲ್ ಪಿಡುಗಿನಿಂದ ಮುಕ್ತಗೊಳಿಸಲು ದೃಢನಿಶ್ಚಯ ಹೊಂದಿದೆ" ಎಂದು ಶಾ ಪ್ರತಿಪಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಚರ್ಚೆಗೆ ಅಮಿತ್ ಶಾ ಉತ್ತರಿಸುತ್ತಾರೆ, ಆದರೆ...: ಕಿರಣ್ ರಿಜಿಜು

ಅಮೃತ್ ಭಾರತ್ ಯೋಜನೆಗೆ ವೇಗದ ಕೊರತೆ? ಕರ್ನಾಟಕದ 61 ರೈಲು ನಿಲ್ದಾಣಗಳಲ್ಲಿ 12 ಮಾತ್ರ ಮೇಲ್ದರ್ಜೆಗೆ