ಅಯೋಧ್ಯೆ ರಾಮ ಮಂದಿರ  
ದೇಶ

ರಾಮ ಮಂದಿರ ಧ್ವಜಾರೋಹಣ ತಾಲೀಮಿಗೆ ಸೇನಾ ಅಧಿಕಾರಿಗಳು ಸಾಥ್

ನವೆಂಬರ್ 25 ರಂದು ನಿಗದಿಯಾಗಿರುವ ಧ್ವಜಾರೋಹಣ ಸಮಾರಂಭಕ್ಕೆ ಸರಿಯಾದ ತರಬೇತಿ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದೇವಾಲಯ ಟ್ರಸ್ಟ್ ಸೇನೆಯಿಂದ ಸಹಾಯ ಕೋರಿದೆ.

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ಶಿಖರದ ಮೇಲೆ ಧ್ವಜಾರೋಹಣ ತಾಲೀಮಿಗೆ ಮಂಗಳವಾರ ಹಿರಿಯ ಸೇನಾ ಅಧಿಕಾರಿಗಳು ರಾಮ ಮಂದಿರ ಟ್ರಸ್ಟ್ ಜೊತೆ ಸೇರಿಕೊಂಡ ಸಹಾಯ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 25 ರಂದು ನಿಗದಿಯಾಗಿರುವ ಧ್ವಜಾರೋಹಣ ಸಮಾರಂಭಕ್ಕೆ ಸರಿಯಾದ ತರಬೇತಿ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದೇವಾಲಯ ಟ್ರಸ್ಟ್ ಸೇನೆಯಿಂದ ಸಹಾಯ ಕೋರಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

"ದೇವಾಲಯ ಟ್ರಸ್ಟ್‌ನ ಸಭೆ ನಡೆಸಲಾಯಿತು. ಸಭೆಯಲ್ಲಿ ಧ್ವಜಾರೋಹಣಕ್ಕೆ ಸಂಬಂಧಿಸಿದ ತಾಂತ್ರಿಕ ಸವಾಲುಗಳನ್ನು ಚರ್ಚಿಸಲಾಯಿತು" ಎಂದು ಅವರು ಹೇಳಿದರು.

ದೇವಾಲಯದ ಧ್ವಜವು 11 ಕಿಲೋಗ್ರಾಂಗಳಷ್ಟು ತೂಗುತ್ತದೆ, ಧ್ವಜಸ್ತಂಭವು 11 ಅಡಿ ಎತ್ತರವಿರುತ್ತದೆ ಮತ್ತು ಧ್ವಜವು 22 ಅಡಿ ಅಗಲ ಇದೆ ಎಂದು ಮಿಶ್ರಾ ತಿಳಿಸಿದರು.

ಸಮಾರಂಭವು ದೋಷರಹಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ನಿರಂತರ ತಾಲೀಮು ನಡೆಸಲಾಗುವುದು ಎಂದು ಅವರು ಹೇಳಿದರು.

"ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸೇನಾ ಅಧಿಕಾರಿಗಳು ವಿವರವಾದ ಸಲಹೆಯನ್ನು ನೀಡಿದ್ದಾರೆ ಮತ್ತು ರಾಮ ಮಂದಿರ ದೇವಾಲಯ ಟ್ರಸ್ಟ್ ಅವರ ಶಿಫಾರಸುಗಳನ್ನು ಕಾರ್ಯಗತಗೊಳಿಸುತ್ತದೆ. ರಾಮ ಮಂದಿರದ ಧ್ವಜವನ್ನು ಇಡೀ ಪ್ರಪಂಚ ಗಮನಿಸುತ್ತಿರುವುದರಿಂದ ನಾವು ಮಧ್ಯಪ್ರವೇಶಿಸುವುದಿಲ್ಲ" ಎಂದು ಮಿಶ್ರಾ ಹೇಳಿದರು.

ದೇವಾಲಯ ಸಂಕೀರ್ಣದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲು ಸುಮಾರು 8,000 ಅತಿಥಿಗಳಿಗೆ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿರ್ಬಂಧಗಳ ಭೀತಿ: ಭಾರತಕ್ಕೆ ರಷ್ಯಾ ಕಚ್ಚಾ ತೈಲ ತರುತ್ತಿದ್ದ ಟ್ಯಾಂಕರ್ ದಿಢೀರ್ ಪಥ ಬದಲು!

'ಏಳು ಹೊಚ್ಚ ಹೊಸ ವಿಮಾನಗಳನ್ನು ಹೊಡೆದುರುಳಿಸಲಾಯಿತು, ಭಾರತ-ಪಾಕ್ ಯುದ್ಧ ತಪ್ಪಿಸಿದ್ದು ನಾನೇ' : ಟ್ರಂಪ್ ಪುನರುಚ್ಛಾರ

ಅಲ್ ಖೈದಾ ಜೊತೆ ನಂಟು ಹೊಂದಿದ್ದ ಪುಣೆ ಟೆಕ್ಕಿ ಬಂಧನ; ಈತನಿಗೆ ಬಿನ್ ಲ್ಯಾಡನ್ನೇ ಆದರ್ಶ ವ್ಯಕ್ತಿ!

India vs Australia, 1st T20I: ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ; ನಿತೀಶ್ ಕುಮಾರ್ ರೆಡ್ಡಿ ಔಟ್, ಕುಲದೀಪ್ ಯಾದವ್‌ಗೆ ಸ್ಥಾನ!

'ರೂಬಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಹಿಮೇಶ್ ರೇಶಮಿಯಾ ಎಂಟ್ರಿ

SCROLL FOR NEXT